ಮಂಗಳೂರು : ಸುಯೇಝ್ ಪ್ರಾಜೆಕ್ಸ್ಟ್ ನಲ್ಲಿ ಎಕ್ಸಿಕ್ಯೂಟಿವ್ ಕಾರ್ಪೋರೇಟ್ ಕಮ್ಯುನಿಕೇಶನ್ (ಪಿಆರ್) ಆಗಿರುವ ರೇಶ್ಮಾ ಜಿ. ಉಳ್ಳಾಲ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಜೋಗನ್ ಶಂಕರ್ ಅವರ ಮಾರ್ಗದರ್ಶನದಲ್ಲಿ ‘ಕರಾವಳಿಯಲ್ಲಿ ತೃತೀಯ ಲಿಂಗಿಗಳ ಬದುಕು ಮತ್ತು ಜೀವನ ಸಂಗ್ರಾಮ ಸಾಮಾಜಿಕ ಅಧ್ಯಯನ’ ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧನಕ್ಕೆ ಮಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ರೇಶ್ಮಾ ಜಿ.ಉಳ್ಳಾಲ್ ಅವರು 15 ವರ್ಷಗಳ ಕಾಲ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಮುಖವಾಗಿ ಜನವಾಹಿನಿ ದಿನಪತ್ರಿಕೆ, ಸಂಯುಕ್ತ ಕರ್ನಾಟಕ, ಜನಶ್ರೀ ಸುದ್ದಿವಾಹಿನಿ ಹಾಗೂ ಈಟಿವಿ ಯಲ್ಲಿ ಹಿರಿಯ ವರದಿಗಾರರಾಗಿಯೂ ದುಡಿದಿದ್ದಾರೆ. ತೃತೀಯ ಲಿಂಗಿಗಳ ಬದುಕಿನ ಹೋರಾಟದ ಬಗ್ಗೆಯೂ ಹಲವು ಬಾರಿ ಧ್ವನಿ ಎತ್ತಿದ್ದಾರೆ. ಹಲವರು ತರಬೇತಿ ಶಿಬಿರಗಳಲ್ಲಿಯೂ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದಾರೆ. ಇವರು ಪತ್ರಕರ್ತ ರಾಮಕೃಷ್ಣ ಆರ್. ಅವರ ಪತ್ನಿ ಹಾಗೂ ಗಂಗಾಧರ ಶೆಟ್ಟಿ ಮತ್ತು ನಳಿನಾಕ್ಷಿ ದಂಪತಿಗಳ ಪುತ್ರಿಯಾಗಿದ್ದಾರೆ.