ಡೆಡ್ಲಿ ಕೊರೊನಾ ಮಹಾಮಾರಿಯಿಂದಾಗಿ ವಿಶ್ವವೇ ತತ್ತರಿಸಿ ಹೋಗಿದೆ. ಕೊರೊನಾ ಸೋಂಕಿಗೆ ಎಲ್ಲರೂ ಬೆಚ್ಚಿ ಬೀಳುತ್ತಿದ್ದಾರೆ. ಇದೀಗ ಕೊರೊನಾ ಎಫೆಕ್ಟ್ ಸಾಮಾಜಿಕ ಜಾಲತಾಣ ವಾಟ್ಸಾಪ್ ಗೂ ತಟ್ಟಿದೆ.

ಕೊರೊನಾ ಹಿನ್ನೆಲೆಯಲ್ಲಿ ವಾಟ್ಸ್ಆ್ಯಪ್ ಸಾಮಾಜಿಕ ಜಾಲತಾಣ ಟ್ರಾಫಿಕ್ ಮತ್ತು ಸರ್ವರ್ ವೇಗವನ್ನು ಹೆಚ್ಚುಸುವ ಸಲಿವಾಗಿ ಹಲವು ಬದಲಾವಣೆಗಳನ್ನು ತರಲು ಮುಂದಾಗಿದೆ.

ವಾಟ್ಸಾಪ್ ನಲ್ಲಿ ಸ್ಟೇಟಸ್ ಅವಧಿಯಲ್ಲಿ ಬದಲಾವಣೆ ಮಾಡಲು ಚಿಂತನೆ ನಡೆಸಿದ್ದು, ಈ ವರೆಗೆ 30 ಸೆಂಕೆಡ್ ಗಳನ್ನು ಒಳಗೊಂಡ ಸ್ಟೇಟಸ್ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಿತ್ತು. ಆದ್ರೆ ಇನ್ಮುಂದೆ ಕೇವಲ 15 ಸೆಕೆಂಡ್ ವರೆಗೆ ಇಳಿಸಲು ಚಿಂತನೆ ನಡೆಸಿದೆ.

ಜಗತ್ತಿನಾದ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಕೇವಲ ಸ್ಟೇಟಸ್ ಮಾತ್ರವಲ್ಲ ಹಲವು ಫೀಚರ್ಸ್ಗಳನ್ನು ಬದಲಾವಣೆ ಮಾಡಲು ಹೊರಟಿದೆ.

ಡೆಡ್ಲಿ ಕೊರೊನಾ ಸೋಂಕಿನ ಭಯದಿಂದಾಗಿ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದು ಜನರು ಮನೆಗಳಲ್ಲಿಯೇ ಬಂಧಿಯಾಗಿದ್ದಾರೆ. ಹೀಗಾಗಿ ಮನೆಯಲ್ಲಿರುವವರು ಅತೀ ಹೆಚ್ಚು ಸಮಯವನ್ನು ಸ್ಮಾರ್ಟ್ ಪೋನ್ ಗಳ ಜೊತೆಯೇ ಕಳೆಯುತ್ತಿದ್ದಾರೆ.

ಸ್ನೇಹಿತರು, ಸಂಬಂಧಿಕರ ಕುಶಲೋಪರಿಗಳನ್ನು ತಿಳಿದುಕೊಳ್ಳಲು ಸ್ಮಾರ್ಟ್ ಪೋನ್ ಬಳಕೆಯಾಗ್ತಿದೆ. ಆದ್ರೆ ಇದರ ಜೊತೆಯಲ್ಲೇ ಕೊರೊನಾ ವಿಚಾರವಾಗಿ ವಾಟ್ಸ್ ಆ್ಯಪ್ ನಲ್ಲಿ ಬಳಕೆದಾರರ ಸಂಖ್ಯೆಯೂ ಹೆಚ್ಚಿದೆ.

ಸುದ್ದಿ, ಮೆಸೆಜ್, ಆಡಿಯೋ ಕಾಲ್, ವಿಡಿಯೋ ಕಾಲ್ ಮಾಡುವುದರ ಜೊತೆಗೆ ಸುಳ್ಳು ಸುದ್ದಿಗಳನ್ನು ಹರಡಿಸಲು ಕಡಿಗೇಡಿಗಳು ವಾಟ್ಸ್ ಆ್ಯಪ್ ಬಳಕೆ ಮಾಡುತ್ತಿದ್ದಾರೆ.

ಸುಳ್ಳು ಮಾಹಿತಿಗಳು ಹರಿದಾಡುತ್ತಿರೋದ್ರಿಂದಾಗಿ ಜನರ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಜೊತೆಗೆ ಹ್ಯಾಕರ್ಸ್ ಹಾವಳಿಯೂ ಜೋರಾಗಿಯೇ ಇದೆ. ಹೀಗಾಗಿಯೇ ವಾಟ್ಸ್ ಆಫ್ ಹಲವು ಫೀಚರ್ಸ್ ಗಳನ್ನು ಬದಲಾಯಿಸಲಿದೆ.

ವಾಟ್ಸ್ಆ್ಯಪ್ನಲ್ಲಿ ಕೊರೋನಾ ಕುರಿತಾಗಿ ಸುಳ್ಳು ಸುದ್ದಿಗಳು ಹರಿದಾಡುವುದನ್ನು ತಪ್ಪಿಸೋ ಸಲುವಾಗಿ ವಾಟ್ಸ್ ಆ್ಯಪ್ ‘ಫೇಕ್ ನ್ಯೂಸ್ ಟ್ರಾಕಿಂಗ್’ ಅನ್ನುವ ಫೀಚರ್ಸ್ ಅಭಿವೃದ್ಧಿ ಪಡಿಸಿದ್ದು, ಸುಳ್ಳು ಸುದ್ದಿ ಹರಡುವವರಿಗೆ ಮೂಗುದಾರ ಹಾಕಲಿದೆ. ಅಲ್ಲದೇ ಸುಳ್ಳು ಮಾಹಿತಿ ಹರಡಿದವರ ವಿರುದ್ದ ಕ್ರಮಕೈಗೊಳ್ಳಲು ಪೊಲೀಸರಿಗೆ ವಾಟ್ಸ್ ಆ್ಯಪ್ ನೆರವಾಗಲಿದೆ.

ಇಷ್ಟೇ ಅಲ್ಲಾ ವಾಟ್ಸ್ ಆ್ಯಪ್ ನಲ್ಲಿ ಹರಿದಾಡುವ ಪ್ರತೀ ಫಾರ್ವರ್ಡ್ ಮೆಸೇಜ್ಗಳ ಮೇಲೆಯೂ ಹದ್ದಿನ ಕಣ್ಣಿಡಲಿದ್ದು, ಫೇಕ್ ಮೆಸೇಜ್ ಫಾರ್ವಡ್ ಆಗದಂತೆ ನೋಡಿಕೊಳ್ಳಲಿದೆ.

ಸದ್ಯ ವಾಟ್ಸ್ ಆ್ಯಪ್ ತನ್ನ ಹೊಸ ಫೀಚರ್ಸ್ ಗಳನ್ನು ಆ್ಯಂಡ್ರಾಯ್ಡ್ ಬಳಕೆದಾರರ ಸ್ಮಾರ್ಟ್ಫೋನಿಗೆ ಪರಿಚಯಿಸಲಿದೆ. ಕೇವಲ ಸುಳ್ಳು ಸುದ್ದಿ ಹರಡುವುದು ಮಾತ್ರವಲ್ಲದೇ ಮಹಾಮಾರಿ ಕೊರೋನಾ ನಿಯಂತ್ರಿಸಲು ಹೆಲ್ಪ್ಲೈನ್ಗಳನ್ನು ಪ್ರಾರಂಭಿಸಲು ವಾಟ್ಸ್ ಆಫ್ ಮುಂದಾಗಿದೆ.

ಭಾರತ ಸರ್ಕಾರ ಈಗಾಗಲೇ ಕೊರೋನಾ ಹೆಲ್ಪ್ಲೈನ್ಗಳನ್ನು ಪ್ರಾರಂಭಿಸುವುದರ ಮೂಲಕ ಅನೇಕರಿಗೆ ಪ್ರಯೋಜನಕಾರಿಯಾಗಿದೆ.

ಇನ್ನು ಆಸ್ಟೇಲಿಯಾ ಸರ್ಕಾರ ಕೂಡ ಕೊರೋನಾ ಬಗೆಗಿನ ನೈಜ ಮಾಹಿತಿಯನ್ನು ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ ಮೂಲಕ ಜನರ ಸ್ಮಾರ್ಟ್ನಲ್ಲಿ ನೀಡುತ್ತಿದೆ. ಇಂಗ್ಲೆಂಡ್ನಲ್ಲಿ ಕೊರೋನಾ ವೈರಸ್ ಕುರಿತ ಮಾಹಿತಿಯನ್ನು ಜನರಿಗೆ ನೀಡಲು ಚಾಟ್ಬೂಟ್ ಅನ್ನು ಸೃಷ್ಠಿಸಿದೆ.