ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರ ಎರಡನೇ ಅವಧಿಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಎರಡನೇ ಬಾರಿಗೆ ಅಧಿಕಾರ ಸಿಕ್ಕ ನಂತರವಂತೂ ಮೋದಿ ಸರಕಾರ ದೇಶದಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಹಲವು ಯೋಜನೆಗಳ ವಿರುದ್ದ ವಿರೋಧವೂ ಕೇಳಿಬಂದಿದೆ. ಆದ್ರೆ ಈಗಲೇ ಚುನಾವಣೆ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಗೆಲ್ಲೋ ಸ್ಥಾನವೆಷ್ಟು ಅಂತಾ ಕೇಳಿದ್ರೆ ಶಾಕ್ ಆಗ್ತಿರಿ.

ಹೌದು, ನರೇಂದ್ರ ಮೋದಿ ಸರಕಾರ ಎರಡನೇ ಅವಧಿಯಲ್ಲಿ ಎಂಟು ತಿಂಗಳು ಕಳೆದ ಬೆನ್ನಲ್ಲೇ ರಾಷ್ಟ್ರೀಯ ಸುದ್ದಿವಾಹಿನಿ ಎಬಿಪಿ ನ್ಯೂಸ್ ಹಾಗೂ ಸಿ ವೋಟರ್ ಸಂಸ್ಥೆ ಜಂಟಿಯಾಗಿ ದೇಶ್ ಕಾ ಮೂಡ್ ಅನ್ನೋ ಸಮೀಕ್ಷೆ ನಡೆಸಿದ್ದು, ದೇಶದ ಜನರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿ ಸರಕಾರ ಮತ್ತೊಮ್ಮೆ ಗೆಲ್ಲುವುದು ಖಚಿತವಾಗಿದೆ.

ಸಮೀಕ್ಷೆಯ ಪ್ರಕಾರ ಎನ್ ಡಿಎ 330 ಸ್ಥಾನಗಳನ್ನು ಗೆಲ್ಲಲದ್ರೆ, ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲಲಿದೆಯಂತೆ. ಕಾಶ್ಮೀರಿ ವಿಚಾರ, ಪೌರತ್ವ ತಿದ್ದುಪಡಿ, ತ್ರಿವಳಿ ತಲಾಕ್ ಸೇರಿದಂತೆ ಮೋದಿ ದೇಶದಲ್ಲಿ ಜಾರಿಗೆ ತಂದ ಹಲವು ಕ್ರಾಂತಿಕಾರಕ ಹೆಜ್ಜೆಗಳು ಮೋದಿ ಸರಕಾರಕ್ಕೆ ಮುಳುವಾಗುತ್ತೆ ಅಂತಾ ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದರು.

ಆದ್ರೆ ದೇಶ್ ಕಾ ಮೂಡ್ ಸಮೀಕ್ಷೆ ರಾಜಕೀಯ ಪಂಡಿತರ ಲೆಕ್ಕಾಚಾರವನ್ನೆಲ್ಲಾ ಬುಡಮೇಲು ಮಾಡಿದೆ.