ಶಿವಮೊಗ್ಗ : cleared all flexes in shivamogga : ವೀರ ಸಾವರ್ಕರ್ ಫೋಟೋ ವಿವಾದದ ಬಳಿಕ ಶಿವಮೊಗ್ಗ ನಗರವು ಬಿಕೋ ಎನ್ನುತ್ತಿದೆ. ಈ ನಡುವೆ ಶಿವಮೊಗ್ಗ ಮಹಾನಗರ ಪಾಲಿಕೆಯು ಆಪರೇಷನ್ ಫ್ಲೆಕ್ಸ್ಗೆ ಕೈ ಹಾಕಿದೆ. ವೀರ ಸಾರ್ವಕರ್ ಹಾಗೂ ಟಿಪ್ಪು ಸುಲ್ತಾನ್ ಫ್ಲೆಕ್ಸ್ ವಿಚಾರದಲ್ಲಿಯೇ ಮುಸ್ಲಿಂ ಯುವಕರು ಹಾಗೂ ಹಿಂದೂ ಸಂಘಟನೆಗಳಿಗೆ ಸಂಘರ್ಷ ಉಂಟಾದ ಬಳಿಕವೇ ಇಷ್ಟೆಲ್ಲ ಗಲಭೆ ಉಂಟಾಗಿರುವುದು ಪಾಲಿಕೆಯ ಗಮನಕ್ಕೂ ಬಂದಿರುವ ಹಿನ್ನೆಲೆಯಲ್ಲಿ ಆಪರೇಷನ್ ಫ್ಲೆಕ್ಸ್ ಕಾರ್ಯಾಚರಣೆ ಮಾಡಲಾಗುತ್ತಿದೆ.
ತಡರಾತ್ರಿಯಿಂದಲೇ ಕಾರ್ಯಾಚರಣೆಗೆ ಇಳಿದ ಶಿವಮೊಗ್ಗ ಪಾಲಿಕೆ ಸಿಬ್ಬಂದಿ ಶಿವಮೊಗ್ಗ ನಗರದಲ್ಲಿರುವ ಎಲ್ಲಾ ಫ್ಲೆಕ್ಸ್ಗಳನ್ನು ತೆರವುಗೊಳಿಸಿದೆ. ಫ್ಲೆಕ್ಸ್ ಕಾರಣದಿಂದಲೇ ಶಿವಮೊಗ್ಗದಲ್ಲಿ ಗೊಂದಲದ ವಾತಾವರಣ ಮೂಡಿರುವ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿಯು ಒಂದು ಫ್ಲೆಕ್ಸ್ನ್ನೂ ಬಿಡದೇ ಎಲ್ಲಾ ಫ್ಲೆಕ್ಸ್ಗಳನ್ನು ತೆರವು ಮಾಡಿದೆ.
75 ವರ್ಷಗಳ ಸ್ವಾತಂತ್ರ್ಯ ಸಂಭ್ರಮ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ಫ್ಲೆಕ್ಸ್ಗಳೇ ತುಂಬಿ ಹೋಗಿದ್ದವು. ಆದರೆ ನಿನ್ನೆ ಸಾವರ್ಕರ್ ಫ್ಲೆಕ್ಸ್ ಕಾರಣಕ್ಕೆ ಇಷ್ಟೆಲ್ಲ ರಾದ್ಧಾಂತವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ ಈ ಫ್ಲೆಕ್ಸ್ಗಳನ್ನು ಅಳವಡಿಸಲು ಯಾರು ಕೂಡ ಪಾಲಿಕೆಯ ಅನುಮತಿ ಕೇಳಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇನ್ಯಾವುದೇ ಗಲಾಟೆಗಳು ನಗರದಲ್ಲಿ ನಡೆಯದಂತೆ ತಡೆಯಲು ಪಾಲಿಕೆ ಈ ದಿಟ್ಟ ಕ್ರಮ ಕೈಗೊಂಡಿದೆ.
ನಿನ್ನೆ ಆಜಾದಿ ಕಾ ಅಮೃತ್ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಶಿವಮೊಗ್ಗ ನಗರಾದ್ಯಂತ ವೀರ ಸಾವರ್ಕರ್ ಫೋಟೋಗಳನ್ನು ಅಳವಡಿಸಿದ್ದರು. ಆದರೆ ಇದಕ್ಕೆ ತಗಾದೆ ತೆಗೆದ ಮುಸ್ಲಿಂ ಯುವಕರು ಸಾರ್ವಕರ್ ಫೋಟೋ ಇರುವ ಜಾಗದಲ್ಲಿ ಟಿಪ್ಪು ಸುಲ್ತಾನನ ಫೋಟೊ ಅಳವಡಿಸುವಂತೆ ಆಗ್ರಹಿಸಿದ್ದರು. ಅಲ್ಲದೇ ಅನೇಕ ಕಡೆಗಳಲ್ಲಿ ಸಾವರ್ಕರ್ ಫ್ಲೆಕ್ಸ್ಗಳನ್ನು ತೆರವುಗೊಳಿಸಲೂ ಸಹ ಮುಂದಾಗಿದ್ದರು. ಸಾವರ್ಕರ್ ಫೋಟೋ ತೆರವುಗೊಳಿಸಲು ಒಪ್ಪಿದ ಪೊಲೀಸರು ಆ ಜಾಗದಲ್ಲಿ ಟಿಪ್ಪು ಸುಲ್ತಾನನ ಫೋಟೊ ಅಳವಡಿಸಲು ನಿರಾಕರಿಸಿದ್ದರು.
ಈ ವಿಚಾರ ಹಿಂದೂ ಹಾಗೂ ಮುಸ್ಲಿಂ ಸಂಘಟನೆ ಕಾರ್ಯಕರ್ತರ ನಡುವೆ ಗಲಾಟೆಗೆ ಕಾರಣವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದರೂ ಸಹ ಗಾಂಧಿ ಬಜಾರ್ ಹಾಗೂ ಅಹಮದ್ ನಗರ ಬಡಾವಣೆಯಲ್ಲಿ ಇಬ್ಬರು ಯುವಕರ ಮೇಲೆ ಕೊಲೆ ಪ್ರಯತ್ನವನ್ನು ಮಾಡಲಾಗಿದೆ. ಪ್ರೇಮ್ ಸಿಂಗ್ ಹಾಗೂ ಪ್ರವೀಣ್ ಕುಮಾರ್ ಇಬ್ಬರಿಗೂ ಚಾಕು ಇರಿತ ಮಾಡಲಾಗಿದ್ದು ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಇದನ್ನು ಓದಿ : BCCI mahendra Dhoni: ದೇಶಕ್ಕೆ 2 ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಧೋನಿಗೆ ಬಿಸಿಸಿಐ ಶಾಕ್ !
ಇದನ್ನೂ ಓದಿ : Bigg boss Kannada OTT : ರಾಕೇಶ್ ಅಡಿಗನಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ ಸ್ಫೂರ್ತಿ ಗೌಡ
The Municipal Corporation has cleared all flexes in shivamogga city