ಮಂಗಳೂರು : ಬಿಸಿಲ ಬೇಗೆಯಲ್ಲಿ ಇಡೀ ಊರೇ ಧಗ ಧಗ ಎನ್ನುತಿದೆ. ನೀರು ಯಾ ತಂಪಾದ ಆಹಾರ ಸೇವಿಸಬಹುದಾದ ಮಾನವ ಕುಲಕ್ಕೇ ಹೀಗಾಗ ಬೇಕಾದರೆ ಪ್ರಾಣಿ-ಪಕ್ಷಿಗಳು ಏನೇನ್ನಬೇಡ ? ಇದಕ್ಕಾಗಿಯೇ ಪಕ್ಷಿಗಳಿಗೆ ನೀರು, ಆಹಾರ ಬೇಕು. ಅದಕ್ಕಾಗಿ DIY (Do-It-Yourself) ಮಾದರಿಯಲ್ಲಿ ರಚಿಸಲಾಗಿದೆ.

Global Academy ನ ನಿರ್ದೇಶಕ ಆಸ್ಪರ್ ರಝಕ್ ಮತ್ತು ಸಹ್ಯಾದ್ರಿ ಕಾಲೇಜಿನ ಡಾ. ಅನಂತ್ ಪ್ರಭು, ಸಿದ್ದ ಪಡಿಸಿರುವ ಬರ್ಡ್ ಪೀಡರ್ ಗೆ ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಲವೊಂದು ಪಕ್ಷಿಗಳು ಆಹಾರ ಇಲ್ಲದೇ ಬಳಲುವುದು ಮತ್ತು ಗಾಯಗೊಂಡು ನರಳುವುದು ಕೂಡಾ ಕಾಣಿಸುತ್ತದೆ. ಇದನ್ನು ಕಂಡವರು ಸೂಕ್ತ ಪರಿಹಾರಕ್ಕೆ ಶ್ರಮ ಪಡೋಣ” ಎಂದು ಹೇಳಿದರು.

ಬರ್ಡ್ ಪೀಡರ್ ಒಂದು ಸರಳ ಉಪಕರಣ ಆಗಿದ್ದು ಯಾರೂ ಕೂಡಾ ತಮ್ಮ ಮನೆಯಲ್ಲಿ ಉಪಯೋಗ ಮಾಡಿ ಹಳೆಯದಾದ ಅಥವಾ ಉಪಯೋಗಕ್ಕೆ ಇಲ್ಲದ ವಸ್ತುಗಳಿಂದ ತಯಾರಿಸಲು ಸಾಧ್ಯ ಎಂದು ಡಾ.ಅನಂತ್ ಪ್ರಭು.ಜಿ ಮಾಹಿತಿ ನೀಡಿದ್ದಾರೆ.

ಬೇಸಿಗೆಯ ಬಿಸಿಯಲ್ಲಿ ಮನುಷ್ಯರೇ ಕಷ್ಟಪಡುತ್ತಿರುವಾಗ ಪಕ್ಷಿಗಳ ಪಾಡು ಹೇಳತೀರದು. ಹಾಗಾಗಿ ನಾವು ನಮಗೆ ಸಿಕ್ಕಿದ ಸ್ಥಳದಲ್ಲಿ ಪಕ್ಷಿಗಳಿಗೆ ನೀರು, ಆಹಾರ ನೀಡಿ ಮಾನವೀಯತೆ ಮೆರೆಯೋಣ, ಎಂದು ರಝಕ್ ಹೇಳಿದ್ದಾರೆ.