ಉಡುಪಿ : Youth commits suicide:ಈಗೆಲ್ಲ ನಿಮಗೆ ತುರ್ತಾಗಿ ಸಾಲ ಬೇಕು ಅಂದರೆ ಹೆಚ್ಚು ಕಷ್ಟ ಪಡಬೇಕಿಲ್ಲ. ನಿಮಗೆ ಸಾಲ ನೀಡಲೆಂದೇ ಸಾಕಷ್ಟು ಆ್ಯಪ್ಗಳು ತಲೆ ಎತ್ತಿವೆ. ಹೀಗಾಗಿ ಅನೇಕರು ಈ ಆ್ಯಪ್ಗಳ ಮೂಲ ಸಾಲ ಮಾಡಿಕೊಂಡು ಬಿಡ್ತಾರೆ. ಆದರೆ ಬಳಿಕ ಈ ಆ್ಯಪ್ಗಳು ಹೇರುವ ಅತಿಯಾದ ಬಡ್ಡಿದರ ಮಾತ್ರ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ದಾರಿ ಮಾಡಿಕೊಡುತ್ತದೆ. ಇದೇ ರೀತಿ ಮೊಬೈಲ್ ಆ್ಯಪ್ಗಳಲ್ಲಿ ಸಾಲ ಸೋಲ ಮಾಡಿಕೊಂಡಿದ್ದ ಯುವಕನೊಬ್ಬ ಮಾಡಿದ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕುಂದಾಪುರದ ಹೆಮ್ಮಾಡಿಯಲ್ಲಿ ಈ ಘಟನೆ ನಡೆದಿದೆ.ಹರೆಗೋಡು ಕೊಳಹಿತ್ಲು ನಿವಾಸಿಯಾದ ಸಂಜೀವ್ ದೇವಾಡಿಗ ಮತ್ತು ಕನಕ ಎಂಬವರ ಪುತ್ರ 25 ವರ್ಷದ ವಿಘ್ನೇಶ್ ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತ ಡೆತ್ನೋಟ್ ಬರೆದಿಟ್ಟು ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾತ್ರಿ ಮನೆಯಲ್ಲಿ ಊಟ ಮಾಡಿದ್ದ ವಿಘ್ನೇಶ್ ಬೇಗನೇ ಮಲಗಲು ಹೋಗಿದ್ದ. ಬೆಳಗ್ಗೆ ತಾಯಿ ಎದ್ದ ವೇಳೆಯಲ್ಲಿ ಮನೆಯ ಬಾಗಿಲು ತೆರೆದೇ ಇತ್ತು. ಇದೇನಾಯ್ತು ಎಂದು ಮನೆಯಿಂದ ಹೊರ ಬಂದ ವೇಳೆಯಲ್ಲಿ ಮರಕ್ಕೆ ಪುತ್ರ ನೇಣು ಹಾಕಿಕೊಂಡಿರೋದನ್ನು ಕಂಡಿದ್ದಾರೆ.
ಸಾಯುವುದಕ್ಕೂ ಮುನ್ನ ವಿಘ್ನೇಶ್ ಡೆತ್ ನೋಟ್ ಕೂಡ ಬರೆದಿದ್ದ. ಇದರಲ್ಲಿ ಆತ ನನ್ನ ಸಾವಿಗೆ ಬೇರೆ ಯಾರೂ ಕಾರಣರಲ್ಲ.ನಾನು ಮೊಬೈಲ್ ಆ್ಯಪ್ಗಳಲ್ಲಿ ಮಾಡಿಕೊಂಡಿರುವ ಸಾಲಗಳೇ ಇದಕ್ಕೆ ಕಾರಣ.ನನಗೆ ಈ ಸಾಲಗಳನ್ನು ತೀರಿಸಲು ಆಗುತ್ತಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಸಾಲ ತೀರಿಸಿ ಎಂದು ಯಾರಾದರೂ ಕರೆ ಮಾಡಿದರೆ ಅವನು ಸತ್ತು ಹೋದ ಎಂದು ಹೇಳಿಬಿಡಿ.ಆಫೀಸನವರಿಗೂ ಕರೆ ಮಾಡಿ ಮಾಹಿತಿ ನೀಡಿ.ಶುಕ್ರವಾರ ನನಗೆ ಸಂಬಳ ಬರುತ್ತದೆ ಎಂದು ಬರೆದು ಅದರ ಜೊತೆಯಲ್ಲಿ ಎಟಿಎಂ ಪಾಸ್ವರ್ಡ್ನ್ನೂ ಬರೆದಿಟ್ಟಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
Youth committed suicide without paying his debts
ಇದನ್ನು ಓದಿ :Accused arrest :ದೈವಸ್ಥಾನ ,ಮಸೀದಿಗಳಲ್ಲಿ ಕಾಂಡೋಮ್ ಎಸೆಯುತ್ತಿದ್ದವನ ಬಂಧನ..!
ಇದನ್ನೂ ಓದಿ : Sangolli Rayanna statue: ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಆರೋಪಿಗಳ ಗುರುತು ಪತ್ತೆ..!