ವಿಜಯಪುರ : son ran away : ಪ್ರೀತಿ -ಪ್ರೇಮ ಅನ್ನೋದು ಒಂದು ರೀತಿ ಮಾಯೆಯಿದ್ದಂತೆ. ಅದು ಕೆಲವರಿಗೆ ಖುಷಿಯನ್ನು ತಂದುಕೊಟ್ಟರೆ ಮತ್ತೊಬ್ಬರಿಗೆ ದುಸ್ವಪ್ನವಾಗಿ ಬದಲಾಗಬಹುದು. ಇನ್ನೂ ಹಲವು ಪ್ರಕರಣಗಳಲ್ಲಿ ಮಕ್ಕಳು ಪ್ರೀತಿ – ಪ್ರೇಮ ಅಂತಾ ಮಾಡಿದ್ದಕ್ಕೆ ಪೋಷಕರು ಜೀವಮಾನವಿಡೀ ಅನುಭವಿಸಬೇಕಾದ ಪರಿಸ್ಥಿತಿಗಳೂ ಸಹ ಎದುರಾಗಬಹುದು. ವಿಜಯಪುರ ತಾಲೂಕಿನ ಜಾಲಗೇರಿ ಎಂಬ ಗ್ರಾಮದಲ್ಲಿ ಇಂತಹದ್ದೇ ಒಂದು ಪ್ರಕರಣ ನಡೆದು ಹೋಗಿದೆ.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬ ಗಾದೆ ಮಾತಿನಂತೆ ಪುತ್ರನ ಲವ್ ಕಹಾನಿಯಿಂದಾಗಿ ಆತನ ಪೋಷಕರ ಮೇಲೆ ಹಲ್ಲೆ ನಡೆಸಿದ ಘಟನೆಯೊಂದು ನಡೆದಿದೆ. ಪೋಷಕರ ಮೇಲೆ ಹಲ್ಲೆ ನಡೆಸಿ ಹೆದರಿಸಿ ಬೆದರಿಸಿ ಇವರ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಹುಡುಗಿಯ ಕಡೆಯವರು ಯತ್ನಿಸಿದ್ದಾರೆ .ಸಪ್ಟೆಂಬರ್ 11ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಅಕ್ಕ ಪಕ್ಕದ ಮನೆಯವರೇ ಆಗಿದ್ದ ಅಮರ್ ಹಾಗೂ ಅರ್ಚನಾ ಪರಸ್ಪರ ಪ್ರೀತಿಸಿದ್ದು ಮಾತ್ರವಲ್ಲದೇ ಮನೆಯಿಂದ ಓಡಿ ಹೋಗಿದ್ದರು. ಇದು ಅರ್ಚನಾ ಪೋಷಕರಾದ ಬಾಬು ಪವಾರ್ ಹಾಗೂ ಅವರ ಕುಟುಂಬಸ್ಥರಿಗೆ ಅಮರ್ ಮನೆಯವರ ಮೇಲೆ ಕೋಪ ಬರುವಂತೆ ಮಾಡಿತ್ತು. ಅಮರ್ ಮೇಲಿನ್ ಕೋಪಕ್ಕೆ ಬಾಬು ಪವಾರ್ ಒಂದಿಷ್ಟು ಜನರನ್ನು ಸೇರಿಸಿಕೊಂಡು ಬಂದು ಅಮರ್ ತಂದೆ ಗೋರಖನಾಥ್ ಅವರ ಪತ್ನಿ ಕವಿತಾ ಹಾಗೂ ಮತ್ತೋರ್ವ ಪುತ್ರನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಗೋರಖನಾಥ್ರ ಕೈ ಕಾಲುಗಳನ್ನು ಕ್ರೂಸರ್ ವಾಹನಕ್ಕೆ ಕಟ್ಟಿ ಎಳೆದಿದ್ದಾರೆ.
ಸುಮಾರು 20 ರಿಂದ 30 ಮೀಟರ್ ದೂರದವರೆಗೆ ನನ್ನನ್ನು ಕ್ರೂಸರ್ ವಾಹನಕ್ಕೆ ಕಟ್ಟಿ ಎಳೆದು ಚಿತ್ರಹಿಂಸೆ ನೀಡಿದ್ದಾರೆ ಎಂದು ಗೋರಖನಾಥ್ ಆರೋಪಿಸಿದ್ದಾರೆ. ನಿಮ್ಮ ಪುತ್ರ ಅಮರ್ ನಮ್ಮ ಪುತ್ರಿ ಅರ್ಚನಾಳನ್ನು ಪುಸಲಾಯಿಸಿ ಆಕೆಯ ದಾರಿಯನ್ನು ತಪ್ಪಿಸಿದ್ದಾನೆ. ಈತನೇ ಆಕೆಯನ್ನು ಎಳೆದುಕೊಂಡು ಹೋಗಿದ್ದಾನೆ. ಅಮರ್ ಈ ರೀತಿ ಕೃತ್ಯ ಎಸಗಲು ನಿಮ್ಮೆಲ್ಲರ ಸಾಥ್ ಕೂಡ ಇದೆ ಎಂದು ಕೂಗಾಡಿ ಅರ್ಚನಾ ತಂದೆ ಬಾಬು ಈ ರೀತಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಅರ್ಚನಾ ತಂದೆ ಬಾಬು ಪವಾರ್, ಸಹೋದರರಾದ ಅಮರ್ , ಆಕಾಶ್ ಹಾಗೂ ಸಂಬಂಧಿಗಳಾದ ಬಾಜಿರಾವ್, ಶ್ರೀಕಾಂತ್ ಪವಾರ್, ಲಕ್ಷ್ಮಣ ಪವಾರ್, ಅನ್ನು ಪವಾರ್, ನಾರಾಯಣ ಪವಾರ್ ಹಾಗೂ ಬೀರಪ್ಪ ಪೂಜಾರಿಯಿಂದ ಈ ಹಲ್ಲೆ ನಡೆದಿದೆ ಎಂದು ಅಮರ್ ತಂದೆ ಗೋರಖನಾಥ್ ಆರೋಪಿಸಿದ್ದಾರೆ . ನಮ್ಮ ಜೀವಕ್ಕೆ ಅಪಾಯವಿದೆ. ನಮಗೆ ರಕ್ಷಣೆ ಬೇಕು ಎಂದು ಗೋರಖನಾಥ್ ಹಾಗೂ ಅವರ ಪತ್ನಿ ಕವಿತಾ ಕಣ್ಣೀರು ಹಾಕಿದ್ದಾರೆ.
ಅರ್ಚನಾ ಜೊತೆಯಲ್ಲಿ ಓಡಿ ಹೋಗಿರುವ ಅಮರ್ ತನ್ನ ತಂದೆ ತಾಯಿಯ ಮೇಲೆ ನಡೆದಿರುವ ಹಲ್ಲೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅರ್ಚನಾ ತಂದೆ , ಸಹೋದರರು ಹಾಗೂ ಕುಟುಂಬಸ್ಥರು ನನ್ನ ಪೋಷಕರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರನ್ನು ರಕ್ಷಿಸಿ ಎಂದು ಕೋರಿದ್ದಾರೆ. ಇತ್ತ ಅರ್ಚನಾ ಕೂಡ ನಾನು ಸ್ವಇಚ್ಛೆಯಿಂದ ಅಮರ್ ಜೊತೆ ಇರಲು ಬಂದಿದ್ದೇನೆ. ನಮ್ಮ ಮನೆಯಲ್ಲಿ ನನ್ನ ಮದುವೆ ಮಾತುಕತೆ ನಡೆಯುತ್ತಿತ್ತು. ಹೀಗಾಗಿ ನಾನು ಪ್ರೀತಿಸಿದ ಅಮರ್ ಜೊತೆಯಲ್ಲಿ ಮನೆ ಬಿಟ್ಟು ಬಂದಿದ್ದೇನೆ ಎಂದು ಅರ್ಚನಾ ಹೇಳಿದ್ದಾಳೆ.
ಇದನ್ನು ಓದಿ : Anti Conversion Bill : ಪರಿಷತ್ನಲ್ಲಿ ಇಂದು ಮತಾಂತರ ನಿಷೇಧ ಫೈಟ್
ಇದನ್ನೂ ಓದಿ : Robin Uthappa: ಕಾರ್‌ನಲ್ಲೇ ನಿದ್ದೆ, ಆತ್ಮಹತ್ಯೆಯ ಯೋಚನೆ.. ಗೊತ್ತಾ ಕೊಡಗಿನ ಕುವರ ರಾಬಿನ್ ಉತ್ತಪ್ಪನ ಕಣ್ಣೀರ ಕಥೆ ?
The son ran away with the neighbor’s housemate: The parents of the young man were tortured