ಹುಬ್ಬಳ್ಳಿ : youth stabbed by father : ಮಕ್ಕಳು ದೇವರು ಕೊಡುವ ಉಡುಗೊರೆ ಅಂತಾರೆ. ಆದರೆ ಕೆಲವು ಪೋಷಕರ ಬಾಳಲ್ಲಿ ಮಕ್ಕಳು ಶಾಪವಾಗಿ ಕೂಡ ಬದಲಾಗ ಬಹುದು . ಒಟ್ಟಾಗಿ ಬಾಳಬೇಕಾದ ಕುಟುಂಬ ಛಿದ್ರ ಛಿದ್ರ ಕೂಡ ಆಗಬಹುದು. ಈ ಎಲ್ಲಾ ವಿಚಾರಗಳನ್ನು ಇಲ್ಲಿ ಹೇಳಲು ಕಾರಣ ಕೂಡ ಇದೆ. ಅದೇನೆಂದರೆ ಪುತ್ರನ ಕಾಟವನ್ನು ತಡೆಯಲಾರದ ತಂದೆಯೊಬ್ಬ ತಾನೇ ಮಗನಿಗೆ ಚಾಕು ಇರಿದ ಘಟನೆಯು ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗೇರಿ ಎಂಬಲ್ಲಿ ನಡೆದಿದೆ.
ಪುತ್ರನನ್ನು 31 ವರ್ಷದ ಜಗದೀಶ್ ಶಂಕರ್ ಸೂಗೂರ ಎಂದು ಗುರುತಿಸಲಾಗಿದೆ. ಈತನ ತಂದೆ ಶಂಕರ್ ರಾಮಕೃಷ್ಣ ಸುಗೂರ ಕೊಲೆ ಆರೋಪಿ. ಜಗದೀಶ್ ತನ್ನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಕೋಪಗೊಂಡ ತಂದೆ ಶಂಕರ ರಾಮಕೃಷ್ಣ ಸೂಗುರ ಚಾಕುವಿನಿಂದ ಜಗದೀಶ್ ಕುತ್ತಿಗೆಗೆ ಇರಿದಿದ್ದಾನೆ ಎನ್ನಲಾಗಿದೆ.
ಮಾನಸಿಕ ಅಸ್ವಸ್ಥನಾಗಿದ್ದ ಜಗದೀಶ್ ತಂದೆ – ತಾಯಿಗೆ ತುಂಬಾನೇ ಕಷ್ಟ ಕೊಡುತ್ತಿದ್ದ. ಅದು ಸಾಲದು ಎಂಬಂತೆ ತಾಯಿಗೆ ಅವಾಚ್ಯ ಶಬ್ದಗಳಿಂದ ಪದೇ ಪದೇ ನಿಂದಿಸುತ್ತಿದ್ದದ್ದು ಮಾತ್ರವಲ್ಲದೇ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಎಸೆದು ಹಲ್ಲೆ ಕೂಡ ಮಾಡುತ್ತಿದ್ದ. ಇದನ್ನು ನೋಡಿ ರೋಸಿಹೋಗಿದ್ದ ತಂದೆ ಶಂಕರ್ ರಾಮಕೃಷ್ಣ ಸುಗೂರು ಮನೆಯಲ್ಲೇ ಇದ್ದ ಚಾಕುವಿನಿಂದ ಪುತ್ರ ಜಗದೀಶ್ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಗದೀಶನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : Sri Lankan PM Ranil Wickremesinghe : ಶ್ರೀಲಂಕಾ ಹಂಗಾಮಿ ಅಧ್ಯಕ್ಷರಾಗಿ ರನಿಲ್ ವಿಕ್ರಮ ಸಿಂಘೆ ನೇಮಕ
ಇದನ್ನೂ ಓದಿ : COVID booster doses : ಜು. 15ರಿಂದ 75 ದಿನಗಳ ಕಾಲ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್ ಉಚಿತ
ಇದನ್ನು ಓದಿ : kgf-2 star yash : ಯಶ್ ಮುಂದಿನ ಸಿನಿಮಾ ಕುರಿತಂತೆ ಹೊರಬಿತ್ತು ಬಹು ಮುಖ್ಯ ಮಾಹಿತಿ
youth stabbed by father in hubballi