Melukote MLA C.S. Puttaraju : ಸುಮಲತಾರ ಆಣೆ – ಪ್ರಮಾಣದ ಸವಾಲ್​ ಸ್ವೀಕರಿಸಿದ ಮೇಲುಕೋಟೆ ಶಾಸಕ ಸಿ.ಎಸ್​ ಪುಟ್ಟರಾಜು

ಮಂಡ್ಯ : Melukote MLA C.S. Puttaraju : ಮೇಲುಕೋಟೆ ಶಾಸಕ ಸಿ.ಎಸ್​ ಪುಟ್ಟರಾಜು ತಮ್ಮ ಮೇಲೆ ಸಂಸದೆ ಸುಮಲತಾ ಅಂಬರೀಶ್​ ಹೊರಿಸಿರುವ ಕಮಿಷನ್​ ಆರೋಪದ ಕುರಿತಂತೆ ಗುಡುಗಿದ್ದು ಆಣೆ ಪ್ರಮಾಣದ ಸವಾಲನ್ನು ಒಪ್ಪಿಕೊಂಡಿದ್ದಾರೆ. ಮೇಲುಕೋಟೆಯ ಸನ್ನಿಧಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸುಮಲತಾ ನಿಗದಿ ಮಾಡಿದ ದಿನಾಂಕದಂದು ನಾನು ಆಣೆ ಪ್ರಮಾಣ ಮಾಡಲು ತಯಾರಿದ್ದೇನೆ. ಶಾಸಕನಾಗಿ ನಾನು ಸದನದಲ್ಲಿ ಯಾವ ರೀತಿ ಮಾತನಾಡಿದ್ದೇನೆ ಅನ್ನೋದನ್ನು ಸುಮಲತಾ ಇತಿಹಾಸ ತೆಗೆದು ನೋಡಲಿ ಎಂದು ಗುಡುಗಿದ್ದಾರೆ.

ಜನ ಸುಮಲತಾರನ್ನು ಅಂಬರೀಶ್​ ಪತ್ನಿ ಎಂಬ ಕಾರಣಕ್ಕೆ ಗೆಲ್ಲಿಸಿದ್ದಾರೆ. ಇವರನ್ನು ಮಂಡ್ಯ ಜನತೆ ಆಯ್ಕೆ ಮಾಡಿದ್ದು ಕೆಲಸ ಮಾಡಲಿ ಅಂತಾ. ಸುಮಲತಾರ ಟಾರ್ಗೆಟ್​ ಜೆಡಿಎಸ್​. ಜೆಡಿಎಸ್​ ನಾಯಕರ ವಿರುದ್ಧ ಮಾತನಾಡಿ ತಾನು ಹೀರೋ ಆಗಬೇಕು ಎಂಬ ಬಯಕೆ ಇವರದ್ದು, ಮಾತನಾಡಿದ ಕೂಡಲೇ ನಾನು ದೊಡ್ಡ ಲೀಡರ್​ ಆಗ್ತೇನೆ ಎಂದುಕೊಂಡಿದ್ದರೆ ಅದನ್ನು ಈಗಲೇ ಬಿಡಿ. ಗೌರವದಿಂದ ರಾಜಕಾರಣ ಮಾಡಿ ಎಂದು ಕಿವಿ ಹಿಂಡಿದ್ದಾರೆ.

ನನ್ನ ವ್ಯಕ್ತಿತ್ವ ಏನು ಅನ್ನೋದು ಅಂಬರೀಶ್​ಗೆ ಗೊತ್ತು. ಅಂಬರೀಶ್​ ಚುನಾವಣೆಯಲ್ಲಿ ನಿಂತ ಸಂದರ್ಭದಲ್ಲಿ ನಾನು ಹಣ ಹಾಕಿದ್ದೆ. ನನ್ನ ಹಾಗೂ ಅಂಬರೀಶ್​ ಸಂಬಂಧ ಎಂತದ್ದು ಅನ್ನೋದನ್ನು ಇವರು ರಾಕ್​ಲೈನ್​ಗೆ ಹೋಗಿ ಕೇಳಲಿ. ಅಂಬರೀಶ್ ಕುಟುಂಬ ಸೇರಿದಂತೆ ಜಿಲ್ಲೆಯ ಎಲ್ಲಾ ರಾಜಕಾರಣಿಗಳು ಮೂಡಾ ಸೈಟ್ ಪಡೆದಿದ್ದಾರೆ.ಇದೇ ವಿಚಾರವಾಗಿ ನನ್ನ ಮೇಲೆ ಕೋರ್ಟ್ ಕೇಸಿದೆ. ಅವರ ಬಳಿ ನನ್ನ ವಿರುದ್ಧ ದಾಖಲೆಗಳಿದ್ದರೆ ತರಲಿ. ನಮ್ಮ ಬಳಿಯೂ ದಾಖಲೆಗಳಿವೆ. ಅವರ ಕುಟುಂಬವೂ ಮೂಡಾ ಸೈಟ್​ ಪಡೆದಿದೆ. ಚುನಾವಣೆ ಬಂದಾಗ ಈ ಸೈಟ್​ ವಿಚಾರ ಹೊರ ತೆಗೆಯುತ್ತಾರೆ. ಇದೊಂದು ದೊಡ್ಡ ಷಡ್ಯಂತ್ರ ಎಂದಿದ್ದಾರೆ.

ನಾನು ಚೆಲುವನಾರಾಯಣ ಸ್ವಾಮಿ ಸನ್ನಿಧಿಯಲ್ಲಿ ನಿಂತು ಮಾತನಾಡುತ್ತಿದ್ದೇನೆ. ಮೂಡಾ ಸೈಟ್​ ವಿಚಾರದಲ್ಲಿ ಕೋರ್ಟ್ ತೀರ್ಪು ನಮ್ಮ ಪರ ಇರಲಿದೆ. ಅಜಾತ ಶತ್ರು ಅಂಬೀರಶಣ್ಣನ್ನನ್ನು ನೆನೆದು ಸುಮಲತಾ ಕೆಲಸ ಮಾಡಲಿ. ಈ ರೀತಿ ಲಘು ಮಾತು ಅವರಿಗೆ ಶೋಭೆ ತರಲ್ಲ. ನನ್ನ ಸ್ವಂತ ಹಣದಿಂದ ನಾನು ಕ್ಷೇತ್ರದ ಜನತೆ ಸೇವೆ ಮಾಡಿದ್ದೇನೆ. ರಾಜಕೀಯ ಜೀವನದಲ್ಲಿ ಸಂಪಾದನೆ ಮಾಡಿದ್ದಕ್ಕಿಂತ ಕಳೆದುಕೊಂಡಿದ್ದು ಹೆಚ್ಚು. ಅವರ ಬಳಿ ದಾಖಲೆಗಳಿದ್ದರೆ ತರಲಿ . ನಾನು ಚರ್ಚೆಗೆ ಸಿದ್ಧ ಎಂದಿದ್ದಾರೆ.

ಇದನ್ನು ಓದಿ : Ambulance driver :41 ಗಂಟೆಯಲ್ಲಿ 2700 ಕಿ.ಮೀ ಆಂಬ್ಯುಲೆನ್ಸ್ ಚಾಲನೆ ಮಾಡಿ ರೋಗಿಯನ್ನು ಸುರಕ್ಷಿತವಾಗಿ ತಲುಪಿಸಿದ ಅಂಬ್ಯುಲೆನ್ಸ್ ಚಾಲಕ

ಇದನ್ನೂ ಓದಿ : Team India New Jersey : ಟಿ20 ವಿಶ್ವಕಪ್: ಟೀಮ್ ಇಂಡಿಯಾದ ಹೊಸ ಜರ್ಸಿ ಅನಾವರಣ; ಹೊಸ ಲುಕ್ ಸೂಪರ್

Melukote MLA C.S. Puttaraju accepted Sumaltar’s Oath – scale challenge

Comments are closed.