‘ಒಂದು ಗಂಟೆಯ ಕಥೆ’ ಪುಲ್ ಡಬ್ಬಲ್ ಮೀನಿಂಗ್ : ಸಖತ್ ವೈರಲ್ ಆಗ್ತಿದೆ ಚಿತ್ರದ ಟ್ರೈಲರ್

0

ಒಂದು ಮೊಟ್ಟೆಯ ಕಥೆ, ಒಂದು ಮುತ್ತಿನ ಕಥೆಯಾಯ್ತು. ಇದೀಗ ಒಂದು ಗಂಟೆಯ ಕಥೆ ಹೇಳೋದಕ್ಕೆ ಹೊರಟಿದೆ ಚಿತ್ರತಂಡ. ನೈಜ ಘಟನೆಯನ್ನು ಆಧರಿಸಿರೋ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಡಬ್ಬಲ್ ಮೀನಿಂಗ್ ನಿಂದ ಕೂಡಿರೋ ಟ್ರೈಲರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹವಾ ಎಬ್ಬಿಸಿದೆ.

ಮಿಲನ, ತಾರಕ್, ಶ್ರೀ ಸಿನಿಮಾಗಳನ್ನು ನಿರ್ಮಿಸಿದ್ದ ಕೆ.ಎಸ್.ದುಷ್ಯಂತ್ ಅರ್ಪಿಸಿ, ರಿಯಲ್ ವೆಲ್ತ್ ವೆಂಚರ್ ಪ್ರೋಡಕ್ಸನ್ ಬ್ಯಾನರ್ ನಡಿಯಲ್ಲಿ ಕಶ್ಯಪ್ ದಾಕೋಜು ಒಂದು ಗಂಟೆಯ ಕಥೆಗೆ ಬಂಡವಾಳ ಹೂಡಿಸಿದ್ದಾರೆ. ಚಿತ್ರದ ಶೀರ್ಷಿಕೆ ನೋಡಿ ಇದೇನಾದ್ರೂ ಒಂದು ಗಂಟೆಯ ಸಿನಿಮಾ ಅಂತಾ ಬಾವಿಸಬೇಡಿ. ಯಾಕೆಂದ್ರೆ ಇದು ಒಂದು ಗಂಟೆಯ ಸಿನಿಮಾ ಅಲ್ಲಾ ಪೂರ್ಣಾವಧಿಯ ಸಿನಿಮಾ.

ಆದರೆ ನೈಜ ಘಟನೆಯ ಸಿನಿಮಾ ಆಗಿರೋದ್ರಿಂದಲೇ ಸಿನಿಮಾ ಆಗಿರೋದ್ರಿಂದಲೇ ಚಿತ್ರಕ್ಕೆ ಒಂದು ಗಂಟೆಯ ಕಥೆ ಹೆಸರನ್ನು ಇಡಲಾಗಿದೆಯಂತೆ. ಮತ್ತೆ ಮುಂಗಾರು ಸಿನಿಮಾ ಖ್ಯಾತಿಯ ದ್ವಾರ್ಕಿ ರಾಘವ್ ಒಂದು ಗಂಟೆಯ ಕಥೆಗೆ ಚಿತ್ರಕಥೆ, ಸಾಹಿತ್ಯದ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ನೈಜ ಘಟನೆ ಆಧಾರಿತ ಸಿನಿಮಾ ಬಹುತೇಕ ಹಾಸ್ಯದಿಂದಲೇ ಕೂಡಿದೆ. 1300ಕ್ಕೂ ಅಧಿಕ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬೆಂಗಳೂರು, ಮಡಿಕೇರಿ ಮಾತ್ರವಲ್ಲದೇ ಕೇರಳ, ಆಂಧ್ರಪ್ರದೇಶದಲ್ಲಿಯೂ ಶೋಟಿಂಗ್ ಮಾಡಲಾಗಿದೆ. ಅಜಯ್ ರಾಜ್ (ನಂಜುಂಡ), ಶನಾಯ ಕಾಟ್ವೆ, ಸ್ವಾತಿ ಶರ್ಮ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಮಾತ್ರವಲ್ಲ ಚಿದಾನಂದ್, ಪ್ರಶಾಂತ್ ಸಿದ್ಧಿ, ಪುಟ್ಟಗೌರಿ ಖ್ಯಾತಿಯ ಚಂದ್ರಕಲಾ, ಯಶವಂತ್ ಸರ್ದೇಶಪಾಂಡೆ, ನಾಗೇಂದ್ರ ಷಾ, ಮಿಮಿಕ್ರಿ ಗೋಪಿ, ಸಿಲ್ಲಿ ಲಲ್ಲಿ ಆನಂದ್, ಕುಳ್ಳ ಸೋಮು, ಮಜಾ ಟಾಕೀಸ್ ರೆಮೊ, ರುಕ್ಮಿಣಿ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಡೆನ್ನಿಸ್ ವಲ್ಲಭನ್ ಸಂಗೀತದಲ್ಲಿ ಹಾಡುಗಳಿಗೆ ಕಿವಿಗೆ ಇಂಪು ನೀಡಿದ್ರೆ, ಸೂರ್ಯಕಾಂತ್ ಕ್ಯಾಮರಾ ಕೈಚಳ ಹಾಗೂ ಗಣೇಶ್ ಸಂಕಲನ ಇಷ್ಟವಾಗುವಂತಿದೆ.

ಒಂದು ಮೊಟ್ಟೆಯ ಕಥೆ, ಒಂದು ಮುತ್ತಿನ ಕಥೆ ಸ್ಯಾಂಡಲ್ ವುಡ್ ನಲ್ಲೇ ಸೂಪರ್ ಡೂಪರ್ ಹಿಟ್ ಆದ ಸಿನಿಮಾ, ಅದರಂತೆಯೇ ಒಂದು ಗಂಟೆಯ ಕಥೆ ಕೂಡ ಸಕ್ಸಸ್ ಕಾಣುತ್ತೆ ಅನ್ನೋ ವಿಶ್ವಾಸದಲ್ಲಿದೆ ಚಿತ್ರತಂಡ.

ಡಬ್ಬಲ್ ಮೀನಿಂಗ್ ಟ್ರೇಲರ್ ಬಿಡುಗಡೆ ಮಾಡಿದ್ದ ಸಿಂಪಲ್ ಆಗ್ ಒಂದು ಲವ್ ಸ್ಟೋರಿ ಸಕ್ಸಸ್ ಕಂಡಿತ್ತು. ಅದೇ ಹಾದಿಯಲ್ಲೇ ಒಂದು ಗಂಟೆಯ ಕಥೆ ಸಾಗುವ ಸೂಚನೆ ನೀಡಿದೆ. ಟ್ರೇಲರ್ ನೋಡಿದ್ರೆ ಮಾತ್ರವೇ ಸಿನಿಮಾದ ಹೆಸರು ಯಾಕಿಟ್ಟಿದ್ದಾರೆ ಅನ್ನೋದು ಅರ್ಥವಾಗುತ್ತೆ.

Leave A Reply

Your email address will not be published.