ಶಿವಮೊಗ್ಗ : Ganesh festival in Shimoga : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಉಂಟಾಗಿದ್ದ ಸಾವರ್ಕರ್ ಫೋಟೋ ವಿವಾದವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇಡೀ ರಾಜ್ಯವೇ ಶಿವಮೊಗ್ಗದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದ ಈ ಸಾವರ್ಕರ್ ಫೋಟೋ ವಿವಾದವು ಈಗಷ್ಟೇ ತಣ್ಣಗಾಗಿದೆ. ಆದರೆ ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ ಮತ್ತೊಂದು ಗಲಭೆ ಸೃಷ್ಟಿಸಲು ಪ್ಲಾನ್ ನಡೆದಿದೆಯಾ ಎಂಬ ಅನುಮಾನ ಮೂಡಿಸಿದೆ.
ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿರುವ ದೇವಸ್ಥಾನವೊಂದರಲ್ಲಿ ಅನಾಮಿಕ ಪತ್ರವೊಂದು ದೊರಕಿದ್ದು ಇದರಲ್ಲಿ ಗಣೇಶೋತ್ಸವಕ್ಕೂ ಮುನ್ನ ಶಿವಮೊಗ್ಗದಲ್ಲಿ ಮತ್ತೊಂದು ಸಂಘರ್ಷವನ್ನು ನಡೆಸಲು ಹುನ್ನಾರ ನಡೆದಿರುವ ಬಗ್ಗೆ ಸಾಕ್ಷ್ಯ ದೊರಕಿದೆ. ಪತ್ರ ದೊರಕಿದ ತಕ್ಷಣವೇ ಅಲರ್ಟ್ ಆಗಿರುವ ಶಿವಮೊಗ್ಗ ಕೋಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಸಿಕೊಂಡಿದ್ದು ತನಿಖೆಯನ್ನು ಚುರುಕುಗೊಳಿಸಿದ್ದಾರೆ .
ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿರುವ ಗಂಗಾ ಪರಮೇಶ್ವರ ದೇವಸ್ಥಾನದ ಬಳಿ ಈ ಪತ್ರವನ್ನು ಇಡಲಾಗಿದೆ. ದೇವಾಲಯದ ಪಕ್ಕದಲ್ಲಿಯೇ ಅಂಗಡಿ ನಡೆಸುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಅಂಗಡಿ ಬಂದ್ ಮಾಡಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಲೆಟರ್ ಅವರ ಕಣ್ಣಿಗೆ ಬಿದ್ದಿದೆ. ಪೊಲೀಸ್ ಇಲಾಖೆಗೆ ಈ ಪತ್ರವನ್ನು ಕೊಟ್ಟು ಕೋಮು ಗಲಭೆ ತಪ್ಪಿಸಿ, ಮೂವರ ಪ್ರಾಣ ಉಳಿಸಿ ಎಂದು ಪತ್ರದಲ್ಲಿ ಬರೆಯಲಾಗಿದೆ .
ಈ ಪತ್ರವನ್ನು ಓದಿದ ಬಳಿಕ ಕೂಡಲೇ ಶಿವಮೊಗ್ಗದಲ್ಲಿರುವ ಗಾಂಧಿ ಬಜಾರ್ ಅಂಗಡಿ ಮಾಲೀಕ ಕೋಟೆ ಠಾಣೆಗೆ ತೆರಳಿ ಈ ಪತ್ರವನ್ನು ನೀಡಿದ್ದಾರೆ. ಯಾರೋ ಅಪರಿಚಿತರು ಶಿವಮೊಗ್ಗದಲ್ಲಿ ಮತ್ತೊಂದು ಗಲಭೆ ನಡೆಸಲು ಪ್ಲ್ಯಾನ್ ಮಾಡಿದ್ದಾರೆ ಎಂದು ಆರೋಪಿಸಿ ದೂರನ್ನು ದಾಖಲಿಸಿದ್ದಾರೆ.
ಈ ಪತ್ರದಲ್ಲಿ ಅಪರಿಚಿತನೊಬ್ಬ ಗಲಭೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಗಾಂಧಿ ಬಜಾರ್ ಬಳಿ ಮೂವರು ಗಾಂಜಾ ಸೇದುತ್ತಾ ಮಾತನಾಡಿಕೊಳ್ಳುತ್ತಿದ್ದರು. ಮೂವರು ಮಾತನಾಡಿಕೊಂಡಿರುವುದನ್ನು ಕೇಳಿಸಿಕೊಂಡು ನಾನು ಭಯಭೀತನಾಗಿದ್ದೇನೆ. ಮೂವರನ್ನು ಮಂಗಳೂರಿನಿಂದ ಕರೆಸಬೇಕು. ಅವರು ಮೊಬೈಲ್ ಫೋನ್ ಬಳಕೆ ಮಾಡಬಾರದು. ಯಾವುದೇ ಕಾರಣಕ್ಕೂ ಸ್ಥಳೀಯರಿಗೆ ಈ ವಿಚಾರ ತಿಳಿಯಬಾರದು. ಗಲಾಟೆ ನಡೆದರೆ ಮಾತ್ರ ಗಣೇಶೋತ್ಸವ ಆಚರಣೆಯನ್ನು ತಡೆಯೋಕೆ ಸಾಧ್ಯ ಎಂದು ಪತ್ರದಲ್ಲಿ ಅಪರಿಚಿತ ಬರೆದಿದ್ದಾನೆ.
ಈ ಪತ್ರದಲ್ಲಿ ಅಪರಿಚಿತ ವ್ಯಕ್ತಿಯು ಮೊಹಮ್ಮದ್ ಫೈಸಲ್ ಅಲಿಯಾಸ್ ಚೆನ್ನು ಎಂಬಾತನ ಹೆಸರನ್ನು ಉಲ್ಲೇಖಿಸಿದ್ದಾನೆ. ಈ ವ್ಯಕ್ತಿಯು ಗಾಂಜಾ ಸೇವನೆ ಮಾಡೋದು ಮಾತ್ರವಲ್ಲದೇ ಗಾಂಜಾ ಮಾರಾಟವನ್ನೂ ಮಾಡುತ್ತಾನೆ. ಆಜಾದ್ ನಗರದಲ್ಲಿ ಈತ ರೌಡಿಯಂತೆ ವರ್ತಿಸುತ್ತಾನೆಂದು ಪತ್ರದಲ್ಲಿ ಬರೆಯಲಾಗಿದೆ. ಅನಾಮಧೇಯ ವ್ಯಕ್ತಿಯ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಶಿವಮೊಗ್ಗ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನು ಓದಿ :Yatnal outrage : ನಾನು ಆ ಒಂದು ಕೆಲಸ ಮಾಡಿದ್ದರೆ ಇಂದು ಮುಖ್ಯಮಂತ್ರಿ ಸ್ಥಾನದಲ್ಲಿರುತ್ತಿದ್ದೆ : ಯತ್ನಾಳ್ ಹೊಸ ಬಾಂಬ್
ಇದನ್ನೂ ಓದಿ : satish jarkiholi : ಬಿಜೆಪಿಗರು ಸಾವರ್ಕರ್ ಫೋಟೋ ಇಟ್ಟರೆ ಗಣೇಶೋತ್ಸವದಲ್ಲಿ ನಾವು ಅಂಬೇಡ್ಕರ್ ಫೋಟೋ ಇಡ್ತೇವೆ : ಸತೀಶ್ ಜಾರಕಿಹೊಳಿ
There is a plan to create a ruckus during Ganesh festival in Shimoga