ಇತ್ತೀಚಿನ ವರ್ಷದಲ್ಲಿ ಶಿಕ್ಷಣ ಅತ್ಯಂತ ದುಬಾರಿಯಾಗಿದ್ದು, ಮಕ್ಕಳ ಸ್ಕೂಲ್, ಕಾಲೇಜು ಫೀಸ್ ಕಟ್ಟೋಕಾಗದೇ ಪೋಷಕರು ಒದ್ದಾಡುವ ಸ್ಥಿತಿ ಇದೆ. ಅದರಲ್ಲೂ ಈಗ ಕಾಲಿಟ್ಟಿರುವ ಕೊರೋನಾ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಇದನ್ನು ಮನಗಂಡ ಕಾಲೇಜ್ ಒಂದು ಎಡ್ಮಿಶನ್ ಗೆ ಶುಲ್ಕದ ಬದಲು ತೆಂಗಿನ ಕಾಯಿ ನೀಡಲು ಪೋಷಕರಿಗೆ ಅವಕಾಶ ನೀಡಿ ಗಮನ ಸೆಳೆದಿದೆ.

ಹೌದು ಇಂಡೋನೇಷ್ಯಾದ ಬಾಲಿಯ ಕಾಲೇಜ್ ಒಂದು ವಿದ್ಯಾರ್ಥಿಗಳ ಹಾಗೂ ಪಾಲಕರ ಸಂಕಷ್ಟ ಅರಿತು ಇಂತಹದೊಂದು ವಿಭಿನ್ನ ಹಾಗೂ ಜನಸ್ನೇಹಿ ಅವಕಾಶ ನೀಡಿದೆ. ಶೈಕ್ಷಣಿಕ ಶುಲ್ಕದ ಬದಲು ತೆಂಗಿನ ಕಾಯಿ ಸೇರಿದಂತೆ ವಿದ್ಯಾರ್ಥಿಗಳ ಮನೆಯಲ್ಲಿ ಉತ್ಪಾದಿಸಲಾದ ಯಾವುದೇ ನೈಸರ್ಗಿಕ ಉತ್ಪನ್ನ ನೀಡಲು ಸೂಚಿಸಿದೆ.

ಬಾಲಿಯ ತೆಗಲಲಾಂಗ್ ನಲ್ಲಿರುವ ವೀನಸ್ ವನ್ ಟೂರಿಸಂ ಅಕಾಡೆಮಿ ಇಂತಹದೊಂದು ವಿಭಿನ್ನ ಅವಕಾಶ ನೀಡಿದೆ. ಕಾಲೇಜಿನ ಫೀಸ್ ಎಷ್ಟಿದೆಯೋ ಅಷ್ಟೇ ಮೊತ್ತದ ತೆಂಗಿನಕಾಯಿ,ಏಳನೀರು ಸೇರಿದಂತೆ ಯಾವುದೇ ಉತ್ಪನ್ನವನ್ನು ಕಾಲೇಜಿಗೆ ನೀಡಲು ಅವಕಾಶ ನೀಡಿದೆ. ಇನ್ನು ವೀನಸ್ ವನ್ ಟೂರಿಸಂ ಅಕಾಡೆಮಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಹೀಗೆ ವಿದ್ಯಾರ್ಥಿಗಳು ನೀಡಿದ ತೆಂಗಿನಕಾಯಿ ಬಳಸಿಕೊಂಡು ವಿವಿ ಕೊಬ್ಬರಿ ಎಣ್ಣೇ ಉತ್ಪಾದಿಸಿ ಮಾರಾಟ ಮಾಡುತ್ತಿದೆಯಂತೆ. ಈ ಬಗ್ಗೆ ಸಂಸ್ಥೆಯಶಿಕ್ಷಕರೊಬ್ಬರು ಮಾಹಿತಿ ನೀಡಿದ್ದು, ಪೋಷಕರ ಕಷ್ಟ ತಿಳಿದು ಎರಡು ಕಂತಿನಲ್ಲಿ ಫೀಸ್ ಕಟ್ಟಲು ಅವಕಾಶ ಕೊಟ್ಟಿದ್ದೇವು. ಆದರೂ ಪೋಷಕರಿಗೆ ಹಣ ಕಟ್ಟುವುದು ಸಾಧ್ಯವಾಗಲಿಲ್ಲ.

ಹೀಗಾಗಿ ಪೋಷಕರಿಗೆ ನೆರವಾಗುವ ಹಾಗೂ ವಿವಿಗೆ ಆರ್ಥಿಕ ಲಾಭ ತರವು ನಿಟ್ಟಿನಲ್ಲಿ ಈ ಪ್ಲ್ಯಾನ್ ಮಾಡಿದ್ದೇವೆ. ಇದಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂದಿದ್ದು, ಪೋಷಕರು ತಮ್ಮ ಕಷ್ಟ ಅರಿತು ಆರ್ಥಿಕ ಹೊರೆಯಿಂದ ತಪ್ಪಿಸಿದ್ದಕ್ಕೆ ವಿವಿಗೆ ಧನ್ಯವಾದ ಹೇಳ್ತಿದ್ದಾರೆ ಎಂದಿದ್ದಾರೆ.