ಮಂಗಳವಾರ, ಏಪ್ರಿಲ್ 29, 2025
Homedistrict NewsPanchmasali 2A reservation : ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ಪಂಚಮಸಾಲಿ 2ಎ ಮೀಸಲಾತಿ ಹೋರಾಟ...

Panchmasali 2A reservation : ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ಪಂಚಮಸಾಲಿ 2ಎ ಮೀಸಲಾತಿ ಹೋರಾಟ : ನಾಳೆ ಸಿಎಂ ನಿವಾಸದೆದುರು ಧರಣಿ

- Advertisement -

ಹುಬ್ಬಳ್ಳಿ : Panchmasali 2A reservation : ರಾಜ್ಯದಲ್ಲಿ ಮತ್ತೆ ಪಂಚಮಸಾಲಿ 2 ಎ ಮೀಸಲಾತಿ ಹೋರಾಟ ಮುನ್ನೆಲೆಗೆ ಬಂದಿದೆ. ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೂಡಲ ಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, 2 ಎ ಮೀಸಲಾತಿಗಾಗಿ ಕಳೆದ 2 ವರ್ಷಗಳಿಂದ ಹೋರಾಡುತ್ತಿದ್ದೇವೆ. ಸರ್ಕಾರದ ಗಮನ ಸೆಳೆಯಲು ಸಾಕಷ್ಟು ಹೋರಾಟ ಮಾಡುತ್ತಾ ಬಂದಿದ್ದೇವೆ. ಸಿಎಂ ಆರು ತಿಂಗಳ ಒಳಗಾಗಿ ನಮಗೆ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಆದರೆ ಈವರೆಗೂ ಕೊಟ್ಟ ಮಾತನ್ನು ಸರ್ಕಾರ ಉಳಿಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಸರ್ಕಾರ ನಾಲ್ಕನೇ ಬಾರಿಗೆ ಕೊಟ್ಟ ಮಾತನ್ನು ತಪ್ಪಿದೆ. ಹಾಗಾಗಿ ನಾಳೆ ಹಾವೇರಿ ಜಿಲ್ಲೆಯ ಶಿಗ್ಗಾವಿಯ ಸಿಎಂ ನಿವಾಸದ ಎದುರು ಧರಣಿ ನಡೆಸಲಿದ್ದೇವೆ. ಶಿಗ್ಗಾವಿಯಲ್ಲಿ ಬೃಹತ್​ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಶಿಗ್ಗಾವಿ ಚೆನ್ನಮ್ಮ ವೃತ್ತದಿಂದ ಬೆಳಗ್ಗೆ 9 ಗಂಟೆಗೆ ರ್ಯಾಲಿ ಮೂಲಕ ಸಿಎಂ ನಿವಾಸದ ಎದುರು ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ. ಕಳೆದೊಂದು ವರ್ಷದಿಂದ ಸಿಎಂ ಮಾತು ತಪ್ಪುತ್ತಲೇ ಬಂದಿದ್ದಾರೆ. ನಾಳೆ ಧರಣಿ ಬಳಿಕ ಮೀಸಲಾತಿ ಸಿಗದೇ ಹೋದಲ್ಲಿ ಅಕ್ಟೋಬರ್​ ಹಾಗೂ ನವೆಂಬರ್​ ತಿಂಗಳಲ್ಲಿ ಬೆಂಗಳೂರು ಚಲೋ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.


25 ಲಕ್ಷ ಸಮುದಾಯದ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿತ್ತೇವೆ. ಈ ಸರ್ಕಾರದಲ್ಲಿ ನಮ್ಮ ಸಮುದಾಯದ 80 ಪ್ರತಿಶತ ಜನರಿದ್ದಾರೆ. ಆದರೆ ಇದೇ ಸರ್ಕಾರ ನಮ್ಮ ಸಮುದಾಯಕ್ಕೆ ಅನ್ಯಾಯ ಎಸಗಿದೆ. ನಮ್ಮ ಶಾಸಕರು ಸದನದ ಒಳಗೆ ಹೋರಾಡುತ್ತಾರೆ, ನಾವು ಹೊರಗೆ ಹೋರಾಡುತ್ತೇವೆ. ಹೋರಾಟದ ಮೂಲಕ ಪಂಚಮಸಾಲಿಗೆ 2 ಎ ಮೀಸಲಾತಿ ನೀಡೇ ತೀರುತ್ತೇವೆ ಎಂದಿದ್ದಾರೆ.


ಸಿಎಂ ಬಸವರಾಜ ಬೊಮ್ಮಾಯಿ ಯಾವುದೇ ಪ್ರಭಾವಿ ವ್ಯಕ್ತಿಯ ಒತ್ತಡಕ್ಕೆ ಒಳಗಾಗಿ ನಮಗೆ ಮೀಸಲಾತಿ ನೀಡಲು ಮೀನಮೇಷ ನೋಡುತ್ತಿದ್ದಾರೆ. ಈ ಸರ್ಕಾರ ನಮಗೆ ಮೀಸಲಾತಿ ಬಗ್ಗೆ ಶೀಘ್ರದಲ್ಲೇ ಸ್ಪಷ್ಟನೆ ನೀಡಲಿ. ಆ ಮಹಾನ್​ ವ್ಯಕ್ತಿ ಯಾರು ಅನ್ನೋದನ್ನು ನಾನೇ ಹೇಳುತ್ತೇನೆ. ಈ ಸರ್ಕಾರ ನಮಗೆ ಮೀಸಲಾತಿ ನೀಡದೇ ಹೋದಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಮಾಡುತ್ತೇವೆ. ಸಮಾಜದ ಒಳಿತಿಗಾಗಿ ನಾವು ಹೋರಾಟ ಮಾಡುತ್ತೇವೆ. ನಾವು ಯಾವುದೇ ಚುನಾವಣೆಯನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿಲ್ಲ ಎಂದಿದ್ದಾರೆ.

ಇದನ್ನು ಓದಿ : Team India New Jersey : ಟಿ20 ವಿಶ್ವಕಪ್: ಟೀಮ್ ಇಂಡಿಯಾದ ಹೊಸ ಜರ್ಸಿ ಅನಾವರಣ; ಹೊಸ ಲುಕ್ ಸೂಪರ್

ಇದನ್ನೂ ಓದಿ : Melukote MLA C.S. Puttaraju :ಸುಮಲತಾರ ಆಣೆ – ಪ್ರಮಾಣದ ಸವಾಲ್​ ಸ್ವೀಕರಿಸಿದ ಮೇಲುಕೋಟೆ ಶಾಸಕ ಸಿ.ಎಸ್​ ಪುಟ್ಟರಾಜು

The struggle for Panchmasali 2A reservation has started again in the state

RELATED ARTICLES

Most Popular