Union Minister Prahlad Joshi : ಡಿಜೆ ಬಳಸದಂತೆ ಪೊಲೀಸರು ಮನವಿ ಮಾಡಿದ್ದಾರಷ್ಟೇ : ಮುತಾಲಿಕ್​ ಆಕ್ರೋಶಕ್ಕೆ ಪ್ರಹ್ಲಾದ್​ ಜೋಶಿ ಪ್ರತಿಕ್ರಿಯೆ

ಧಾರವಾಡ : Union Minister Prahlad Joshi : ವಿಘ್ನವಿನಾಶಕನ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ನಾಡಿನೆಲ್ಲೆಡೆ ಗಣೇಶನ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸೋದಕ್ಕೆ ಜನ ಸಿದ್ದತೆಯನ್ನು ಮಾಡಿಕೊಂಡಿದ್ದಾರೆ. ಆದ್ರೆ ಈ ನಡುವೆ ಗಣೇಶ ಹಬ್ಬಕ್ಕೆ ಡಿ.ಜೆ ನಿರ್ಬಂಧ ವಿಚಾರ ಬಹಳಷ್ಟು ಸದ್ದು ಮಾಡುತ್ತಿದೆ. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಣೇಶೋತ್ಸವಕ್ಕೆ ಡಿ.ಜೆ ಹಚ್ಚಿ, (DJ in Ganeshotsava) ಡಬ್ಬಲ್ ಸೌಂಡ್ ಹಾಕಿ‌ ಎಂದು ಹೇಳಿರುವುದು ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಗಣೇಶ ಹಬ್ಬಕ್ಕೆ ಡಿ.ಜೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯು ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿರುವ ಅವರು ಕರೋನಾ ಕಾರಣಕ್ಕೆ ಮೂರು ವರ್ಷದ ಬಳಿಕ ಹಬ್ಬಕ್ಕೆ ಅವಕಾಶ ಸಿಕ್ಕಿದೆ ಹೀಗಾಗಿ ಶಾಂತಿ ಸೌಹಾರ್ದತೆಯಿಂದ ಹಬ್ಬ ಮಾಡಬೇಕಿದೆ ಎಂದು ಹೇಳಿದ್ದಾರೆ.

ಡಿ.ಜೆ ಅನುಮತಿ ಪಡೆಯಲ್ಲ ಎಂಬ ಪ್ರಮೋದ್ ಮುತಾಲಿಕ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಡಿ.ಜೆ ಬಗ್ಗೆ ಯಾರು ಏನೇ ಹೇಳಿರಲಿ, ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ. ಆದ್ರೆ ಪೊಲೀಸರು ಡಿ.ಜೆ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ. ಅದರರ್ಥ ಕ್ರಮ ತೆಗೆದುಕೊಳ್ಳುತ್ತೇವೆ ಅಂತಲ್ಲ, ಮನವಿಯಷ್ಟೇ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಮನವಿ ಮಾಡಿಕೊಂಡಿದ್ದಾರೆ. ಇತಿಮಿತಿಯಲ್ಲು ಮಾಡಿ ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೆ ಪರಿಹಾರದ ದಾರಿ ಇದೆಯಾ ಎಂದು ನೋಡುತ್ತೇವೆ. ಇದಕ್ಕೆ ಸಂಬಂಧಿಸಿದವರ ಜೊತೆ ಸಭೆ ಮಾಡುತ್ತೇವೆ. ಈ ಸಮಸ್ಯೆಗೆ ಪರಿಹಾರ ಹುಡುಕುತ್ತೇವೆ ಎಂದು ಸಚಿವ ಜೋಶಿ ಹೇಳಿದ್ದಾರೆ.

ಆದ್ರೆ ಈ ನಡುವೆ ಪೊಲೀಸ್ ಇಲಾಖೆ ಗಣೇಶ ಮಂಡಳಿಯವರಿಗೆ ಡಿಜೆ ನಿಷೇಧಿಸಿದೆ. ಇದನ್ನು ಪ್ರಶ್ನಿಸಿದಾಗ ಅವರು ಸುಪ್ರೀಂ ಕೋರ್ಟ್ ಆದೇಶ ತೋರಿಸುತ್ತಾರೆ. ಅದೇ ಆದೇಶ ಪ್ರಾರ್ಥನಾ ಮಂದಿರಗಳ ಮೈಕ್ ಬಗ್ಗೆಯೂ ಹೇಳಿದೆಯಲ್ಲವೇ? ಹಾಗಾದರೆ ಅದನ್ನೇಕೆ ಪಾಲಿಸುತ್ತಿಲ್ಲ ಎಂಬುದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ವಾದವಾಗಿದೆ. ವರ್ಷಕ್ಕೆ ಒಂದೇ ಬಾರಿ ಡಿಜೆ ಹಚ್ಚಿದರೆ ನಿಮ್ಮ ಕಣ್ಣಿಗೆ ಬೀಳುತ್ತೆ, ಪ್ರತಿ ದಿನ ಐದು ಬಾರಿ ಮೈಕ್ ಹಚ್ಚೋದು ಕಾಣೋದಿಲ್ಲವೇ?. ಅದನ್ನೇಕೆ ನೀವು ಕೇಳುತ್ತಿಲ್ಲ ಎಂಬುದು ಮುತಾಲಿಕ್ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಗಣೇಶ ಹಬ್ಬಕ್ಕೆ ಡಿ.ಜೆ ನಿರ್ಬಂಧ ವಿಚಾರ ಮುಂದೆ ಯಾವ ಬೆಳವಣಿಗೆಗೆ ಕಾರಣವಾಗುತ್ತೆ ಎಂದು ಕಾದು ನೋಡಬೇಕಿದೆ.

ಇದನ್ನು ಓದಿ : Modi praised Karnataka’s lake : ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಕರ್ನಾಟಕದ ಕೆರೆಯನ್ನು ಹೊಗಳಿದ ಪ್ರಧಾನಿ ಮೋದಿ

ಇದನ್ನೂ ಓದಿ Rules for Public Ganesha Festival : ಬಲವಂತ ಚಂದಾ ವಸೂಲಿ ಮಾಡಂಗಿಲ್ಲ,ಕಂಡಕಂಡಲ್ಲಿ ಬ್ಯಾನರ್ ಕಟ್ಟೋ ಹಾಗಿಲ್ಲ : ಹೀಗಿದೆ ನೋಡಿ ಗಣೇಶೋತ್ಸವ ನಿಯಮ:

Union Minister Prahlad Joshi clarified about the use of DJ in Ganeshotsava

Comments are closed.