ಕೊರೊನಾ ಮಹಾಮಾರಿ ವಿಶ್ವದಾದ್ಯಂತ ತಲ್ಲಣ ಮೂಡಿಸಿದೆ. ಜಗತ್ತಿನ ಸುಮಾರು 199 ದೇಶಗಳು ಡೆಡ್ಲಿ ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿವೆ. ಇದುವರೆಗೂ ವಿಶ್ವದಾದ್ಯಂತ 30,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಚೀನಾ ವುಹಾನ್ ನಗರದಲ್ಲಿ ಆರಂಭದಲ್ಲಿ ಕಾಣಿಸಿಕೊಂಡಿರೋ ಕೊರೊನಾ ಅನ್ನೋ ಭಯಾನಕ ವೈರಸ್ ಇಂದು ವಿಶ್ವದ ಜನರ ನಿದ್ದೆಗೆಡಿಸಿದೆ. ಕೊರೊನಾದಿಂದ ತತ್ತರಿಸಿರೋ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಲಾಕ್ ಡೌನ್ ಮಾಡಿವೆ.

ವಿಶ್ವದಲ್ಲಿ ಇದುವರೆಗೂ 6,63,720 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. 1.42,000 ಮಂದಿ ಕೊರೊನಾ ಮಹಾಮಾರಿಯ ವಿರುದ್ದ ಹೋರಾಡಿ ಬದುಕಿದ್ದಾರೆ. ಆದರೆ ಬರೋಬ್ಬರಿ 30,000 ಕ್ಕೂ ಅಧಿಕ ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ.

ವಿಶ್ವದಲ್ಲೇ ಆರೋಗ್ಯ ಕ್ಷೇತ್ರದಲ್ಲಿಯೇ ಮುಂದುವರಿದ ದೇಶಗಳೆನಿಸಿಕೊಂಡಿರೊ ಅಮೇರಿಕಾ, ಇಟಲಿ ಕೊರೊನಾ ಅನ್ನೋ ಡೆಡ್ಲಿ ವೈರಸ್ ನಿತ್ಯವೂ ನೂರಾರು ಜನರನ್ನು ಬಲಿ ಪಡೆಯುತ್ತಲೇ ಇದೆ. ಅಮೇರಿಕಾದಲ್ಲಿ ಇದುವರೆಗೂ 1.23 ಲಕ್ಷ ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ.

ಭಾರತವೂ ಕೂಡ ಕೊರೊನಾ ಮಹಾಮಾರಿಗೆ ತತ್ತರಿಸಿದೆ. ಇದುವರೆಗೆ ದೇಶದಲ್ಲಿ 909 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಕೊರೊನಾ ಮಹಾಮಾರಿಗೆ ತುತ್ತಾಗಿರುವವರಲ್ಲಿ 862 ಮಂದಿ ಭಾರತೀಯರು ಹಾಗೂ 47 ಮಂದಿ ವಿದೇಶಿಗರು ಸೇರಿದ್ದಾರೆ.

ಕೊರೊನಾ ವೈರಸ್ ಸೋಂಕು ಹೆರಡುವಿಕೆಯ ಬಗ್ಗೆ ವಿಶ್ವದ ಎಲ್ಲಾ ರಾಷ್ಟ್ರಗಳು ತಲೆಕೆಡಿಸಿಕೊಂಡಿವೆ. ವಿಜ್ಞಾನ ಲೋಕ ಕೊರೊನಾ ಸೋಂಕಿನ ತಡೆಗೆ ಔಷಧವನ್ನು ಕಂಡು ಹಿಡಿಯುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ.

ಅದರಲ್ಲೂ ಕೊರೊನಾ ರೋಗಿಯ ಸೀನುವಿಕೆಯ ಮೂಲಕ, ಕೈ ಕುಲುಕುವ ಮೂಲಕ ಹರಡುತ್ತೆ ಅಂತಾ ವೈದ್ಯರು ಹೇಳುತ್ತಿದ್ದಾರೆ. ಆದರೆ ಅದರ ನಡುವಲ್ಲೇ ಕೊರೊನಾ ಗಾಳಿಯ ಮೂಲಕವೂ ಹರಡುತ್ತೆ ಅನ್ನೋ ಸುದ್ದಿ ಆತಂಕವನ್ನು ತಂದೊಡ್ಡಿದೆ.

ವಿಶ್ವ ಆರೋಗ್ಯ ಸಂಸ್ಥೆ ಹಾಗೂ ತಜ್ಞರು ಹೇಳುವಂತೆ ಕೊರೋನಾ ವೈರಸ್ ಧೂಳಿನ ಕಣದಂತೆ ಗಾಳಿಯಲ್ಲಿ ಎಂದಿಗೂ ಹಾರಾಟ ನಡೆಸುವುದಿಲ್ಲ. ಕಿಲೋಮೀಟರ್ ದೂರದವರೆಗೆ ಅದು ಸಾಗುವುದಿಲ್ಲ ಎಂದಿದ್ದಾರೆ.

ಒಂದೊಮ್ಮೆ ಕೊರೋನಾ ಸೋಂಕಿತ ಸೀನಿದರೆ ಗರಿಷ್ಠ ಎಂದರೆ ಐದರಿಂದ ಹತ್ತು ಮೀಟರ್ವರೆಗೆ ಈ ವೈರಸ್ ಸಾಗಬಹುದಷ್ಟೆ. ಆದರೆ, ಅದು ಎಂದಿಗೂ ಗಾಳಿಯಲ್ಲಿ ಉಳಿದುಕೊಳ್ಳುವುದಿಲ್ಲ ಎನ್ನುತ್ತಾರೆ ತಜ್ಞರು.

ಇನ್ನು, ಭಾರತದಲ್ಲಿ ಒಣ ಹವಮಾನ. ಹೀಗಾಗಿ ಕೊರೋನಾ ವೈರಸ್ಗೆ ಗಾಳಿಯಲ್ಲಿ ಸಂಚಾರ ನಡೆಸಲು ಸಾಧ್ಯವೇ ಇಲ್ಲಾ ! ಆದರೆ, ಯುರೋಪ್ ರಾಷ್ಟ್ರಗಳಲ್ಲಿ ತಂಪು ಹವಾಮಾನವಿದೆ.

ಭಾರತದ ಹವಾಗುಣದಲ್ಲಿ ಕೊರೊನಾ ವೈರಸ್ ಗಾಳಿಯಲ್ಲಿರುವ ನೀರಿನ ಅಂಶದ ಮೂಲಕ ಒಂದು ಸ್ವಲ್ಪ ದೂರ ಅದು ಸಾಗಬಹುದಷ್ಟೇ ಎನ್ನುತ್ತಾರೆ ತಜ್ಞರು.

ಹೀಗಾಗಿ ಕೊರೋನಾ ಸೋಂಕಿತ ನಿಮ್ಮ ಬಳಿ ಹಾದು ಹೋದರು ನಿಮಗೆ ಕೊರೋನಾ ವೈರಸ್ ಅಂಟುತ್ತದೆ ಎನ್ನುವುದು ತಪ್ಪು ಕಲ್ಪನೆ ಎನ್ನುತ್ತದೆ ವಿಜ್ಞಾನ ಹಾಗೂ ತಜ್ಞ ವೈದ್ಯರು.

ಗಾಳಿಯ ಮೂಲಕ ಕೊರೊನಾ ಹರಡುತ್ತೆ ಅನ್ನೋ ಚಿಂತೆಯನ್ನು ಬಿಟ್ಟು. ಆರಾಮಾಗಿ ಮನೆಯಲ್ಲಿಯೇ ಇದ್ದು, ಲಾಕ್ ಡೌನ್ ಆಚರಿಸಿ, ಕೊರೊನಾದಿಂದ ಮುಕ್ತರಾಗಿ.