Trending : ಗ್ರಾಮದೊಳಗೆ ಮೊಸಳೆಯ ವಾಕಿಂಗ್ : ವೈರಲ್ ಆಯ್ತು ವೀಡಿಯೋ

ಕಾರವಾರ : ಆ ಗ್ರಾಮದ ಜನರಿಗೆ ಬೆಳ್ಳಂಬೆಳಗ್ಗೆಯೇ ಶಾಕ್ ಆಗಿತ್ತು. ಗ್ರಾಮದಲ್ಲಿನ ರಸ್ತೆಯಲ್ಲಿ ಮೊಸಳೆಯೊಂದು ವಾಕಿಂಗ್ ಮಾಡಿದೆ. ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಕೋಗಿಲುಬನ ಗ್ರಾಮದಲ್ಲಿನ ಜನರಿಗೆ ಕೆಲವು ಕಾಲ ಆತಂಕವನ್ನುಂಟು ಮಾಡಿದೆ

ಕಾಳಿ ನದಿಯಿಂದ ಹೊರಬಂದ ಮೊಸಳೆ ಈ ಗ್ರಾಮದ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆ ಕಾಲ ಸಂಚರಿಸಿತು. ಗ್ರಾಮದ ಜನರಿಗೆ ಆತಂಕದ ಜೊತೆಗೆ ಆಶ್ಚರ್ಯವೂ ಆಗಿತ್ತು.‌ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಯವರು  ಮೊಸಳೆಯನ್ನ ಮತ್ತೆ ನದಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಗಿಲು ಬನ ಗ್ರಾಮದ ಸಮೀಪದಲ್ಲಿಯೇ ಇರುವ ಕಾಳಿ ನದಿಯಲ್ಲಿ ಮೊಸಳೆ ಪಾರ್ಕ್ ಇದೆ. ಈ ಪಾರ್ಕ್ ನಲ್ಲಿ ನೂರಾರು ಮೊಸಳೆಗಳಿದ್ದು, ಅಲ್ಲಿಂದ ಮೊಸಳೆ ಬಂದಿರಬಹುದು ಎನ್ನಲಾಗುತ್ತಿದೆ. ಆದರೆ ಜನವಸತಿ ಇರುವ ಕೋಗಿಲು ಬನ  ಪ್ರದೇಶಕ್ಕೆ ಮೊಸಳೆ ಬಂದಿದ್ದು ಮೊದಲು ಎನ್ನಲಾಗಿದೆ.

Comments are closed.