ಬುಧವಾರ, ಜೂನ್ 18, 2025
Homeಮಿಸ್ ಮಾಡಬೇಡಿblankets for homeless : ಚಿಪ್ಸ್​ ಪ್ಯಾಕೆಟ್​ಗಳಿಂದ ಬೆಡ್​ಶೀಟ್​ಗಳನ್ನು ತಯಾರಿಸಿದ ಪೋರಿ

blankets for homeless : ಚಿಪ್ಸ್​ ಪ್ಯಾಕೆಟ್​ಗಳಿಂದ ಬೆಡ್​ಶೀಟ್​ಗಳನ್ನು ತಯಾರಿಸಿದ ಪೋರಿ

- Advertisement -

blankets for homeless :ನಿರಾಶ್ರಿತರಿಗೆ ಸಹಾಯ ಮಾಡಬೇಕು ಅಂದರೆ ನೀವು ಶ್ರೀಮಂತರಾಗಿಯೆ ಇರಬೇಕು ಎಂದೇನಿಲ್ಲ. ನೀವು ಮನಸ್ಸಿಂದ ಶ್ರೀಮಂತರಾಗಿದ್ದರೂ ಸಹ ನಿರಾಶ್ರಿತರಿಗೆ ಸಹಾಯ ಮಾಡಲು ಯಾವುದಾದರೂ ಒಂದು ಮಾರ್ಗ ಕಾಣುತ್ತದೆ. ಈ ಮಾತಿಗೆ ಸ್ಪಷ್ಟ ಉದಾಹರಣೆಯಾಗಿ ನಿಂತಿದ್ದಾಳೆ ಬ್ರಿಟನ್​ನ ಈ 11 ವರ್ಷದ ಬಾಲಕಿ..!


ಹೌದು. ನಿರಾಶ್ರಿತರಿಗೆ ಸಹಾಯ ಮಾಡಬೇಕು ಎಂದು ಯೋಚಿಸಿದ 11 ವರ್ಷದ ಬಾಲಕಿಯು ಚಿಪ್ಸ್​ ಪ್ಯಾಕೆಟ್​ಗಳನ್ನು ಬಳಕೆ ಮಾಡಿ ಬೆಡ್​ಶೀಟ್​ಗಳನ್ನು ತಯಾರಿಸಿದ್ದಾಳೆ. ಬ್ರಿಟನ್​​ನ ವೇಲ್ಸ್​ ನಿವಾಸಿಯಾದ ಅಲೈಸಾ ಡಿಯಾನ್​ ಚಿಪ್ಸ್​ ಪ್ಯಾಕೆಟ್​ಗಳನ್ನು ಸಂಗ್ರಹ ಮಾಡಿ ಅದರಿಂದ ಬೆಡ್​ಶೀಟ್​ ತಯಾರಿಸುವ ಮೂಲಕ ನಿರಾಶ್ರಿತರಿಗೆ ಸಹಾಯ ಮಾಡಲು ಮುಂದಾಗಿದ್ದಾಳೆ.


ಚಳಿಗಾಲದ ಸಮಯದಲ್ಲಿ ಕೊರೆಯುವ ಚಳಿಯಲ್ಲಿ ನಿರಾಶ್ರಿತರಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂಬುದು ಅಲೈಸಾ ಉದ್ದೇಶವಾಗಿತ್ತು. ಈಕೆಗೆ ಒಂದು ಬೆಡ್​ಶೀಟ್ ತಯಾರು ಮಾಡಲು 44 ಚಿಪ್ಸ್​ ಪ್ಯಾಕೇಟ್​ಗಳು ಬೇಕು. ಆಕೆಯ ಕುಟುಂಬಸ್ಥರು ಹಾಗೂ ಸ್ನೇಹಿತರ ಸಹಾಯದಿಂದ ಈ ಬಾಲಕಿಯು ಟೊಪ್ಪಿ, ಗ್ಲೌಸ್​, ಸಾಕ್ಸ್​ ಹಾಗೂ ಚಾಕಲೇಟ್​ಗಳನ್ನೊಳಗೊಂಡ 80 ಪಾರ್ಸೆಲ್​ಗಳನ್ನು ಈಗಾಗಲೇ ನಿರಾಶ್ರಿತರಿಗೆ ನೀಡಿದ್ದಾಳೆ. ಖಾಲಿ ಚಿಪ್ಸ್​ ಪ್ಯಾಕೆಟ್​ಗಳನ್ನು ಸಂಗ್ರಹಿಸಲು ಅಲೈಸಾ ತಾಯಿ 51 ವರ್ಷದ ಡಾರ್ಲೆನೆ ಕೂಡ ನೆರವಾಗಿದ್ದಾರೆ.


ಮಗಳ ಸಾಮಾಜಿಕ ಕಾರ್ಯದ ಬಗ್ಗೆ ಮಾತನಾಡಿದ ಅಲೈಸಾ ತಾಯಿ ಡಾರ್ಲೆನೆ, ಅಲೈಸಾ ಪರಿಸರದ ಬಗ್ಗೆ ಅತೀವವಾದ ಕಾಳಜಿಯನ್ನು ಹೊಂದಿದ್ದಾಳೆ. ಹೀಗಾಗಿ ಇಂತಹ ಯೋಜನೆಗಳು ಆಕೆಗೆ ಸೂಕ್ತವಾಗಿದೆ. ಪರಿಸರದಲ್ಲಿ ಸಿಗುವ ಚಿಪ್ಸ್ ಪ್ಯಾಕೆಟ್​ಗಳನ್ನು ಸಂಗ್ರಹಿಸಿ ಈ ಬೆಡ್​ ಶೀಟ್​ ನಿರ್ಮಿಸಿದ್ದಾಳೆ. 1 ಬೆಡ್​ ಶೀಟ್​ ನಿರ್ಮಿಸಲು ಕನಿಷ್ಟ 44 ಚಿಪ್ಸ್​ ಪ್ಯಾಕೆಟ್​ಗಳು ಬೇಕು ಎಂದು ಹೇಳಿದರು.
ಒಂದು ಬೆಡ್​ಶೀಟ್​ ನಿರ್ಮಾಣ ಮಾಡಲು ಕನಿಷ್ಟ 45 ನಿಮಿಷಗಳ ಬೇಕು. ನಾವು ನಿರಾಶ್ರಿತರಿಗೆ ಬೆಡ್ ಶೀಟ್​ನ್ನು ಹೊರತುಪಡಿಸಿ ಇನ್ನೂ ಏನಾದರೂ ಸಹಾಯ ಮಾಡಬೇಕೆಂದುಕೊಂಡಿದ್ದೆವು. ಹೀಗಾಗಿ ನಾವು ಬೆಡ್​ ಶೀಟ್​ಗಳ ಜೊತೆಯಲ್ಲಿ ಟೊಪ್ಪಿ, ಗ್ಲೌಸ್​, ಸಾಕ್ಸ್​ , ಚಾಕಲೇಟ್​ಗಳನ್ನು ನೀಡಿದ್ದೇವೆ ಎಂದು ಹೇಳಿದರು .

11-year-old makes blankets for homeless using chips packets

ಇದನ್ನು ಓದಿ : Shilpa Shetty: ಟ್ರೆಂಡಿ ಫ್ಯಾಷನ್‌ನಲ್ಲಿ ಕಂಗೊಳಿಸುತ್ತಿರುವ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ

ಇದನ್ನೂ ಓದಿ : Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

RELATED ARTICLES

Most Popular