ಸೋಮವಾರ, ಏಪ್ರಿಲ್ 28, 2025
HomeBreaking71ನೇ ಗಣರಾಜ್ಯೋತ್ಸವ ಸಂಭ್ರಮ : ರಾಷ್ಟ್ರಪತಿಗಳಿಂದ ಧ್ವಜಾರೋಹಣ

71ನೇ ಗಣರಾಜ್ಯೋತ್ಸವ ಸಂಭ್ರಮ : ರಾಷ್ಟ್ರಪತಿಗಳಿಂದ ಧ್ವಜಾರೋಹಣ

- Advertisement -

ನವದೆಹಲಿ :  71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ದೇಶದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧ್ವಜಾರೋಹಣ ನೆರವೇರಿಸಿ, ಪೆರೇಡ್ಗೆ ಚಾಲನೆ ನೀಡಿದ್ದಾರೆ. 

ಕಾರ್ಯಕ್ರಮದಲ್ಲಿ ಬ್ರೆಜಿಲ್ ಅಧ್ಯಕ್ಷ ಬೊಲ್ಸೊನಾರೋ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದು, ಬೊಲ್ಸೊನಾರೋ ಅವರನ್ನು ರಾಷ್ಟ್ರಪತಿಗಳು ಆತ್ಮೀಯತೆಯಿಂದ ರಾಜ್’ಪಥಕ್ಕೆ ಬರಮಾಡಿಮಾಡಿಕೊಂಡರು. ಇನ್ನು ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಸಿ ಸಲ್ಲಿಸಿದ ಬಳಿಕ ಪ್ರಧಾನಮಂತ್ರಿ ನರೇದ್ರ ಮೋದಿ ಕೂಡ ರಾಜ್’ಪಥಕ್ಕೆ ಆಗಮಿಸಿದರು. ಮೋದಿಯವರ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಆಗಮಿಸಿದ್ದಾರೆ. 

ಕಾರ್ಯಕ್ರಮದಲ್ಲಿ ಪರೇಡ್ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಆಸಿತ್ ಮಿಸ್ತ್ರಿ ನೇತೃತ್ವದಲ್ಲಿ ಪರೇಡ್ ನಡೆಯಲಿದ್ದು, ಪರಮ್ ವೀರ್ ಚಕ್ರ ಹಾಗೂ ಅಶೋಕ ಚಕ್ರ ಪ್ರಶಸ್ತಿ ವಿಜೇತರು ಸೇರಿ ಹಲವರು ಭಾಗವಹಿಸಲಿದ್ದಾರೆ. ರಾಜ್’ಪಥದಿಂದ ಇಂಡಿಯಾ ಗೇಟ್ ವರೆಗೂ ಸೇನೆಯು ಪರೇಡ್ ನಡೆಸಿದ್ದು, ಈ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದು, ಬೆಳಿಗ್ಗೆ 10 ಗಂಟೆಯಿಂದ ಪಥಸಂಚಲನ ಆರಂಭಗೊಂಡಿದೆ. ಈ ಬಾರಿ ಪಥಸಂಚಲನದಲ್ಲಿ ಒಟ್ಟು 22 ಸ್ತಬ್ಧ ಚಿತ್ರಗಳು, 16 ರಾಜ್ಯಗಳ ಸ್ತಬ್ಧಚಿತ್ರ ಹಾಗೂ 6 ಕೇಂದ್ರ ಸರ್ಕಾರದ ವಿವಿಧ ಸ್ತಬ್ಧ ಚಿತ್ರ ರಾಜ್ ಪಥದಲ್ಲಿ ಸಾಗಿದವು.. 

ಭಾರತೀಯ ಸೇನೆಯ ಕ್ಷಿಪಣಿಗಳು, ಕ್ಷಿಪಣಿ ವಾಹನಗಳು, ವೀರ ಯೋಧರ ಸಾಹಸ ಪ್ರದರ್ಶನಗಳ ಜೊತೆಗೆ ಭಾರತೀಯ ಸೇನೆಗೆ ಇತ್ತೀಚೆಗಷ್ಟೇ ಸೇರ್ಪಡೆಗೊಂಡಿದ್ದ ಚಿನೂಕ್ ಹಾಗೂ ಅಪಾಚೆ ಹೆಲಿಕಾಪ್ಟರ್ ಗಳು ಆಗಸದಲ್ಲಿ ತನ್ನ ಕಸರತ್ತನ್ನು ಪ್ರದರ್ಶಿಸಿದವು. ಭೀಷ್ಮ ಟ್ಯಾಂಕರ್ ರಾಜಪಥದಲ್ಲಿ ಘರ್ಜಿಸಿತು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular