Karnataka bandh Cancel :ಸಿಎಂ ನೇತೃತ್ವದಲ್ಲಿ ಸಂಧಾನ ಸಕ್ಸಸ್​: ನಾಳೆ ಕರ್ನಾಟಕ ಬಂದ್​ ಇಲ್ಲ

Karnataka bandh Cancel : ಬೆಂಗಳೂರು: ಕನ್ನಡ ಪರ ಹೋರಾಟಗಾರರ ಜೊತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಧಾನ ಯಶಸ್ವಿಯಾಗಿದ್ದು ನಾಳೆ ನಡೆಯಬೇಕಿದ್ದ ಕರ್ನಾಟಕ ಬಂದ್​ನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಬೆಳಗಾವಿಯಲ್ಲಿ ಎಂಇಎಸ್​ ಪುಂಡರ ಉದ್ಧಟತನವನ್ನು ವಿರೋಧಿಸಿ ಎಂಇಎಸ್​ ಸಂಘಟನೆಯನ್ನು ಬ್ಯಾನ್​ ಮಾಡಬೇಕೆಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿತ್ತು.

ಹೆಚ್ಚುತ್ತಿರುವ ಓಮಿಕ್ರಾನ್​ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಬಂದ್​ ನಡೆಸದಂತೆ ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದರೂ ಸಹ ಕನ್ನಡ ಪರ ಸಂಘಟನೆಗಳು ಹಿಂದೆ ಸರಿದಿರಲಿಲ್ಲ. ನಿನ್ನೆ ಸಿಎಂ ಬೊಮ್ಮಾಯಿ ಮಾಧ್ಯಮಗಳ ಮೂಲಕ ಕನ್ನಡ ಪರ ಹೋರಾಟಗಾರರ ಬಳಿ ಬಂದ್​ ಹಿಂಪಡೆಯುವಂತೆ ಮನವಿ ಮಾಡಿದ್ದರು. ಅಲ್ಲದೇ ಎಂಇಎಸ್​ ಸಂಘಟನೆ ವಿರುದ್ಧ ಸೂಕ್ತ ಕಾನೂನು ಕ್ರಮ ನಡೆಯುತ್ತಿದೆ ಎಂತಲೂ ಹೇಳಿದ್ದರು. ಜೊತೆಯಲ್ಲಿ ಕೋವಿಡ್​ ನಿಯಮ ಮೀರಿ ಬಂದ್​ ನಡೆಸಿದಲ್ಲಿ ಸೂಕ್ತ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದರು.

ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಸೂಚನೆಯ ಮೇರೆಗೆ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​​ ಸಿಎಂ ಕಚೇರಿಗೆ ಭೇಟಿ ನೀಡಿದ್ದರು. ಇಲ್ಲಿ ಸಿಎಂ ಪ್ರಸ್ತುತ ಪರಿಸ್ಥಿತಿಯಲ್ಲಿ ಬಂದ್​, ಪ್ರತಿಭಟನಾ ರ್ಯಾಲಿಗಳಿಂದ ಉಂಟಾಗಬಲ್ಲ ತೊಂದರೆಗಳ ಬಗ್ಗೆ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ವಾಟಾಳ್​​ ನಾಗರಾಜ್​ ಬಂದ್​ ಹಿಂಪಡೆಯುತ್ತಿರುವು ದಾಗಿ ಘೋಷಣೆ ಮಾಡಿದ್ದಾರೆ.

ಸಿಎಂ ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ ವಾಟಾಳ್​ ನಾಗರಾಜ್​, ಎಂಇಎಸ್​ ಸಂಘಟನೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.ಎಂಇಎಸ್​ ಸಂಘಟನೆ ಬ್ಯಾನ್​ ಆಗಲು ಏನೆಲ್ಲ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದಿದ್ದಾರೆ. ನಾಳೆ ಬಂದ್​ ಮಾಡಿದ್ರೆ ಹೊಸ ವರ್ಷಾಚರಣೆಗೆ ತೊಂದರೆ ಆಗುತ್ತದೆ ಎಂದು ಹೇಳಿದರು. ನಾವು ಸಿಎಂ ಮಾತಿಗೆ ಗೌರವ ನೀಡಿದ್ದೇವೆ. ಹೀಗಾಗಿ ನಾಳೆ ನಡೆಯಬೇಕಿದ್ದ ಕರ್ನಾಟಕ ಬಂದ್​ನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ. ಈ ಬಗ್ಗೆ ಸಭೆ ನಡೆಸಿ ಕರ್ನಾಟಕ ಬಂದ್​ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಇದನ್ನು ಓದಿ : Sangolli Rayanna statue: ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಆರೋಪಿಗಳ ಗುರುತು ಪತ್ತೆ..!

ಇದನ್ನೂ ಓದಿ : H.D Kumaraswamy :ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ಜೆಡಿಎಸ್​​ ಪ್ರದರ್ಶನದ ಬಗ್ಗೆ ಹೆಚ್​ಡಿಕೆ ಸಮರ್ಥನೆ

Vatal nagaraj withdraws karnataka bandh Cancel

Comments are closed.