HD Kumaraswamy challenge :ನಿನ್ನ ಆಸ್ತಿ ಎಷ್ಟು, ನಮ್ಮ ಆಸ್ತಿ ಎಷ್ಟು ಹೇಳು ಎಂದು ಶಾಸಕ ಪ್ರೀತಂ ಗೌಡಗೆ ಹೆಚ್​​ಡಿಕೆ ಸವಾಲ್​​

ಹಾಸನ : HD Kumaraswamy challenge : ಹಾಸನ‌ ಜಿಲ್ಲೆಯ ಏಕೈಕ ಬಿ.ಜೆ.ಪಿ ಶಾಸಕ ಪ್ರೀತಂ ಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರ ಮತ್ತೆ ಮುಂದುವರಿದಿದೆ. ಹಾಸನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ನಿನ್ನ ಆಸ್ತಿ ಎಷ್ಟು, ನಮ್ಮ ಆಸ್ತಿ ಎಷ್ಟು ಹೇಳು ಎಂದು ಪ್ರೀತಂ ಗೌಡಗೆ ಸವಾಲು ಹಾಕಿದ್ದಾರೆ. ನಮಗೆ ಇ.ಡಿ ಮತ್ತು ಐಟಿ ಬಗ್ಗೆ ಭಯವಿಲ್ಲ. ನಾವು ರಾಜಮನೆತನದವರಲ್ಲ. ರಾಹುಲ್ ಗಾಂಧಿಯಿಂದ ಜೆಡಿಎಸ್ ಪಕ್ಷ ವನ್ನು ಬಿಜೆಪಿಯ ಬಿ ಟೀಂ ಅಂತ ಸಿದ್ದರಾಮಯ್ಯ ಹೇಳಿಸಿದ್ರು. ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಜೊತೆ ಕಳೆದ ಚುನಾವಣೆಯಲ್ಲಿ ಭಾಷಣ ಮಾಡಿಸಿದ್ರು. ಇದರಿಂದ ಕಳೆದ ಬಾರಿ ಪ್ರಕಾಶ್ ಸೋಲಬೇಕಾಯಿತು. ಅದರ ಪ್ರತಿಫಲದಿಂದ ನೀನು ಎಂಎಲ್ ಎ ಆಗಿರೋದು. ದುಡಿಮೆ ಮೇಲೆ ಎಮ್.ಎಲ್.ಎ ಆದ್ರಾ ಎಂದು ಶಾಸಕ ಪ್ರೀತಂ ಗೌಡಗೆ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಸ್ವಲ್ಪ ಗೊಂದಲ ಸೃಷ್ಟಿಯಾಗಿರೋದನ್ನು ಗಮನಿಸಿದ್ದೇನೆ ಎಂದು ಹೇಳಿದ ಕುಮಾರಸ್ವಾಮಿ ನಮ್ಮ ದೋಷಗಳಿದ್ದರೆ, ತಪ್ಪುಗಳಾಗಿದ್ದರೆ ತಿದ್ದಿಕೊಳ್ಳುತ್ತೇವೆ. ನಿಮ್ಮ ಮನೆಯ ಮಕ್ಕಳು ಮಾಡಿದ ತಪ್ಪನ್ನು ಕ್ಷಮಿಸ್ತಿರಲ್ವಾ. ಹಾಗೇ ನಮ್ಮ ತಪ್ಪುಗಳ ಕ್ಷಮಿಸಿ ಎಂದು ಹೆಚ್ಡಿಕೆ ಹೇಳಿದರು.

ಎಮರ್ಜೆನ್ಸಿ ಸಂದರ್ಭ ದೇವೇಗೌಡರು ಜೈಲಿಗೆ ಹೋಗಿದ್ದರು. ಆಗ ನಮ್ಮ ಕುಟುಂಬ ನಿರ್ವಹಣೆಗೆ ರೇವಣ್ಣ ಶಿಕ್ಷಣ ಮೊಟಕುಗೊಳಿಸಿದರು. ಹಳ್ಳಿಯ ನಡವಳಿಕೆ ರೇವಣ್ಣನದು ಎಂದ ಕುಮಾರಸ್ವಾಮಿ ರೇವಣ್ಣ ಒರಟುತನವನ್ನು ದೊಡ್ಡದಾಗಿ ಬಿಂಬಿಸಬಾರದು ಎಂದರು. 1996 ರಲ್ಲಿ ದೇವೇಗೌಡರು ಸಿಎಂ ಆಗಿದ್ದಾಗ ಏರ್ ಪೋರ್ಟ್ ಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಹಾಸನದ ಶ್ರೀಮಂತ ಜನ ಓಡಾಡಲಿ ಅಂತ ಏರ್ ಪೋರ್ಟ್ ಮಾಡಿದ್ದಲ್ಲ. ಬದಲಾಗಿ ಆಲೂಗಡ್ಡೆ, ಕಾಫಿ ವಿದೇಶಕ್ಜೆ ರಫ್ತು ಮಾಡಲಿ‌ ಅನ್ನೊದು ಅವರ ಉದ್ದೇಶ ಆಗಿತ್ತು ಎಂದು ಕುಮಾರಸ್ವಾಮಿ ಹೇಳಿದರು.

ರೈತರ ನೋವಿಗೆ ಸ್ಪಂದಿಸಬೇಕು ಅನ್ನೋದು ನಮ್ಮ ಭಾವನೆ. 180 ಕೋಟಿ ಹಣವನ್ನು ತೆಂಗು ಬೆಳೆಗಾರರಿಗೆ ಹಣ ನೀಡಿದ್ದೇವೆ. 56 ಕೋಟಿ ಚನ್ನರಾಯಪಟ್ಟಣ, ಅರಸೀಕೆರೆ ಗೆ ಕೊಟ್ಟಿದ್ದೇವೆ. ನೆಲಮಂಗಲ ದಿಂದ ಹಾಸನದವರೆಗೆ ಚತುಷ್ಪತ ರಸ್ತೆ, ಬೆಂಗಳೂರು – ಮೈಸೂರು ರೈಲ್ವೆ ಬ್ರಾಡ್ ಗೇಜ್ ಮಾಡಿದ್ದು ದೇವೇಗೌಡರು ಎಂದು ಹೇಳಿದ ಕುಮಾರಸ್ವಾಮಿ ಇವರ ಯೋಗ್ಯತೆಗೆ ಸಕಲೇಶಪುರ ಮಂಗಳೂರು ರಸ್ತೆ ಮಾಡೋಕೆ ಆಗಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಕೊಟ್ಟ ಹಣ ಬೇರೆ ಕಡೆ ವರ್ಗ ಮಾಡಿದ್ರು, ಇದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮಿಂದ ಅಭಿವೃದ್ಧಿ ಅಂದ್ರೆ ಏನು ಅಂತ ಕಲಿಯಬೇಕಿಲ್ಲ ಎಂದ ಕುಮಾರಸ್ವಾಮಿ, 70 ವರ್ಷ ದೇವೇಗೌಡರು ರಾಜಕೀಯ ಮಾಡಿದ್ದಾರೆ. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಕೋಟ್ಯಾಂತರ ರೂಪಾಯಿ ಹಣ ಮಾಡಬಹುದಿತ್ತು, ನಾವು ಮಾಡಲಿಲ್ಲ. ರೈತರ ಮಡಿಲಲ್ಲಿ ಬೆಳೆದಿದ್ದೇವೆ. ದೇವರನ್ನು ,ಜನರನ್ನು ನಂಬಿದ್ದೇವೆ. ನಿಮ್ಮಂತವರಿಂದ ರಾಜಕೀಯ ಮಾಡೋದನ್ನ ಕಲಿಯಬೇಕಿಲ್ಲ ಎಂದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನ ನಿಲ್ಲಿಸುತ್ತೇನೆಂದು ಹೇಳಿದ್ದೆ. ಜನರ ಭಾವನೆಗಳ ವಿರುದ್ದ ನಿರ್ಣಯ ತೆಗೆದುಕೊಳ್ಳೋದಿಲ್ಲ. ನಮ್ಮ ಕುಟುಂಬದಲ್ಲಿ ಯಾರೂ ನಮ್ಮನ್ನು ಬೇರ್ಪಡಿಸುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಸವಾಲು ಸ್ವೀಕರಿಸಿದ್ದೇವೆ. ಸಾಮಾನ್ಯ ಕಾರ್ಯಕರ್ತನ ಗೆಲ್ಲಿಸುವುದು ಮುಂದಿನ ಗುರಿ ಎಂದು ಇದೇ ಸಂದರ್ಭ ಕುಮಾರಸ್ವಾಮಿ ಹೇಳಿದರು. ಪ್ರಕಾಶಣ್ಣನ ಪತ್ನಿ ಕಣ್ಣೀರು ನೋಡಿ ದು:ಖ ಬಂತು. ಆದರೂ ಕಣ್ಣೀರು ಹಾಕಲಿಲ್ಲ ನನ್ ಕಣ್ಣೀರಿಗೆ ಮೊಸಳೆ ಕಣ್ಣೀರು ಅಂತಾರೆ. ಇನ್ನೂ ಕಣ್ಣಲ್ಲಿ ನೀರು ಹಾಕುವುದಿಲ್ಲ, ಎದೆಗಾರಿಕೆಯಿಂದ ಮಾತಾಡುತ್ತೇನೆ ಎಂದರು.

ಇದನ್ನು ಓದಿ : ICC T20 World Cup India Team: ಭಾರತ ಟಿ20 ವಿಶ್ವಕಪ್ ತಂಡದಲ್ಲೊಬ್ಬ “ಕೋಟಾ” ಪ್ಲೇಯರ್

ಇದನ್ನೂ ಓದಿ : cut CT Ravi’s tongue : ಸಿ.ಟಿ ರವಿ ನಾಲಗೆ ಕತ್ತರಿಸುತ್ತೇವೆ : ಸಿದ್ದರಾಮಯ್ಯ ಅಭಿಮಾನಿಗಳಿಂದ ವಾರ್ನಿಂಗ್​

HD Kumaraswamy challenge to MLA Pritam Gowda

Comments are closed.