2022 Vastu Tips :ಇನ್ನೇನು ಒಂದೇ ದಿನದಲ್ಲಿ ಹೊಸ ವರ್ಷಕ್ಕೆ ನಾವು ಕಾಲಿಡಲಿದ್ದೇವೆ. ಕಳೆದ ವರ್ಷ ನಡೆದ ಕಹಿ ಘಟನೆಗಳನೆಲ್ಲ ಮರೆತು ಹೊಸ ಭರವಸೆಯೊಂದನ್ನು ಇಟ್ಟುಕೊಂಡು ಮುಂದುವರಿಯಬೇಕು ಎಂದು ಅನೇಕರು ಭಾವಿಸಿದ್ದೀರಿ. ಮುಂದಿನ ವರ್ಷದಲ್ಲಿ ಯಾವುದೇ ನಕರಾತ್ಮಕ ಅಂಶಗಳು ನಿಮ್ಮ ಹತ್ತಿರವೂ ಸುಳಿಯಬಾರದು ಅಂದರೆ ನೀವು ಕೆಲವು ಅಶುಭ ವಸ್ತುಗಳನ್ನು ಮನೆಯಿಂದ ಹೊರಗಿಡಬೇಕು. ಆ ಅಶುಭ ವಸ್ತುಗಳು ಯಾವುವು ಅಂದ್ರಾ..? ಇಲ್ಲಿದೆ ಮಾಹಿತಿ.
ಕೆಟ್ಟು ಹೋದ ಎಲೆಕ್ಟ್ರಾನಿಕ್ ವಸ್ತುಗಳು – ಮನೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಹಾನಿಗೊಳಗಾಯ್ತು ಅಂದರೆ ಸಾಕು ನಾವು ಅದನ್ನು ಮನೆಯ ಮೂಲೆಯಲ್ಲಿ ಎಸೆದು ಬಿಡುತ್ತೇವೆ. ಆದರೆ ಹೊಸ ವರ್ಷದ ಆರಂಭಕ್ಕೂ ಮುನ್ನ ಈ ವಸ್ತುಗಳನ್ನು ಮನೆಯಿಂದ ಹೊರಗೆ ಎಸೆದುಬಿಡಿ. ಇದು ನಕರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಹೀಗಾಗಿ ಇದನ್ನು ಮನೆಯಿಂದ ಹೊರಗೆ ಇಡಿ.
ಮುರಿದ ವಿಗ್ರಹ : ಮನೆಯಲ್ಲಿ ಅತ್ಯಂತ ಪವಿತ್ರವಾದ ಸ್ಥಳವೆಂದರೆ ಅವರು ಪ್ರತಿದಿನ ಪೂಜಿಸುವ ಸ್ಥಳವಾಗಿದೆ, ಆದರೆ ಇಲ್ಲಿಯೂ ಅವರು ಅನೇಕ ಬಾರಿ ದೊಡ್ಡ ತಪ್ಪುಗಳನ್ನು ಮಾಡುತ್ತಾರೆ. ಒಡೆದ ವಿಗ್ರಹವನ್ನು ದೇವರಕೋಣೆಯಲ್ಲಿ ಇಟ್ಟರೆ ಅದು ಒಳಿತಲ್ಲ. ಹೊಸ ವರ್ಷವನ್ನು ಸ್ವಾಗತಿಸುವ ಮೊದಲು, ದೇವರ ಕೋಣೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಮುರಿದ ವಿಗ್ರಹಗಳನ್ನು ದೇವಾಲಯದಿಂದ ತೆಗೆದುಹಾಕಬೇಕು ಎಂಬುದನ್ನು ನೆನಪಿನಲ್ಲಿಡಿ.
ಕೆಟ್ಟು ಹೋದ ಗಡಿಯಾರ- ಸಮಯವು ಜೀವನದಲ್ಲಿ ಬಹಳ ಮುಖ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸಮಯವನ್ನು ತೋರಿಸುವ ಗಡಿಯಾರವನ್ನು ನಿರ್ಲಕ್ಷಿಸಬೇಡಿ. ಮನೆಯಲ್ಲಿ ಯಾವುದೇ ಗಡಿಯಾರ ಒಡೆದರೆ, ತಕ್ಷಣ ಅದನ್ನು ಮನೆಯಿಂದ ಹೊರಗೆ ಎಸೆಯಿರಿ. ನಿಲ್ಲಿಸಿದ ಗಡಿಯಾರವು ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ.
ಹರಿದ ಶೂಗಳು- ಚಪ್ಪಲಿಗಳು – ಹೊಸ ವರ್ಷದ ಮೊದಲು ಮನೆಯನ್ನು ಸ್ವಚ್ಛಗೊಳಿಸುವಾಗ, ನಿಮ್ಮ ಹಳೆಯ ಮತ್ತು ಹರಿದ ಬೂಟುಗಳು ಮತ್ತು ಚಪ್ಪಲಿಗಳನ್ನು ಎಸೆಯಲು ಮರೆಯಬೇಡಿ. ಹರಿದ ಬೂಟುಗಳು ಮತ್ತು ಚಪ್ಪಲಿಗಳು ಮನೆಯಲ್ಲಿ ನಕಾರಾತ್ಮಕತೆ ಮತ್ತು ದುರದೃಷ್ಟವನ್ನು ತರುತ್ತವೆ. ಇದರಿಂದ ಹಣದ ಅಭಾವ ಉಂಟಾಗುತ್ತದೆ.
ಹರಿದ ಹಾಸಿಗೆ- ಹರಿದ ಹಾಸಿಗೆಯನ್ನು ಮನೆಯಲ್ಲಿ ಇಡುವುದು ಅಶುಭದ ಸಂಕೇತವಾಗಿದೆ. ಈ ಕಾರಣದಿಂದಾಗಿ, ವೈವಾಹಿಕ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ. ಮನೆಯಲ್ಲಿ ಎಂದಿಗೂ ಶಾಂತಿ ಇರುವುದಿಲ್ಲ. ಇದರಿಂದ ಲಕ್ಷ್ಮಿಯೂ ಕೋಪಗೊಳ್ಳುತ್ತಾಳೆ. ಆದ್ದರಿಂದ, ಮನೆಯಲ್ಲಿ ಹರಿದ ಹಾಸಿಗೆ ಇದ್ದರೆ, ಅದನ್ನು ಸರಿಪಡಿಸಿ. ಇಲ್ಲವಾದರೆ ಮನೆಯಿಂದ ಹೊರಗೆ ಹಾಕಿ.
ಒಡೆದ ಗಾಜಿನ ವಸ್ತುಗಳು- ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಒಡೆದ ಗಾಜಿನ ವಸ್ತುಗಳು ತುಂಬಾ ಅಶುಭ. ನೀವು ಒಡೆದ ಗಾಜಿನ ವಸ್ತುವನ್ನು ಬಳಕೆ ಮಾಡದೇ ಇದ್ದರೂ ಸಹ ಅದು ನಿಮಗೆ ವಾಸ್ತು ದೋಷವನ್ನು ಉಂಟು ಮಾಡುತ್ತದೆ. ಮನೆಯಲ್ಲಿ ಮಾನಸಿಕವಾಗಿ ನೆಮ್ಮದಿಯನ್ನು ಕೆಡಿಸುತ್ತದೆ.
ಇದನ್ನು ಓದಿ : Karya Siddhi Anjaneya : ತೆಂಗಿನಕಾಯಿ ನೀಡಿದ್ರೆ ಒಲಿತಾನೆ ರಾಮಭಂಟ : ವಾಯುಪುತ್ರನನ್ನು ನಂಬಿದ್ರೆ ಎಲ್ಲಾ ಕಾರ್ಯಸಿದ್ಧಿ
ಇದನ್ನೂ ಓದಿ : Vaastu Tips Broom : ಮನೆಯಲ್ಲಿರುವ ಪೊರಕೆಯು ನಿರ್ಧರಿಸುತ್ತೆ ನಿಮ್ಮ ಆರ್ಥಿಕ ಸ್ಥಿತಿ
2022 vastu tips remove these things immediately from house for money happiness