Gobhi Pepper Fry : ಗೋಬಿಯ ಈ ಸ್ನ್ಯಾಕ್ಸ್‌ ಸವಿದಿದ್ದೀರಾ; ಗೋಬಿ–ಪೆಪ್ಪರ್‌ ಫ್ರೈ ಹೀಗೆ ಮಾಡಿ

ಭಾರತಿಯರಿಗೆ ಗೋಬಿ (Cauliflower) ಚಿರಪರಿಚಿತ. ಗೋಬಿಯಿಂದ ಅನೇಕ ರೀತಿಯ ಅಡುಗೆಗಳನ್ನು (Gobhi Pepper Fry) ಮಾಡುತ್ತಾರೆ. ಆಲೂ ಗೋಬಿ, ಗೋಬಿ ಮಂಚೂರಿ, ಗೋಬಿ ಪರಾಠಾ, ಗೋಬಿ ಭಜ್ಜಿ, ಗೋಬಿ ಪಲ್ಯ ಹೀಗೆ ಹಲವು ವಿಧದ ಅಡುಗೆ ತಯಾರಿಸುತ್ತಾರೆ. ತರಕಾರಿಯನ್ನು ಉಪಯೋಗಿಸಿ ತಯಾರಿಸುವ ಅಡುಗೆಗಳಿಗೆ ಕೊನೆಯೆಂಬುದೇ ಇಲ್ಲ. ತರಕಾರಿಗಳು ರುಚಿ ಮಾತ್ರವಲ್ಲ, ಅವುಗಳಿಂದ ಹಲವಾರು ಪ್ರಯೋಜನಗಳೂ (Health Benefit) ಇವೆ.

ಗೋಬಿಯಿಂದ ತಯಾರಿಸುವ ಅಡುಗೆಗಳು ಬಹಳ ರುಚಿಯಾಗಿರುತ್ತದೆ. ಗೋಬಿ ಮಂಚೂರಿಯಿಂದ ಹಿಡಿದು ಆಲೂ ಗೋಬಿಯವರೆಗೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರಿಗೂ ಅತ್ಯಂತ ಪ್ರಿಯವಾದ ವ್ಯಂಜನವಾಗಿದೆ. ಕೆಲವು ತಿಂಡಿಗಳನ್ನು ಸುಲಭವಾಗಿ ಮಾಡಬಹುದು. ಹಾಗೆ ಸುಲಭವಾಗಿಯೂ ಮತ್ತು ತ್ವರಿತವಾಗಿಯೂ ತಯಾರಿಸಬಹುದಾದ ಗೋಬಿ–ಪೆಪ್ಪರ್‌ ಫ್ರೈ ಎಂದಾದರೂ ಟ್ರೈ ಮಾಡಿದ್ದೀರಾ? ಸ್ಟಾರ್ಟರ್‌ನಂತೆ ಸೇವಿಸಬಹುದಾದ ಇದಕ್ಕೆ ಕೆಂಪು ಚೆಟ್ನಿ ಉತ್ತಮ ಕಾಂಬಿನೇಷನ್‌.

ಗೋಬಿ–ಪೆಪ್ಪರ್‌ ಫ್ರೈ ಮಾಡುವುದು ಹೇಗೆ?

ಬೇಕಾಗುವ ಪದಾರ್ಥಗಳು :
ಗೋಬಿ –ಒಂದು
ಮೈದಾ– ಅರ್ಧ ಕಪ್‌
ಕಾರ್ನ್‌ ಹಿಟ್ಟು –3 ಚಮಚ
ಪೆಪ್ಪರ್‌ – 1 ಚಮಚ
ಕೆಂಪು ಮೆಣಸಿನ ಬೀಜ (ಫ್ಲಾಕ್ಸ್‌)–
ಕೊತ್ತಂಬರಿ ಪುಡಿ – ಒಂದು ಚಮಚ
ಕೆಚ್‌ಅಪ್‌ –2 ಚಮಚ
ಈರುಳ್ಳಿ –ಒಂದು
ಕತ್ತರಿಸಿದ ಶುಂಠಿ –1 ಚಮಚ
ಬೆಳ್ಳುಳ್ಳಿ– 6 ರಿಂದ 8

ತಯಾರಿಸುವ ವಿಧಾನ :

  • ಮೊದಲಿಗೆ ಗೋಬಿಯನ್ನು ಕತ್ತರಿಸಿಕೊಳ್ಳಿ. ಅದನ್ನು ಬಿಸಿನೀರಿಗೆ ಹಾಕಿ 2–3 ನಿಮಿಷ ಕುದಿಸಿ.
  • ಒಂದು ಪಾತ್ರೆಗೆ ಮೈದಾ, ಕಾರ್ನ್‌ ಪುಡಿ, ಉಪ್ಪು, ಪೆಪ್ಪರ್‌ ಮತ್ತು ಮೆಣಸಿನ ಫ್ಲಾಕ್ಸ್‌ಗಳನ್ನು ಹಾಕಿ. ಅದಕ್ಕೆ ಬಜ್ಜಿ ಹಿಟ್ಟಿನ ಹದದಲ್ಲಿ ನೀರು ಸೇರಿಸಿ ಕಲಸಿ.
  • ನಂತರ ಒಂದೊಂದೇ ಗೋಬಿಯನ್ನು ಹಿಟ್ಟಿನಲ್ಲಿ ಮುಳುಗಿಸಿ ಗರಿಗರಿಯಾಗುವವರೆಗೆ ಫ್ರೈ ಮಾಡಿ.
  • ಒಂದು ಪ್ಯಾನ್‌ಗೆ ಒಂದು ಚಮಚ ಎಣ್ಣೆ ಹಾಕಿ, ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಫ್ಲಾಕ್ಸ್‌, ಕೊತ್ತಂಬರಿ ಪುಡಿ ಮತ್ತು ಕೆಚ್‌ಅಪ್‌ ಸೇರಿಸಿ. ಅದಕ್ಕೆ ಕರಿದ ಗೋಬಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ.
  • ಗೋಬಿ–ಪೆಪ್ಪರ್‌ ಫ್ರೈ ಸವಿಯಲು ಸಿದ್ಧ.

ಇದನ್ನೂ ಓದಿ : Iron Deficiency : 40 ರ ನಂತರ ಮಹಿಳೆಯರಲ್ಲಿ ಕಾಣಿಸುವ ಹಿಮೋಗ್ಲೋಬಿನ್‌ ಕೊರೆತೆಗೆ ಇದೇ ಕಾರಣ; ಅದನ್ನು ಸರಿಪಡಿಸಿಕೊಳ್ಳಲು ಹೀಗೆ ಮಾಡಿ

ಇದನ್ನೂ ಓದಿ : Calcium Deficiency Problems: ಕ್ಯಾಲ್ಸಿಯಂ ಕೊರತೆಯಿಂದ ಏನೆಲ್ಲಾ ತೊಂದರೆಯಾಗುತ್ತದೆ? ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ

(Gobhi Pepper Fry how to prepare tasty Gobhi pepper fry)

Comments are closed.