ಬ್ರಹ್ಮಾವರ : ಕೊರೊನಾ ವೈರಸ್ ಸೋಂಕಿನಿಂದ ಜನ ಭಯಭೀತರಾಗಿದ್ದಾರೆ. ಕೊರೊನಾ ಬಂದ್ರೆ ಪ್ರಾಣವೇ ಹೋಗುತ್ತೆ ಅನ್ನುವ ಭಯ ಜನರಲ್ಲಿದೆ. ಆದರೆ ಕೊರೊನಾ ಸೋಂಕು ಅಪಾಯಕಾರಿ ಅಲ್ಲಾ ಅನ್ನುವುದನ್ನು ಇಲ್ಲೊಬ್ಬರು ಸೋಂಕಿತರು ಸಾಭೀತು ಮಾಡಿದ್ದಾರೆ. ಕೊರೊನಾ ನಡುವಲ್ಲೇ ವಿಡಿಯೋ ಕಾಲ್ ಮೂಲಕ ಪತ್ನಿಗೆ ಅಣ್ಣಾವ್ರ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಧೈರ್ಯ ತುಂಬಿದ್ದಾರೆ.

ಉಡುಪಿ ಜಿಲ್ಲೆಯ ಕೋಟದ ಹೋಟೆಲ್ ಮಾಲೀಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಿಂದಾಗಿ ಪತ್ನಿ ಸೇರಿದಂತೆ ಮನೆಯ ಮಂದಿಯೆಲ್ಲಾ ಆತಂಕಕ್ಕೆ ಒಳಗಾಗಿದ್ದರು. ಆದರೆ ಸೋಂಕಿತರು ತನಗೆ ಕೊರೊನಾ ಪಾಸಿಟಿವ್ ಬಂದಿದ್ರೂ ತಾನು ಆರೋಗ್ಯವಾಗಿದ್ದೇನೆ. ಆಸ್ಪತ್ರೆಯಲ್ಲಿ ಖುಷಿಯಾಗಿದ್ದೇನೆ ಅಂತಾ ವಿಡಿಯೋ ಮೂಲಕ ತೋರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದ್ದು, ಮನೆಮಂದಿಯೆಲ್ಲಾ ಸಖತ್ ಖುಷಿಯಾಗಿದ್ದಾರೆ.
ಡಾ.ರಾಜ್ ಕುಮಾರ್ ಅವರ ಅಭಿಮಾನಿಯಾಗಿರುವ ಹೋಟೆಲ್ ಮಾಲೀಕರು ನಾನಿರುವುದೇ ನಿಮಗಾಗಿ, ನಾಡಿರುವುದು ನಮಗಾಗಿ ಕಣ್ಣೀರೇಕೆ. ಬಿಸಿಯುಸಿರೇಕೆ ಅನ್ನುವ ಹಾಡಿಗೆ ಅಣ್ಣಾವ್ರ ಸ್ಟೈಲ್ ನಲ್ಲೇ ಹೆಜ್ಜೆ ಹಾಕಿದ್ದಾರೆ. ಹೋಟೆಲ್ ಮಾಲೀಕರ ವಿಡಿಯೋ ಕೇವಲ ಮನೆಯರಿಗೆ ಮಾತ್ರವಲ್ಲ, ಜನರ ಆತಂಕವೂ ದೂರವಾಗಿದೆ. ಇನ್ನು ಕೊರೊನಾ ಬಗ್ಗೆ ಯಾವುದೇ ಆತಂಕ ಬೇಡ. ಜನರು ಧೈರ್ಯವಾಗಿರಿ. ಸಾಮಾಜಿಕ ಅಂತರ ಸರಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡಿ ಅಂತಾ ಮನವಿ ಮಾಡಿದ್ದಾರೆ.