BCCI Instruct Team India : “ಜಿಂಬಾಬ್ವೆಯಲ್ಲಿ ಬೇಗ ಬೇಗ ಸ್ನಾನ ಮುಗಿಸಿ ” ರಾಹುಲ್ ಬಳಗಕ್ಕೆ ಬಿಸಿಸಿಐ ಈ ವಾರ್ನಿಂಗ್ ಕೊಟ್ಟದ್ದೇಕೆ

ಹರಾರೆ: (BCCI Instruct Team India ) ಜಿಂಬಾಬ್ವೆ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಎಚ್ಚರಿಕೆಯೊಂದನ್ನು ಕೊಟ್ಟಿದೆ. ಆ ಎಚ್ಚರಿಕೆ ಏನು ಎಂಬುದನ್ನು ಕೇಳಿದ್ರೆ ನಿಮ್ಗೆ ಅಚ್ಚರಿಯಾಗೋದು ಗ್ಯಾರಂಟಿ. ಕೆ.ಎಲ್ ರಾಹುಲ್ ನಾಯಕತ್ವದ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದ್ದು, ಮೊದಲ ಪಂದ್ಯ ಗುರುವಾರ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ. ಸರಣಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐನಿಂದ ಸ್ಪಷ್ಟ ನಿರ್ದೇಶನವೊಂದು ರವಾನೆಯಾಗಿದೆ. “ಭಾರತ ತಂಡದ ಆಟಗಾರರು ಜಿಂಬಾಬ್ವೆಯಲ್ಲಿ ಎಷ್ಟು ಬೇಗ ಸಾಧ್ಯವೋ, ಅಷ್ಟು ಬೇಗ ಸ್ನಾನ ಮಾಡಿಸಿ ಮುಗಿಸಬೇಕು” ಎಂದು ಬಿಸಿಸಿಐ ಸೂಚನೆ ಕೊಟ್ಟಿದೆ.

ಹಾಗಾದ್ರೆ ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐನಿಂದ ಹೀಗೊಂದು ಸೂಚನೆ ರವಾನೆಯಾಗಲು ಕಾರಣ ಏನು? ಉತ್ತರ ಸ್ಪಷ್ಟ. ಜಿಂಬಾಬ್ವೆಯ ರಾಜಧಾನಿ ಹರಾರೆ ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿದೆ. ಅಲ್ಲಿನ ಬಹುತೇಕ ಭಾಗಗಳಲ್ಲಿ ಜನರಿಗೆ ಕುಡಿಯಲು ನೀರಿಲ್ಲ. ಇದನ್ನು ಮನಗಂಡಿರುವ ಬಿಸಿಸಿಐ, ನೀರನ್ನು ಅನವಶ್ಯಕವಾಗಿ ಪೋಲು ಮಾಡದಂತೆ ತನ್ನ ಆಟಗಾರರಿಗೆ ನಿರ್ದೇಶನ ನೀಡಿದೆ.

“ಹರಾರೆಯಲ್ಲಿ ತೀವ್ರ ನೀರಿನ ಅಭಾವ ಎದುರಾಗಿದೆ. ಇದನ್ನು ಭಾರತ ತಂಡದ ಆಟಗಾರರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ನೀರನ್ನು ವ್ಯರ್ಥಗೊಳಿಸದಂತೆ ಮತ್ತು ಆದಷ್ಟು ಬೇಗ ಸ್ನಾನ ಮಾಡಿ ಮುಗಿಸುವಂತೆ ಆಟಗಾರರಿಗೆ ನಿರ್ದೇಶನ ನೀಡಿದ್ದೇವೆ. ಅಷ್ಟೇ ಅಲ್ಲ, ತಂಡದ ಆಟಗಾರರ ಸ್ವಿಮ್ಮಿಂಗ್ ಪೂಲ್ ಸೆಷನ್’ನ ಅವಧಿಯನ್ನೂ ಕಡಿತಗೊಳಿಸಲಾಗಿದೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತೀ ವರ್ಷ ಜಿಂಬಾಬ್ವೆಯ ಹರಾರೆಯಲ್ಲಿ ನೀರಿನ ಅಭಾವ ಎದುರಾಗುವುದು ಸಾಮಾನ್ಯ. ಅದರ ಬಿಸಿ ಈಗ ಭಾರತ ಕ್ರಿಕೆಟ್ ತಂಡದ ಆಟಗಾರರಿಗೂ ತಟ್ಟಿದೆ. ಕೆ.ಎಲ್ ರಾಹುಲ್ ನಾಯಕತ್ವದ ಟೀಮ್ ಇಂಡಿಯಾ, ಆತಿಥೇಯ ಜಿಂಬಾಬ್ವೆ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದ್ದು, ಸರಣಿ ಪಂದ್ಯಗಳು ಆಗಸ್ಟ್ 18, 20 ಮತ್ತು 22ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿವೆ. ಜಿಂಬಾಬ್ವೆ ಪ್ರವಾಸದಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ : Rishabh Pant brand ambassador : ದೆಹಲಿಯ ರಿಷಭ್ ಪಂತ್ ಉತ್ತರಾಖಂಡ್ ಸರ್ಕಾರದ ಬ್ರಾಂಡ್ ಅಂಬಾಸಿಡರ್

ಇದನ್ನೂ ಓದಿ : BCCI mahendra Dhoni: ದೇಶಕ್ಕೆ 2 ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಧೋನಿಗೆ ಬಿಸಿಸಿಐ ಶಾಕ್ !

Take quick shower BCCI Instruct Team India

Comments are closed.