ಕೊರೊನಾ ಸಂಕಷ್ಟ : 20 ಸಾವಿರ ಸ್ಯಾನಿಟರಿ ಪ್ಯಾಡ್ ವಿತರಣೆ

0

ಮಂಗಳೂರು : ಲಾಕ್ ಡೌನ್ ನಿಮಿತ್ತ ಸಂಕಷ್ಟಪಡುತ್ತಿರುವ ಜನತೆಗೆ ಅಕ್ಕಿ, ಅನ್ನ ಇನ್ನಿತರ ನಿತ್ಯೋಪಯೋಗಿ ವಸ್ತುಗಳ ವಿತರಣೆ ಅಲ್ಲಲ್ಲಿ ಸಂಘ ಸಂಸ್ಥೆ ಹಾಗೂ ಉದಾರ ದಾನಿಗಳ ನೇತೃತ್ವದಲ್ಲಿ ನಡೆಯುತ್ತಿದ್ದರೆ ಇಲ್ಲೊಬ್ಬರು ಹೆಣ್ಣುಮಕ್ಕಳ ಸಂಕಷ್ಟವನ್ನು ಮನನ ಮಾಡಿಕೊಂಡು 20 ಸಾವಿರ ಸಾನಿಟರ್ ಪ್ಯಾಡ್ ಗಳನ್ನು ವಿತರಿಸಲು ಮುಂದೆ ಬಂದಿದ್ದಾರೆ.

ದೇಶ ವ್ಯಾಪ್ತಿ ಲಾಕ್ ಡೌನ್ ಘೋಷಿಸಿರುವುದರಿಂದ ಹೆಣ್ಮಕ್ಕಳು ಮನೆಯಿಂದ ಹೊರಗಿಳಿಯದಂತಾಗಿದೆ. ಈ ಸಂದರ್ಭದಲ್ಲಿ ಹೆಣ್ಮಕ್ಕಳ ಅಗತ್ಯವಸ್ತುವಾಗಿರುವ ಸಾನಿಟರಿ ಪ್ಯಾಡ್. ಹಲವು ಮೆಡಿಕಲ್ ಶಾಪ್ ಗಳಲ್ಲಿ ಕೂಡಾ ದಾಸ್ತಾನು ಕಡಿಮೆ ಇರುವುದರಿಂದ ಪ್ಯಾಡ್ ಲಭಿಸುವುದೇ ಇದೀಗ ಸಮಸ್ಯೆಯಾಗಿದೆ.

ಈ ಬಗ್ಗೆ ಮಂಗಳೂರಿನ ವಜ್ರಿಟೇಕ್ ಸಂಸ್ಥೆ ಹಾಗೂ ಮಂಜೇಶ್ವರದ ಸ್ಕಂದ ಹೆಲ್ಪ್ ಡೆಸ್ಕ್ ಗೆ ಹಲವು ಮಹಿಳಾ ಸಂಸ್ಥೆಗಳಿಂದ ಬೇಡಿಕೆ ಬಂದುದನ್ನು ಅರಿತುಕೊಂಡು ಬಿಜೆಪಿ ಕರ್ನಾಟಕ ರಾಜ್ಯ ಸಣ್ಣ ಮಧ್ಯಮ ಕೈಗಾರಿಕಾ ಸಹ ಸಂಚಾಲಕರಾದ ಬದರಿನಾಥ್ ಕಾಮತ್ ಮಂಗಳೂರು ಅವರು 20 ಸಾವಿರ ಪ್ಯಾಡ್ ಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಗೆ ಉಚಿತವಾಗಿ ನೀಡಲು ವ್ಯವಸ್ಥೆ ಮಾಡಿದ್ದಾರೆ. ಮೂಲತಃ ಮಂಗಳೂರು ನಿವಾಸಿ ಇದೀಗ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಬದ್ರಿನಾಥ್ ಕಾಮತ್ ಅವರ ಈ ಸೇವೆ ಸರ್ವತ್ರ ಶ್ಲಾಘನೆಗೆ ಪಾತ್ರವಾಗುತ್ತಿದೆ.

ಹೆಣ್ಣು ಮಕ್ಕಳಿಗೆ ಮಾಸ್ಕ್ ವಿತರಣೆಯಲ್ಲಿ ವಜ್ರ ಟೆಕ್ ಸಂಸ್ಥೆ

ಈಗಾಗಲೇ ಇಲ್ಲಿನ ಹಲವು ಹೆಣ್ಮಕ್ಕಳ ಅಭಯ ಆಶ್ರಮಗಳಿಗೆ ಸ್ಯಾನಿಟರಿ ಪ್ಯಾಡ್ ತಲುಪಿಸಲಾಗಿದೆ. ಇದರ ವಿತರಣಾ ಕಾರ್ಯಕ್ರಮ ತೊಕ್ಕೋಟು ಸಮೀಪದ ಕುತ್ತಾರ್ ಹೆಣ್ಮಕ್ಕಳ ಅಭಯ ಆಶ್ರಮದಲ್ಲಿ ವಜ್ರಿಟೇಕ್ ಪ್ರೈ.ಲಿಮಿಟೆಡ್ ಸಂಸ್ಥೆಯ ಮೂಲಕ ಆರ್.ಜೆ.ರಶ್ಮಿ ಉಳ್ಳಾಲ ನೇರೆವೇರಿಸಿದರು. ವಜ್ರಿಟೇಕ್ ಸಂಸ್ಥೆಯ ನಿರ್ದೇಶಕ ಅಶ್ವಿತ್ ಉಪ್ಪಳ,ನ್ಯಾಯವಾದಿ ಶಿವಪ್ರಸಾದ್ ಶೆಟ್ಟಿ, ಸ್ಕಂದ ಕೋರೊನ ಹೆಲ್ಪ್ ಡೆಸ್ಕ್ ಮಂಜೇಶ್ವರ ಇದರ ಪ್ರಧಾನ ಸಂಚಾಲಕ, ಪತ್ರಕರ್ತ ರತನ್ ಕುಮಾರ್ ಹೊಸಂಗಡಿ, ಜಿತಿನ್ ಮಂಗಳೂರು, ಸಾಗರ್ ಮಂಗಳೂರು ಉಪಸ್ಥಿತರಿದ್ದರು. ಹೆಣ್ಮಕ್ಕಳ ಆಶ್ರಮ ಇನ್ನಿತರ ಕಡೆಗಳಲ್ಲಿ ಸಾನಿಟರಿ ಪ್ಯಾಡ್ ಅಗತ್ಯವಿರುವವರು ದ.ಕ.ಜಿಲ್ಲೆಯಲ್ಲಿ ವಜ್ರಿಟೇಕ್ ಸಂಸ್ಥೆಯ ನಿರ್ದೇಶಕ ಅಶ್ವಿತ್ ಅವರ ದೂರವಾಣಿ ಸಂಖ್ಯೆ +91 9743581114 ಅಥವ +91 8197129506ನ್ನು, ಕಾಸರಗೋಡು ಜಿಲ್ಲೆಯಲ್ಲಿ ಸ್ಕಂದ ಕೋರೊನ ಹೆಲ್ಪ್ ಡೆಸ್ಕ್ ಸಂಸ್ಥೆಯ ಪ್ರ.ಸಂಚಾಲಕ ರತನ್ ಕುಮಾರ್ ಅವರ +91 97463 68580 ಅಥವಾ +91 70343 38773 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಅಗತ್ಯ ಇರುವಲ್ಲಿ ಉಚಿತವಾಗಿ ತಂದೊಪ್ಪಿಸಲಾಗುವುದು ಎಂದು ಸಂಬಂಧಪಟ್ಟ ಸಂಸ್ಥೆಯವರು ತಿಳಿಸಿದ್ದಾರೆ.

Leave A Reply

Your email address will not be published.