ವಿಟ್ಲ : ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಎಸ್ಎಲ್ ವಿ ಬುಕ್ ಏಜೆನ್ಸಿ ಧಾವಿಸಿದೆ. ಎಸ್ಎಲ್ ವಿ ಬುಕ್ ಏಜೆನ್ಸಿ ಮಾಲಕರಾದ ದಿವಾಕರ ದಾಸ್ ನೇರ್ಲಾಜೆ ಅವರ ವತಿಯಿಂದ ಮೈರ್ ಭಾಗದ ಕುಟುಂಬಗಳಿಗೆ ಸುಮಾರು 200 ಕಿಟ್ ಗಳನ್ನು ವಿತರಿಸಲಾಯಿತು.

ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ವಿಟ್ಲ, ಇಡ್ಕಿದು ಹಾಗೂ ಕಂಬಳಬೆಟ್ಟು ಸುತ್ತಮುತ್ತಲಿನ ಕುಟುಂಬಗಳಿಗೆ ಹಾಗೂ ಪತ್ರಕರ್ತರೂ ಸೇರಿದಂತೆ 200 ಕಿಟ್ ಗಳನ್ನು ವಿತರಿಸಿದರು. ತಾವೂ ಊರಲ್ಲಿಲ್ಲದಿದ್ದರೂ ಕೂಡ ತಮ್ಮೂರಿನ ಜನರ ಸಮಸ್ಯೆಗೆ ಸ್ಪಂದಿಸಿರುವುದು ಪ್ರಶಂಸೆಗೆ ಪಾತ್ರವಾಗಿದೆ.


