ಬುಧವಾರ, ಏಪ್ರಿಲ್ 30, 2025
Homedistrict NewsPanchayat Raj Engineering Office Siege :ಪರಿಹಾರ ನೀಡಲು ನಿರಾಕರಣೆ: ಧಾರವಾಡದ ಪಂಚಾಯತ್ ರಾಜ್ ಇಂಜಿನಿಯರಿಂಗ್...

Panchayat Raj Engineering Office Siege :ಪರಿಹಾರ ನೀಡಲು ನಿರಾಕರಣೆ: ಧಾರವಾಡದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿ ಸೀಝ್

- Advertisement -

ಧಾರವಾಡ :Panchayat Raj Engineering Office Siege : ಭಾರತದಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಮಾತು ಜನಜನಿತ. ಯಾರು ತಪ್ಪು ಮಾಡಿದರು ಸರಿಯಾದ ಸಾಕ್ಷ್ಯಾಧಾರಗಳಿದ್ದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬುದು ಹಲವು ಪ್ರಕರಣದಲ್ಲಿ ರುಜುವಾತು ಆಗಿದೆ. ಇದೀಗ ಭೂ ಸ್ವಾಧೀನ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಧಾರವಾಡದ ಪಂಚಾಯತ್ ರಾಜ್ ಇಂಜಿನೀಯರಿಂಗ್ ಕಚೇರಿಯನ್ನು ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಲಾಗಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ವಿರುಪಾಕ್ಷಪ್ಪ ಎಂಬ ರೈತನ ಜಮೀನನ್ನು 2012-13 ಕುಡಿಯೋ ನೀರಿನ ಕೆರೆ ನಿರ್ಮಾಣಕ್ಕಾಗಿ ಭೂ ಸ್ವಾಧೀನಗೊಳಿಸಲಾಗಿತ್ತು. 4 ಎಕರೆ 30 ಗುಂಟೆ ಜಮೀನಿಗೆ ಸಂಬಂಧಿಸಿದ್ದಂತೆ 78 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ನಿಗದಿಪಡಿಸಿತ್ತು.

ಸರಕಾರದ ಬೆಲೆ ನಿಗದಿ ವಿರುದ್ಧ ಪರಿಹಾರ ಕಡಿಮೆಯಾಗಿದೆ ಅಂತಾ ರೈತ ವಿರುಪಾಕ್ಷಪ್ಪ ಕೋರ್ಟ್ ಮೊರೆ ಹೋಗಿದ್ದರು. ವಿರೂಪಾಕ್ಷ ಸಲ್ಲಿಸಿದ ಅರ್ಜಿಯನ್ನು ಸಂಪೂರ್ಣ ವಿಚಾರಣೆ ನಡೆಸಿದ ಧಾರವಾಡದ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ 2.64 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಆದ್ರೆ ದುರಂತ ಅಂದ್ರೆ ನ್ಯಾಯಾಲಯ ಈ ಆದೇಶ ಮಾಡಿ ಒಂದು ವರ್ಷವಾದರೂ ಪಂಚಾಯತ್ ರಾಜ್ ಇಲಾಖೆ ಪರಿಹಾರ ನೀಡಿರಲಿಲ್ಲ. ಹೀಗಾಗಿ ಈ ಹಿನ್ನೆಲೆಯಲ್ಲಿ ಕಚೇರಿ ಜಪ್ತಿಗೆ ನ್ಯಾಯಾಲಯ ಆದೇಶಿಸಿತು.

ಆದೇಶದ ಹಿನ್ನೆಲೆಯಲ್ಲಿ ಧಾರವಾಡದ ಪಂಚಾಯತ್ ರಾಜ್ ಇಂಜಿನೀಯರಿಂಗ್ ಕಚೇರಿಯನ್ನು ನ್ಯಾಯಾಲಯದ ಸಿಬ್ಬಂದಿಗಳು ಜಪ್ತಿ ಮಾಡಿದರು. ಕಚೇರಿಯಲ್ಲಿದ್ದ ಕಂಪ್ಯೂಟರ್, ಪ್ರಿಂಟರ್, ಪೀಠೋಪಕರಣವನ್ನು ಜಪ್ತಿ ಮಾಡಲಾಯಿತು.

ಪಂಚಾಯತ್ ರಾಜ್ ಇಲಾಖೆ ಈ ಹಿಂದೆಯೇ ಕಾನೂನು ಬದ್ಧ ಪರಿಹಾರ ನೀಡುತ್ತಿದ್ದರೆ ಇಷ್ಟೆಲ್ಲಾ ಸಮಸ್ಯೆಯಾಗುತ್ತಿರಲಿಲ್ಲ. ನ್ಯಾಯಾಲಯದ ಆದೇಶದ ಬಳಿಕವಾದರೂ ಎಚ್ಚೆತ್ತುಕೊಳ್ಳುತ್ತಿದ್ದರೆ ಈ ರಾದ್ಧಾಂತ ನಡೆಯುತ್ತಿರಲಿಲ್ಲ. ಇನ್ನಾದರೂ ಅಧಿಕಾರಿಗಳು ಪರಿಹಾರ ನೀಡುವಲ್ಲಿ ಕ್ರಮ ವಹಿಸುತ್ತಾರ ಎಂದು ಕಾದುನೋಡಬೇಕಿದೆ.

ಇದನ್ನು ಓದಿ : cut CT Ravi’s tongue : ಸಿ.ಟಿ ರವಿ ನಾಲಗೆ ಕತ್ತರಿಸುತ್ತೇವೆ : ಸಿದ್ದರಾಮಯ್ಯ ಅಭಿಮಾನಿಗಳಿಂದ ವಾರ್ನಿಂಗ್​

ಇದನ್ನೂ ಓದಿ : HD Kumaraswamy challenge :ನಿನ್ನ ಆಸ್ತಿ ಎಷ್ಟು, ನಮ್ಮ ಆಸ್ತಿ ಎಷ್ಟು ಹೇಳು ಎಂದು ಶಾಸಕ ಪ್ರೀತಂ ಗೌಡಗೆ ಹೆಚ್​​ಡಿಕೆ ಸವಾಲ್​​

Refusal to provide compensation: Panchayat Raj Engineering Office Siege

RELATED ARTICLES

Most Popular