ಪಾವೂರು : ಗ್ರಾಮೀಣ ಭಾಗದ ಜನತೆ ಕೊರೊನಾ ಲಾಕ್ ಡೌನ್ ನಿಂದ ತತ್ತರಿಸಿ ಹೋಗಿದ್ದಾರೆ. ಇಂತಹ ಜನರಿಗೆ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ, ದೇರಳಕಟ್ಟೆ ವಿಧ್ಯಾರತ್ನ ಅಂಗ್ಲ ಮಾಧ್ಯಮ ಶಾಲಾ ನಿರ್ದೇಶಕರಾದ ಶ್ರೀ ರವಿಂದ್ರ ಶೆಟ್ಟಿ ಉಳಿದೊಟ್ಟು ಹಾಗೂ ಇನೋಳಿ ಶ್ರೀ ಸೋಮನಾಥ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಶ್ರೀ ಚಂದ್ರಹಾಸ್ ಪೂಂಜ ಕಿಲ್ಲೂರು ಗುತ್ತು ನೆರವಾಗಿದ್ದಾರೆ.

ಪಾವೂರು ಗ್ರಾಮದ ಕಿಲ್ಲೂರು ಪರಿಸರದಲ್ಲಿ 35 ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ಸಾಮಾನು ಕಿಟ್ಗಳನ್ನು ವಿತರಿಸಲಾಯಿತು, ರವೀಂದ್ರ ಶೆಟ್ಟಿಯವರು ಮಾತನಾಡಿ, ಕೊರೊನದಿಂದಾಗಿ ದೇಶ ಕಷ್ಟದಲ್ಲಿದೆ ನಾವೆಲ್ಲರೂ ಸರಕಾರದ ಆದೇಶದಂತೆ ಮನೆಯಲ್ಲಿ ಇದ್ದು ಕೊರೊನ ಹರಡದಂತೆ ನಮ್ಮನ್ನು ನಾವು ರಕ್ಷಿಸಿತ್ತಾ ಕೊರೊನದಿಂದ ದೇಶವನ್ನು ರಕ್ಷಿಸಿವ ಎಂದು ತಿಳಿಸಿದರು, ಇನೋಳಿ ಶ್ರೀ ಸೋಮನಾಥ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಚಂದ್ರಹಾಸ್ ಪೂಂಜ ಕಿಲ್ಲೂರು ಗುತ್ತು, ಪಾವೂರು ಪಂಚಾಯತ್ ಉಪಾಧ್ಯಕ್ಷರಾದ ದುಗ್ಗಪ್ಪ ಪೂಜಾರಿ, ಸದಸ್ಯರಾದ ವಾಮನ್ ರಾಜ್ ಪಾವೂರು, ಬಿ.ಜೆ.ಪಿ ಕೊಣಾಜೆ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಅಂಬ್ಲಮೊಗರು, ಬಿ.ಜೆ.ಪಿ ಕೊಣಾಜೆ ಶಕ್ತಿ ಕೇಂದ್ರದ ಕಾರ್ಯದರ್ಶಿ ವೇಣು ಗೋಪಾಲ್, ಸದಾಶಿವ ಆಚಾರ್ಯ ಹರೇಕಳ, ವಿಠಲ ಪೂಂಜ, ಕಿರಣ್ ಶೆಟ್ಟಿ, ದೇವಪ್ಪ ಪೂಜಾರಿ, ಲೋಹಿತ್, ಸದಾಶಿವ ಗುಂಪ ಕಲ್ಲು, ಲಕ್ಷ್ಮಣ ಸನೀಲ್, ಬಾಬು ಗುಂಪ ಕಲ್ಲು, ದಯನಂದ ಮುಂತಾದವರು ಉಪಸ್ಥಿತರಿದ್ದರು.