Surathkal toll: ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ; ಸುರತ್ಕಲ್ ಟೋಲ್ ರದ್ದು

ದಕ್ಷಿಣ ಕನ್ನಡ: Surathkal toll: ನಾಗರಿಕರ ಹಲವು ಕಾಲದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಮಂಗಳೂರಿನ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Nandini milk price hike: ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ: ನಂದಿನಿ ಹಾಲು ಮತ್ತು ಮೊಸರಿನ ಬೆಲೆ 3 ರೂ. ಹೆಚ್ಚಿಸಿದ ಕೆಎಂಎಫ್

ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕ ಪರವಾಗಿ ಧನ್ಯವಾದಗಳು. ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.

ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಸುರತ್ಕಲ್ ಟೋಲ್ ರದ್ದು ಮಾಡುವಂತೆ ಹಲವು ವರ್ಷಗಳಿಂದಲೂ ನಾಗರೀಕರು ಹೋರಾಟ ನಡೆಸುತ್ತಿದ್ದರು. ಆದರೆ ಕೇಂದ್ರ ಸರಕಾರ ಟೋಲ್‌ ರದ್ದು ಮಾಡಲು ಮುಂದಾಗಿರಲಿಲ್ಲ. ಸ್ಥಳೀಯ ಸಂಸದರು, ಸಚಿವರು ಈ ಹಿಂದೆ ಟೋಲ್‌ ಬೇರೆಡೆಗೆ ಸ್ಥಳಾಂತರ ಮಾಡುವುದು, ಇತರ ಟೋಲ್ ಜೊತೆಗೆ ವಿಲೀನ ಮಾಡುವ ಮಾತನ್ನು ಆಡಿದ್ದರು. ಆದರೆ ಟೋಲ್‌ ರದ್ದು ಮಾಡಲು ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುನೀರ್‌ ಕಾಟಿಪಳ್ಳ ನೇತೃತ್ವದಲ್ಲಿ ಬಿಜೆಪಿ ಹೊರತು ಪಡಿಸಿ ಉಳಿದೆಲ್ಲಾ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಒಟ್ಟಾಗಿ ಹೋರಾಟ ನಡೆಸಿದ್ದವು. ಟೋಲ್‌ ರದ್ದು ಆಗುವವರೆಗೂ ಅನಿರ್ಧಿಷ್ಟಾವಧಿಯ ಧರಣಿ ಸತ್ಯಾಗ್ರಹವನ್ನು ಕೈಗೊಂಡಿದ್ದವು. ಆದ್ರೀಗ ನಾಗರೀಕರ ಹೋರಾಟ ಕೊನೆಗೂ ಫಲಕೊಟಿದ್ದು, ಕೇಂದ್ರ ಸರಕಾರ ಟೋಲ್‌ ರದ್ದು ಮಾಡಿದೆ. ಆದರೆ ಈ ಕುರಿತು ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಾಗಿದೆ.

ಇದನ್ನೂ ಓದಿ: Mahesh Babu : ಮಹೇಶ್‌ ಬಾಬು ತಂದೆ ಆರೋಗ್ಯದಲ್ಲಿ ಏರುಪೇರು : ಟಾಲಿವುಡ್‌ ಹಿರಿಯ ನಟ ಕೃಷ್ಣ ಐಸಿಯುಗೆ ಶಿಪ್ಟ್

surathkal toll: suratkal toll collection cancelled: nalin kumar katil confirmed it in twitter

Comments are closed.