Praveen Nettaru’s murder case: ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ : ಹಿಂದೂ ಕಾರ್ಯಕರ್ತರಿಂದ ನಳೀನ್​ ಕುಮಾರ್​ ಕಟೀಲ್​ ವಾಹನ ಮುತ್ತಿಗೆ

ದಕ್ಷಿಣ ಕನ್ನಡ : Praveen Nettaru’s murder case: ಕರಾವಳಿಯಲ್ಲಿ ನಿನ್ನೆ ರಾತ್ರಿ ಹರಿದ ಬಿಜೆಪಿ ಯುವ ಮುಖಂಡನ ನೆತ್ತರು ಇಡಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬಿಜೆಪಿಯ ಸರ್ಕಾರವೇ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅಧಿಕಾರಿದಲ್ಲಿ ಇದ್ದರೂ ಸಹ ಬಿಜೆಪಿ ಯುವ ಮುಖಂಡನಿಗೆ ಭದ್ರತೆ ಸಿಗಲಿಲ್ಲ ಅಂದಮೇಲೆ ಸಾಮಾನ್ಯ ಜನತೆಯ ಕತೆಯೇನು ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲಿಯೂ ಮನೆ ಮಾಡಿದೆ. ರಾತ್ರಿ ಅಂಗಡಿ ಬಂದ್​ ಮಾಡಿ ಮನೆಗೆ ಬರಬೇಕಾಗಿದ್ದ ವ್ಯಕ್ತಿ ಈ ರೀತಿ ಶವವಾಗಿ ಮಲಗಿದರೆ ಯಾರ ಬಳಿ ನ್ಯಾಯ ಕೇಳುವುದು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ನಿನ್ನೆ ರಾತ್ರಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಮುಖಂಡ ಹಾಗೂ ಭಜರಂಗ ದಳ ನಾಯಕ ಪ್ರವೀಣ್​ ನೆಟ್ಟಾರು ಮೃತದೇಹವನ್ನು ಮೆರವಣಿಗೆ ಮೂಲಕ ಪುತ್ತೂರು ಸರ್ಕಾರಿ ಆಸ್ಪತ್ರೆಯಿಂದ ಬೆಳ್ಳಾರೆಗೆ ಕರೆ ತರಲಾಗಿದೆ. ದಾರಿಯುದ್ದಕ್ಕೂ ಹಿಂದೂ ಪರ ಸಂಘಟನಾ ಕಾರ್ಯಕರ್ತರು ಬೇಕೆ ಬೇಕೆ ನಮಗೆ ನ್ಯಾಯ ಬೇಕು, ಹಿಂದೂ ಕಾರ್ಯಕರ್ತನ ಕೊಲೆ ನ್ಯಾಯ ಕೊಡಿಸಿ, ಹಂತಕರನ್ನು ಶಿಕ್ಷಿಸಿ ಎಂಬ ಘೋಷಣೆಗಳು ಮೊಳಗಿದ್ದಾರೆ.

ಬೆಳ್ಳಾರೆಯ ಬಸ್​ ನಿಲ್ದಾಣದ ಸಮೀಪ ಬಿಜೆಪಿ ಯುವ ಮುಖಂಡ ಪ್ರವೀನ್​ ನೆಟ್ಟಾರೆ ಮೃತದೇಹದ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಅಂತಿಮ ದರ್ಶನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​, ಸಚಿವರಾದ ಅಂಗಾರ ಹಾಗೂ ಸುನೀಲ್​ ಕುಮಾರ್​ ಸೇರಿದಂತೆ ಇನ್ನೂ ಹಲವು ಬಿಜೆಪಿ ನಾಯಕರು ಆಗಮಿಸಿದ್ದರು. ಅಂತಿಮ ದರ್ಶನಕ್ಕೆ ಆಗಮಿಸಿದ್ದ ಬಿಜೆಪಿ ನಾಯಕರಿಗೆ ಮುತ್ತಿಗೆ ಹಾಕುವ ಮೂಲಕ ಹಿಂದೂ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

https://www.youtube.com/watch?v=R8og_fqKZ6U

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್​ ಕಾರಿಗೆ ಏಕಾ ಏಕಿ ಮುತ್ತಿಗೆ ಹಾಕಿದ ಹಿಂದೂ ಕಾರ್ಯಕರ್ತರು ಕಾರನ್ನು ಒಂದಿಂಚೂ ಚಲಿಸಲು ಬಿಡದೇ ಮುತ್ತಿಗೆ ಹಾಕಿದ್ದಾರೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಹಿಂದೂ ಕಾರ್ಯಕರ್ತರನ್ನು ಚದುರಿಸಿದ್ದಾರೆ.

ಇದನ್ನು ಓದಿ : Praveen Nettaru murder case: ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ : ಐವರು ಶಂಕಿತ ಆರೋಪಿಗಳು ವಶಕ್ಕೆ

ಇದನ್ನೂ ಓದಿ : Rahul Dravid: “ರಾಹುಲ್ ದ್ರಾವಿಡ್ ಅಲ್ಲ ರಾಹುಲ್ ‘ಡೇವಿಡ್’..” ದಿ ಗ್ರೇಟ್ ವಾಲ್ ಬಿಚ್ಚಿಟ್ಟ “ಹೆಸರು” ರಹಸ್ಯ

Praveen Nettaru’s murder case: Naleen Kumar Kateel’s car besieged

Comments are closed.