ಭಾನುವಾರ, ಏಪ್ರಿಲ್ 27, 2025
Homedistrict Newsಟ್ರೋಲ್ ಕುಂದಾಪ್ರದಿಂದ ವಿಭಿನ್ನ ಪ್ರಯತ್ನ : ಕುಂದಗನ್ನಡ ಚಾಲೆಂಜ್ ಸ್ವೀಕರಿಸೋಕೆ ನೀವೂ ರೆಡಿನಾ ?

ಟ್ರೋಲ್ ಕುಂದಾಪ್ರದಿಂದ ವಿಭಿನ್ನ ಪ್ರಯತ್ನ : ಕುಂದಗನ್ನಡ ಚಾಲೆಂಜ್ ಸ್ವೀಕರಿಸೋಕೆ ನೀವೂ ರೆಡಿನಾ ?

- Advertisement -

ಕುಂದಗನ್ನಡ ಭಾಷೆ ಬೆಳವಣಿಗಾಗಿ ಸಾಕಷ್ಟು ಹೋರಾಟಗಳು, ಪ್ರಯತ್ನಗಳು ನಡೆಯುತ್ತಲೇ ಇವೆ. ಕುಂದಾಪ್ರದಲ್ಲಿ ಟ್ರೋಲ್ ಹಾಗೂ ವಿಭಿನ್ನ ರೀತಿಯಲ್ಲಿ ಕುಂದಾಪುರದ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಯತ್ನಿಸುತ್ತಿದೆ ಟ್ರೋಲ್ ಕುಂದಾದ್ರದ್ ಕುಡಿ ಸಾಮಾಜಿಕ ಜಾಲತಾಣದ ಪೇಜ್. ವಿಭಿನ್ನ ಸಮಾಜಮುಖಿ ಕಾರ್ಯಗಳ ಜೊತೆಗೆ ಕುಂದಕನ್ನಡದತ್ತ ಯುವ ಸಮೂಹವನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಇದೀಗ ಗ್ರಾಮೀಣ ಭಾಷೆಯಾದ ಕುಂದಗನ್ನಡ ಬೆಳವಣಿಗೆಗೆ ಕುಂದಾಪ್ರ ಗನ್ನಡ ವಿಡಿಯೋ ಚಾಲೆಂಜ್ ನೀಡಿದೆ.

ಕುಂದಗನ್ನಡ ಭಾಷೆಯನ್ನು ಮಾತನಾಡುವ ಹಲವಾರು ಪ್ರತಿಭೆಗಳು ಬೆಳಕಿಗೆ ತರುವ ಜೊತೆಗೆ, ಕುಂದಗನ್ನಡವನ್ನು ಆದಷ್ಟು ಜನರಿಗೆ ಅತೀ ವೇಗವಾಗಿ ಕರ್ನಾಟಕದ ಎಲ್ಲಾ ಭಾಗದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಟ್ರೋಲ್ ಕುಂದಾಪುರ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಜನರು ತಮ್ಮ ಸಮಯವನ್ನು ವಿಡಿಯೋ ಮಾಡಲು ಉಳಿದ ಭಾಷೆಗಳಲ್ಲಿನ ಡೈಲಾಗ್ ಅಥವಾ ಹಾಡುಗಳಲ್ಲಿ ವಿನಿಯೋಗಿಸುತ್ತಿದ್ದಾರೆ, ಅದೇ ಪ್ರಯತ್ನವನ್ನು ನಮ್ಮ ಕುಂದಗನ್ನಡದಲ್ಲಿ ಮಾಡಿದಾಗ ಇತರರಿಗೆ ನಮ್ಮ ಭಾಷೆಯ ಸೊಗಡು ತಿಳಿಯುತ್ತದೆ ಹಾಗೂ ನಮ್ಮ ಜನರಿಗೆ ಭಾಷೆಯ ಮೇಲಿನ ಪ್ರೀತಿ ಹೆಚ್ಚುತ್ತದೆ. ಮಾತ್ರವಲ್ಲದೆ ಹಲವಾರು ಪ್ರತಿಭೆಗಳು ಬೆಳಕಿಗೆ ಬರುತ್ತಾರೆ. ಮುಂದೆ ಕುಂದಗನ್ನಡ ಆಲ್ಬಂ, ಕಿರುಚಿತ್ರ ಹಾಗೂ ಸಿನೆಮಾಗಳಿಗೆ ಬೇಡಿಕೆ ದೊರೆತಂತಾಗುತ್ತದೆ ಎಂದು ಕುಂದಾಪ್ರದ್ ಕುಡಿ ಟ್ರೋಲ್ ಪೇಜ್ ಸಂಸ್ಥಾಪಕ ಅಡ್ಮಿನ್ ಶಾಶ್ವತ್ ಶೆಟ್ಟಿ ತಿಳಿಸಿದ್ದಾರೆ. ಈಗಾಗಲೇ ಜನರಿಂದ ಸಾಕಷ್ಟು ಮೆಚ್ಚುಗೆಯ ಅಭಿಪ್ರಾಯದೊಂದಿಗೆ ಬಹಳಷ್ಟು ಕುಂದಗನ್ನಡ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ನಮಗೆ ಸಂತಸದ ವಿಷಯ ಎಂದು ತಿಳಿಸಿದ್ದಾರೆ.

ಸ್ಟಾರ್ಸ್ ಗಳಿಗೆ ಚಾಲೆಂಜ್ :
ಕುಂದಾಪ್ರ ಭಾಗದ ಹಲವಾರು ಕಲಾವಿದರು, ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೆಸರನ್ನು ಮಾಡಿದ್ದಾರೆ. ಅವರನ್ನು ಗುರುತಿಸಿ ಅವರಿಗೆ ಮನವಿ ಮಾಡಿಕೊಂಡು ಚಾಲೆಂಜ್ ನೀಡಲಿದ್ದೇವೆ. ಇದರಿಂದ ಮತ್ತಷ್ಟು ಜನರು ಪ್ರೇರೇಪಣೆಗೊಂಡು ಕುಂದಗನ್ನಡ ಬೆಳವಣಿಗೆಯಲ್ಲಿ ಸಹಕಾರಿಯಾಗಬಹುದೆಂಬ ನಿರೀಕ್ಷೆ ಇದೆ.

ಸ್ವದೇಶಿ ಆ್ಯಪ್ ಮತ್ತು ಮೊಬೈಲ್ ಕ್ಯಾಮರಾಕ್ಕೆ ಒತ್ತು :
ಇಲ್ಲಿ ಎಲ್ಲರೂ ಗಮನಿಸಿಬೇಕಾದದ್ದು, ಈಗಾಗಲೇ ಎಲ್ಲರೂ ವಿದೇಶಿ ಕಂಪನಿಗಳ ಡಬ್ಸ್ ಸ್ಮಾಶ್ ಅನ್ನು ಅನ್ ಇನ್ಟಾಲ್ ಮಾಡುವ ನಿರ್ಧಾರವನ್ನು ಈ ತಂಡವು ಪ್ರೋತ್ಸಾಹಿಸಿ, ಇಲ್ಲಿ ವಿಡಿಯೋ ಮಾಡುವವರು ಸ್ವದೇಶಿ ಆ್ಯಪ್ ಹಾಗೂ ಮೊಬೈಲ್ ಕ್ಯಾಮರಾ ಬಳಸಿ ವಿಡಿಯೋ ಮಾಡಬೇಕು. ನೀವು ಕೂಡ ಕುಂದಗನ್ನಡ ಚಾಲೆಂಜ್ ತೆಗೆದುಕೊಂಡು ಕುಂದಗನ್ನಡ ಬೆಳಸುವಲ್ಲಿ ಸಹಕಾರಿಯಾಗಿ ಎಂದು ಟೀಮ್ ಟ್ರೋಲ್ ಕುಂದಾಪ್ರದ್ ಕುಡಿ ಮನವಿ ಮಾಡಿಕೊಂಡಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular