Bjp Resort Meeting : ಸಮೀಕ್ಷಾ ವರದಿಗೆ ಬೆಚ್ಚಿದ ಬಿಜೆಪಿ: ಎರಡು ದಿನಗಳ ಕಾಲ ರೆಸಾರ್ಟ್ ನಲ್ಲಿ ಎಲೆಕ್ಷನ್ ಮೀಟಿಂಗ್

ಬೆಂಗಳೂರು : ಬಿಜೆಪಿ ಶತಾಯ ಗತಾಯ 2023ಕ್ಕೆ ರಾಜ್ಯದ ಗದ್ದುಗೆ ಮೇಲೆ ಮತ್ತೊಮ್ಮೆ ಕೇಸರಿ ಧ್ವಜ ಹಾರಿಸುವ ಕನಸಿನಲ್ಲಿದೆ. ಇದಕ್ಕಾಗಿ ಶತಾಯ ಗತಾಯ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೆ ಏರುವ ಪ್ರಯತ್ನವನ್ನು ನಡೆಸಿದೆ. ಈ ಮಧ್ಯೆ ಚುನಾವಣೆಗೆ ಇನ್ನೂ 11 ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಎಲೆಕ್ಷನ್ ಮಾಸ್ಟರ್ ಪ್ಲ್ಯಾನ್ (Bjp Resort Meeting) ಸಿದ್ಧಪಡಿಸಲು ಮುಂದಾಗಿದ್ದು, ಇದಕ್ಕಾಗಿ ರಾಜ್ಯ ಚುನಾವಣಾ ಉಸ್ತುವಾರಿ ಅರುಣ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲು ಮುಂದಾಗಿದೆ.

ಚುನಾವಣೆಯ ರಣತಂತ್ರಗಳನ್ನು ಗಮನದಲ್ಲಿಟ್ಟುಕೊಂಡು ಸಭೆ ನಾಳೆ ಹಾಗೂ ನಾಡಿದ್ದು ಬಿಜೆಪಿ ನಾಯಕರ ಸಮ್ಮುಖದಲ್ಲಿ ನಡೆಯಲಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಸರ್ಕಾರದ ಪ್ರಮುಖ 7 ಸಚಿವರು ಭಾಗಿಯಾಗಲಿ ದ್ದಾರೆ.

ಮಾತ್ರವಲ್ಲ ರೆಸಾರ್ಟ್ ನಲ್ಲಿ ಗೌಪ್ಯವಾಗಿ ನಡೆಯೋ ಈ ಸಭೆಗೆ ಕೇಂದ್ರದ ಕೆಲ ಸಚಿವರುಗಳು ಕೂಡ ಆಗಮಿಸಲಿದ್ದು, ರಾಜ್ಯದಲ್ಲಿ ಅಧಿಕಾರ ಹಿಡಿಯಲು ಮಾಡಬೇಕಾದ ತಂತ್ರಗಳ ಬಗ್ಗೆ ಚರ್ಚೆ ಪ್ರಮುಖ ವಿಷಯವಾಗಿದೆ. ಸಭೆಯಲ್ಲಿ ಚರ್ಚೆಯಾಗೋ ಪ್ರಮುಖ ವಿಚಾರಗಳು ಏನು ಅನ್ನೋದನ್ನು ಗಮನಿಸೋದಾದರೇ,

  • ಯಾರ ನೇತೃತ್ವದಲ್ಲಿ ಚುನಾವಣೆಗೆ ಹೋಗಬೇಕು
  • ಯಾವ ವಿಷಯಗಳ ಮೂಲಕ ಚುನಾವಣೆ ಎದುರಿಸಬೇಕು
  • ಸರ್ಕಾರದ ವರ್ಚಸ್ಸು ಹೆಚ್ಚಿಸಲು ಆಡಳಿತದಲ್ಲಿ ಏನು ಬದಲಾವಣೆ ತರಬೇಕು..?
  • ಕೆಲ ವಿವಾದಗಳಿಂದ ಸರ್ಕಾರಕ್ಕೆ ಆದ ಡ್ಯಾಮೇಜ್ ಯಾವ ರೀತಿ ಕಂಟ್ರೋಲ್ ಮಾಡಬೇಕು..
  • ಬಿಜೆಪಿ ಗೆಲ್ಲುವ ಕ್ಷೇತ್ರಗಳಲ್ಲಿ ಪಕ್ಷ ಗಟ್ಟಿಯಾಗಲು ಏನು ಮಾಡಬೇಕು..
  • ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿ ಗೆಲ್ಲಲು ಏನು ಮಾಡಬೇಕು
  • ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ನ ಯಾರನ್ನು ಸೆಳೆಯಬೇಕು
  • ಎಷ್ಟು ದಿನಗಳ ಒಳಗೆ ಸರ್ಕಾರದ ಕಾರ್ಯಕ್ರಮ ಜನರಿಗೆ ತಲುಪಿಸಬೇಕು
  • ಮೀಸಲಾತಿ ವಿಚಾರದಲ್ಲಿ ರಾಜಕೀಯ ಮತ್ತು ಓಟ್ ಬ್ಯಾಂಕ್ ಗಮನದಲ್ಲಿಟ್ಟುಕೊಂಡು ಯಾವ ರೀತಿ ನಿರ್ಣಯ ಮಾಡಬೇಕು
  • ಕೆಲ ಬೇಡಿಕೆ ಈಡೇರದ್ದಕ್ಕೆ ದೂರ ಆಗಿರುವ ಸಮುದಾಯ ಗಳನ್ನು ಯಾವ ರೀತಿ ಸಮಧಾನ ಪಡಿಸಬೇಕು
  • ಪ್ರಮುಖ ಜಿಲ್ಲೆಗಳಲ್ಲಿ ಪಕ್ಷ ಸಂಘಟಿಸಲು ಯಾರಿಗೆ ಉಸ್ತುವಾರಿ ಕೊಡಬೇಕು
  • ಕಾಂಗ್ರೆಸ್ , ಜೆಡಿಎಸ್ ತಂತ್ರಕ್ಕೆ ಯಾವ ರೀತಿ ಪ್ರತಿತಂತ್ರ ರೂಪಿಸಬೇಕು
  • ಉತ್ತರ ಪ್ರದೇಶದಂತೆ ಯಾವ ರೀತಿ ರಾಜ್ಯದಲ್ಲಿ ಆಡಳಿತ ಅಲೆ ಹಿಮ್ಮೆಟ್ಟಿಸಬೇಕು
  • ಜನರನ್ನು ಸೆಳೆಯಲು ಯಾವ ರೀತಿ ತಂತ್ರ ರೂಪಿಸಬೇಕು.
  • ಸಿದ್ದರಾಮೋತ್ಸವಕ್ಕೆ ಯಾವ ಕೌಂಟರ್ ಅಟ್ಯಾಕ್ ಮಾಡಬೇಕು ಎಂಬ ವಿಚಾರಗಳ ಚರ್ಚೆ ನಡೆಯಲಿದೆ.

ಇದನ್ನೂ ಓದಿ : ಬಿ.ಎಸ್.ಯಡಿಯೂರಪ್ಪ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ : ಕುತೂಹಲ ಮೂಡಿಸಿದೆ ಕಾಂಗ್ರೆಸ್ ಶಾಸಕಿ ನಡೆ

ಇದನ್ನೂ ಓದಿ : ಮಾಹಿತಿ ಹಕ್ಕಿನಲ್ಲಿ ಬಯಲಾಲ್ತು ಶಾಸಕರು- ಸಚಿವರ ಕಳ್ಳಾಟ: ಅವಧಿ ಮುಗಿದರೂ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ನಾಯಕರು

BJP Resort Meeting About Karnataka Election Survey Report

Comments are closed.