ಬೆಂಗಳೂರು : ನಮ್ಮ ನಾಡು ನುಡಿ ಸಂಸ್ಕ್ರತಿಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ಆಯೋಜಿಸಲಾಗಿದ್ದ ಟ್ರೆಡಿಷನಲ್ ಕಿಂಗ್ ಆಂಡ್ ಕ್ವೀನ್ ಆಫ್ ಕರ್ನಾಟಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಕ್ರೀಮ್ ಬಿಸ್ಕೆಟ್ ಎಂಟರ್ಟೈನ್ಮೆಂಟ್ಸ್ ವತಿಯಿಂದ ಬೆಂಗಳೂರಿನ ಡಾ.ರಾಜಕುಮಾರ್ ಕಲಾಭವನದಲ್ಲಿ ವಿಶಿಷ್ಟವಾದ ಫ್ಯಾಷನ್ ಶೋ ಆಯೋಜಿಸಲಾಗಿತ್ತು.

ಬಣ್ಣ ಬಣ್ಣ ಡ್ರೆಸ್ ಕೊಟ್ಟ ರೂಪದರ್ಶಿಗಳು ರಾಂಪ್ ಮೇಲೆ ಹೆಜ್ಜೆಹಾಕುತಿದ್ರೆ, ನೆರೆದಿದ್ದ ಪ್ರೇಕ್ಷಕರು ಸಂಭ್ರಮಿಸುತ್ತಿದ್ರು.

ಆಗಷ್ಟೇ ಫ್ಯಾಷನ್ ಜಗತ್ತಿಗೆ ಕಾಲಿಟ್ಟ ಮಾಡೆಲ್ ಗಳ ಜೊತೆಗೆ ಅನುಭವಿ ರೂಪದರ್ಶಿಗಳು ಕ್ಯಾಟ್ ವಾಕ್ ಮಾಡಿದ್ದು ವಿಶೇಷವಾಗಿತ್ತು.


ಫ್ಯಾಷನ್ ಶೋ ಜೊತೆಗೆ ಮನೋರಂಜನಾ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು.



ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ, ರಾಮರಾಮ ರೇ ಖ್ಯಾತಿಯ ಧರ್ಮಣ್ಣ, ಕಾಣದಂತೆ ಮಾಯವಾದನು ನಿರ್ಮಾಪಕರಾದ ಸೋಮ ಸಿಂಗ್ ಬ್ಯೂಟಿಫುಲ್ ಮನಸುಗಳು ಹಾಗೂ ನೀರುದೋಸೆ ಚಿತ್ರದ ನಿರ್ಮಾಪಕ ಪ್ರಸನ್ನ ಶ್ರೀನಿವಾಸ್, ಕೆಜಿಎಫ್ ಖ್ಯಾತಿಯ ಶಾಂಭವಿ ವೆಂಕಟೇಶ್ ಸೇರಿದಂತೆ ಹಲವು ನಟ ನಟಿಯರು ಭಾಗವಹಿಸಿದ್ದರು.

ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ತೀರ್ಪುಗಾರರಾಗಿ

