Yatnal outrage : ನಾನು ಆ ಒಂದು ಕೆಲಸ ಮಾಡಿದ್ದರೆ ಇಂದು ಮುಖ್ಯಮಂತ್ರಿ ಸ್ಥಾನದಲ್ಲಿರುತ್ತಿದ್ದೆ : ಯತ್ನಾಳ್​ ಹೊಸ ಬಾಂಬ್​​

ಹಾವೇರಿ : Yatnal outrage : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ರಾಜ್ಯ ರಾಜಕಾರಣದಲ್ಲಿ ವಿವಿಧ ರೀತಿಯ ಟ್ವಿಸ್ಟ್​ಗಳು ಎದುರಾಗುತ್ತಲೇ ಇದೆ. ಈ ಎಲ್ಲದರ ನಡುವೆ ಇದೀಗ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಆ ಒಂದು ಕೆಲಸ ನಾನು ಮಾಡಿದ್ದರೆ ಇಂದು ನಾನೇ ಸಿಎಂ ಆಗಿರುತ್ತಿದ್ದೆ ಎಂದು ಹೇಳುವ ಮೂಲಕ ಹೊಸ ಬಾಂಬ್​ ಸಿಡಿಸಿದ್ದಾರೆ .


ಶಿಗ್ಗಾಂವಿ ಪಟ್ಟಣದ ಕಿತ್ತೂರು ಚೆನ್ನಮ್ಮ ಸರ್ಕಲ್​ನಲ್ಲಿ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ಕಳೆದೆರಡು ತಿಂಗಳ ಹಿಂದೆ ಸಿಎಂ ಬೊಮ್ಮಾಯಿ ಮೂರು ತಿಂಗಳು ಸಮಯ ಕೇಳಿದ್ದರು. ನಾನು ಎಲ್ಲರೊಂದಿಗೆ ಅಡ್ಜಸ್ಟ್​​ ಆಗಿದ್ದರೆ ಇಂದು ನೀವ್ಯಾರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಇರುತ್ತಿರಲಿಲ್ಲ. ನಾನೇ ಸಿಎಂ ಆಗಿ ಇರ್ತಿದ್ದೆ ಎಂದು ಹೇಳಿದ್ದಾರೆ.


ನಿನ್ನೆ ಸಿಎಂ ಬೊಮ್ಮಾಯಿ ನಮ್ಮ ಸಮಾಜದ ಸಚಿವ ಸಿ.ಸಿ ಪಾಟೀಲ್​ರನ್ನು ಕರೆದು ಮತ್ತೊಂದು ಅವಕಾಶ ಕೇಳಿದ್ದಾರೆ. ಧ್ವನಿ ಇಲ್ಲದ ಸಮಾಜಗಳಿಗೆ ನಮ್ಮ ಸ್ವಾಮೀಜಿ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಹೋರಾಟಗಳ ಬಗ್ಗೆ ನಿರ್ಣಯ ಮಾಡುತ್ತೇವೆ. ಮುಂದಿನ 2 ತಿಂಗಳಲ್ಲಿ ಇಪ್ಪತ್ತೈದು ಲಕ್ಷ ಜನರನ್ನು ಸೇರಿಸಿ ಈ ಬಗ್ಗೆ ನಿರ್ಣಯ ಮಾಡುತ್ತೇವೆ ಎಂದು ಹೇಳಿದ್ದಾರೆ.


ಇದೇ ವೇಳೆ ಸಂಪುಟ ವಿಸ್ತರಣೆ ವಿಚಾರವಾಗಿಯೂ ಮಾತನಾಡಿದ ಅವರು, ಯಾವನಿಗೆ ಬೇಕಾಗಿದೆ ಮಂತ್ರಿಗಿರಿ..? ಆರು ತಿಂಗಳಲ್ಲಿ ಏನು ಕಿಸಿಯೋಕೆ ಆಗುತ್ತೆ..? ನಮ್ಮ ಬಗ್ಗೆ ನಮ್ಮ ಗುರುಗಳ ಬಗ್ಗೆ ಯಾರೂ ಸಂಶಯ ಪಡಬೇಡಿ. ಹಿಂದೊಬ್ಬ ಮುಖ್ಯಮಂತ್ರಿ ನಮಗೆ ಮೋಸ ಮಾಡಿದ್ದಾನೆ ಎಂದು ಬಿಎಸ್​ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದರು.


ಯಾರ್ಯಾರು ಮಂತ್ರಿ ಆಗಬೇಕು, ಮಜಾ ಮಾಡಬೇಕು ಎಂದುಕೊಂಡಿದ್ದೀರಿ ಇಪ್ಪತ್ತೈದು ಲಕ್ಷ ಜನರು ಸೇರಿದಾಗ ಬನ್ನಿ. ಸಮಾಜಕ್ಕೆ ಮೀಸಲಾತಿ ಕೊಡಿಸಲು ಆಗದೇ ಇದ್ದರೆ ನೀವು ಶಾಶ್ವತವಾಗಿ ಮಾಜಿ ಮಂತ್ರಿ, ಮಾಜಿ ಶಾಸಕರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.


ಮೊನ್ನೆ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಮಾಡಿದ ಬಳಿಕ ಜಾದೂ ಬದಲಾಗಿದೆ. ನಾವೂ ಇಪ್ಪತ್ತೈದು ಲಕ್ಷ ಜನರನ್ನು ಸೇರಿಸಿ ಜಾದೂ ಮಾಡೋಣ. ಒಂದು ಕೋಟಿ ಇರುವ ದೊಡ್ಡ ಸಮುದಾಯ ನಮ್ಮದು. ನಾನು ಮೊನ್ನೆ ಪ್ರಹ್ಲಾದ ಜೋಶಿಯನ್ನು ಭೇಟಿಯಾಗಿದ್ದೆ. ನಮ್ಮ ಗುರುಗಳು ಬಿ.ಎಲ್​ ಸಂತೋಷರನ್ನು ಭೇಟಿಯಾಗಿದ್ದಾರೆ. ಕೇಂದ್ರದವರು ಕೊಡುತ್ತೇನೆಂಬ ಭರವಸೆ ನೀಡಿದ್ದಾರೆ. ಆದರೆ ಬೊಮ್ಮಾಯಿ ಸಾಹೆಬ್ರು ಯಾಕೆ ತಡ ಮಾಡುತ್ತಾರೋ ಗೊತ್ತಿಲ್ಲ ಎಂದು ಹರಿಹಾಯ್ದರು.

ಇದನ್ನು ಓದಿ : Mayank Agarwal out : ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವದಿಂದ ಮಯಾಂಕ್’ಗೆ ಕೊಕ್.. ಕುಂಬ್ಲೆ ಬಳಿಕ ಮತ್ತೊಬ್ಬ ಕನ್ನಡಿಗನ ಪಟ್ಟಕ್ಕೆ ಕುತ್ತು

ಇದನ್ನೂ ಓದಿ : MP Pratap Simha : ಕೊಡಗಿನಲ್ಲಿ ಶಾಂತಿ ಕದಡಲು ಕಾರಣ ಸಿದ್ದರಾಮಯ್ಯ : ಪ್ರತಾಪ್​ ಸಿಂಹ ಗುಡುಗು

Yatnal outrage against former CM Yeddyurappa

Comments are closed.