ಸೋಮವಾರ, ಏಪ್ರಿಲ್ 28, 2025
Homedistrict Newsprincipal stops students wearing hijab : ಹಿಜಬ್​ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ತಡೆದ...

principal stops students wearing hijab : ಹಿಜಬ್​ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ತಡೆದ ಪ್ರಾಂಶುಪಾಲ

- Advertisement -

ಉಡುಪಿ : ಕರಾವಳಿಯಲ್ಲಿ ಹಿಜಬ್​​ ಗಲಾಟೆ ಮುಗಿಯುವಂತೆ ಕಾಣುತ್ತಿಲ್ಲ. ಸಮವಸ್ತ್ರದ ಜೊತೆಯಲ್ಲಿ ಹಿಜಬ್​ ಕಡ್ಡಾಯಗೊಳಿಸಲು ಮುಂದಾಗುವವರು ಒಂದೆಡೆಯಾದರೆ ಇನ್ನು ಕೆಲವರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ.ಮುಸ್ಲಿಂ ವಿದ್ಯಾರ್ಥಿನಿಯರ ಈ ಹಿಜಬ್​ ಹೋರಾಟ ದಿನಕ್ಕೊಂದು ತಿರುವು ಪಡೆಯುತ್ತಿದೆ. ನಿನ್ನೆಯಷ್ಟೇ ಕುಂದಾಪುರದ ಕಾಲೇಜು ವಿದ್ಯಾರ್ಥಿಗಳು ಕೇಸರು ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದರು. ಇಂದು ಕೂಡ ಕುಂದಾಪುರದ ಸರ್ಕಾರಿ ಜೂನಿಯರ್​ ಕಾಲೇಜಿನಲ್ಲಿ ಹಿಜಬ್​ ಧರಿಸಿ ವಿದ್ಯಾರ್ಥಿನಿಯರು ( principal stops students wearing hijab ) ಕಾಲೇಜಿಗೆ ಆಗಮಿಸಿದ್ದಾರೆ.

ಕಾಲೇಜಿಗೆ ಹಿಜಬ್​ ಧರಿಸಿ ಆಗಮಿಸಿದ ವಿದ್ಯಾರ್ಥಿನಿಯರನ್ನು ತಡೆದ ಕಾಲೇಜು ಪ್ರಾಂಶುಪಾಲರು ಹಿಜಬ್​ನ್ನು ತೆಗೆದು ತರಗತಿಯೊಳಗೆ ಕಾಲಿಡುವಂತೆ ಸೂಚಿಸಿದ್ದಾರೆ. ಆದರೆ ಪ್ರಾಂಶುಪಾಲರ ತಾಕೀತಿಗೆ ನಿರಾಕರಿಸಿದ ವಿದ್ಯಾರ್ಥಿನಿಯರು ನಾವು ಹಿಜಬ್​ ಧರಿಸಿಯೇ ಕಾಲೇಜಿಗೆ ಬರುವುದಾಗಿ ಹೇಳಿದ್ದಾರೆ. ಈ ನಡುವೆ ಪ್ರಾಂಶುಪಾಲರು ಹಾಗೂ ಮುಸ್ಲಿಂ ವಿದ್ಯಾರ್ಥಿನಿಯರ ನಡುವೆ ಮಾತಿಗೆ ಮಾತು ಬೆಳೆದಿದೆ.

ಸರ್ಕಾರದ ಆದೇಶವೇನೇ ಇರಲಿ. ನಾವು ಕಾಲೇಜಿಗೆ ಹಿಜಬ್​ ಧರಿಸಿಯೇ ಬರುತ್ತೇವೆ. ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುವುದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಅದರೆ ನಾವು ಮಾತ್ರ ಹಿಜಬ್​ ಧರಿಸಿಯೇ ಕಾಲೇಜಿಗೆ ಬರುತ್ತೇವೆ ಎನ್ನುವುದು ಮುಸ್ಲಿಂ ವಿದ್ಯಾರ್ಥಿನಿಯರ ವಾದವಾಗಿದೆ. ಆದರೆ ವಿದ್ಯಾರ್ಥಿನಿಯರ ಈ ಬೇಡಿಕೆಗೆ ನಿರಾಕರಿಸಿದ ಕಾಲೇಜು ಪ್ರಾಂಶುಪಾಲರು ಕಾಲೇಜುಗಳಲ್ಲಿ ಹಿಜಬ್​ ಹಾಗೂ ಕೇಸರಿ ಶಾಲು ಧರಿಸದಂತೆ ಸರ್ಕಾರದ ಆದೇಶವೇ ಇದೆ. ಹೀಗಾಗಿ ನಾವು ಇದಕ್ಕೆಲ್ಲ ಅನುಮತಿ ನೀಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಇನ್ನು ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ಇಂದು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಧರ್ಮದ ಆಚರಣೆ ಮಾಡಲು ನಿಮಗೆ ದೇವಸ್ಥಾನ, ಮಸೀದಿ ಹಾಗೂ ಚರ್ಚ್​ ಇದೆ. ಅಲ್ಲಿ ನೀವು ನಿಮ್ಮ ಧರ್ಮದ ಆಚರಣೆಗಳನ್ನು ಮಾಡಿ. ಅದನ್ನು ಬಿಟ್ಟು ಕಾಲೇಜುಗಳಲ್ಲಿ ನಿಮ್ಮ ಧರ್ಮವನ್ನು ತೋರಿಸುವುದು ಸರಿಯಲ್ಲ. ಇದಕ್ಕೆ ಸರ್ಕಾರವು ಅನುಮತಿ ನೀಡುವದೂ ಇಲ್ಲ. ಈ ಬಗ್ಗೆ ಆಯಾ ಶಾಲೆಯ ಮುಖ್ಯಸ್ಥರು ಗಮನ ಹರಿಸಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಇದನ್ನು ಓದಿ : Garbage Cess : ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ ನಿಮ್ಮ ಮನೆ ಕಸ: ಬೆಂಗಳೂರಿನಲ್ಲಿ ಸದ್ಯದಲ್ಲೇ ಗಾರ್ಬೇಜ್ ಸೆಸ್

ಇದನ್ನೂ ಓದಿ : BBMP Renovation : ಬಿಬಿಎಂಪಿ ಚುನಾವಣೆಗೆ ಭರದ ಸಿದ್ಧತೆ: ಕಟ್ಟಡ ನವೀಕರಣಕ್ಕೆ ಪ್ಲ್ಯಾನ್ ಫೈನಲ್

principal stops students wearing hijab at the college gate udupi

RELATED ARTICLES

Most Popular