satish jarkiholi : ಬಿಜೆಪಿಗರು ಸಾವರ್ಕರ್​ ಫೋಟೋ ಇಟ್ಟರೆ ಗಣೇಶೋತ್ಸವದಲ್ಲಿ ನಾವು ಅಂಬೇಡ್ಕರ್​ ಫೋಟೋ ಇಡ್ತೇವೆ : ಸತೀಶ್​ ಜಾರಕಿಹೊಳಿ

ಬೆಳಗಾವಿ: satish jarkiholi : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಜ್ಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಸಾವರ್ಕರ್​ ಭಾವಚಿತ್ರದ ಗಲಾಟೆ ಇದೀಗ ಗಣೇಶ ಹಬ್ಬದವರೆಗೂ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಬಿಜೆಪಿಯವರು ಸಾವರ್ಕರ್​ ಭಾವಚಿತ್ರಗಳನ್ನು ಇರಿಸಿದರೆ ನಾವು ಅಂಬೇಡ್ಕರ್​, ಬಸವಣ್ಣರ ಭಾವಚಿತ್ರಗಳನ್ನು ಇಡುತ್ತೇವೆ. ರಾಯಣ್ಣನ ಅಭಿಮಾನಿಗಳು ಅವರ ಭಾವಚಿತ್ರಗಳನ್ನೂ ಇಡಲಿ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಗುಡುಗಿದ್ದಾರೆ.


ಬೆಳವಾವಿಯ ಕಾಂಗ್ರೆಸ್​ ಭವನದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಸಾರ್ವಜನಿಕವಾಗಿ ಮಂಟಪಗಳಲ್ಲಿ ಗಣೇಶನ ಮೂರ್ತಿಯನ್ನು ಕುಳ್ಳಿರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಬಿಜೆಪಿಗರು ಇದನ್ನೂ ಪ್ರಚಾರ ಕಾರ್ಯಕ್ಕೆ ಬಳಕೆ ಮಾಡಿಕೊಳ್ತಿದ್ದಾರೆ ಎಂದು ಕಿಡಿಕಾರಿದರು.


ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿಯೂ ಬಿಜೆಪಿ ಫೋಟೋ ರಾಜಕಾರಣ ಮಾಡಿದೆ. ಜವಹರಲಾಲ್​ ನೆಹರೂ ಫೋಟೋವನ್ನು ಕೈ ಬಿಟ್ಟು ಬಿಜೆಪಿ ಸರ್ಕಾರದ ಫ್ಲೆಕ್ಸ್​ನಲ್ಲಿ ಗೋಡ್ಸೆಗೆ ಅವಕಾಶ ನೀಡಲಾಗಿತ್ತು. ಇದೇ ಬಿಜೆಪಿಯ ಅಜೆಂಡಾವಾಗಿದೆ . ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಅಂತಾ ಅಸಮಧಾನ ಹೊರ ಹಾಕಿದರು.


ಇದೇ ವೇಳೆ ಯಡಿಯೂರಪ್ಪರಿಗೆ ಪಕ್ಷದಲ್ಲಿ ಸಿಕ್ಕಿರುವ ವಿಶೇಷ ಸ್ಥಾನಮಾನದ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯರ ಜನ್ಮದಿನೋತ್ಸವದ ಪ್ರಯುಕ್ತ ಮಾಡಲಾದ ಸಿದ್ದರಾಮೋತ್ಸವರ ಯಡಿಯೂರಪ್ಪರಿಗೆ ಪ್ಲಸ್​ ಪಾಯಿಂಟ್​ ನೀಡಿದೆ. ಇಲ್ಲಿ ಸಿದ್ದರಾಮಯ್ಯರ ಶಕ್ತಿಯನ್ನು ನೋಡಿದ ಬಳಿಕ ಬಿಜೆಪಿಗರು ಯಡಿಯೂರಪ್ಪರಿಗೆ ಪಕ್ಷದಲ್ಲಿ ಉನ್ನ ಸ್ಥಾನ ನೀಡುವ ನಿರ್ಣಯ ಕೈಗೊಂಡಿದ್ದಾರೆ. ಸಿದ್ದರಾಮೋತ್ಸವ ಸೋತಿದ್ದರೆ ಯಡಿಯೂರಪ್ಪರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಇದನ್ನು ಓದಿ : Guidelines announced for Ganesh festival :ಪಿಓಪಿ ಗಣೇಶ್, ಪ್ಲ್ಯಾಸ್ಟಿಕ್ ಬ್ಯಾನ್, ನಿಯಮ ಉಲ್ಲಂಘಿಸಿದ್ರೆ ಕ್ರಿಮಿನಲ್‌ ಕೇಸ್‌ : ಗಣೇಶೋತ್ಸವಕ್ಕೆ ಮಾರ್ಗಸೂಚಿ ಪ್ರಕಟ

ಇದನ್ನೂ ಓದಿ : Yatnal outrage : ನಾನು ಆ ಒಂದು ಕೆಲಸ ಮಾಡಿದ್ದರೆ ಇಂದು ಮುಖ್ಯಮಂತ್ರಿ ಸ್ಥಾನದಲ್ಲಿರುತ್ತಿದ್ದೆ : ಯತ್ನಾಳ್​ ಹೊಸ ಬಾಂಬ್​​

satish jarkiholi about veer savarkar poster issue at ganesh festival

Comments are closed.