ಲಂಡನ್ : ಕತ್ತೆ ತರ ದುಡಿದ್ರು 20೦-30 ಸಾವಿರ ಸಂಬಳ ಸಿಗಲ್ಲ ಅಂತ ಕೊರಗುತ್ತಾ ಇರೋರಿಗೆ ಇಲ್ಲೊಂದು ಆಫರ್ ಕಾದಿದೆ. ನಾಯಿ ವಾಕಿಂಗ್ ಮಾಡಿಸಿದ್ರೇ ಸಾಕು ನಿಮಗೆ ತಿಂಗಳಿಗೆ ಎರಡು ಲಕ್ಷ ಸಂಬಳ ಸಿಗುತ್ತೆ.

ಏನು ಜೋಕ್ ಮಾಡ್ತಾ ಇದ್ದೀರಾ ಅನ್ನಬೇಡಿ. ನಿಜವಾಗಿಯೂ ಇಂತಹದೊಂದು ಕೆಲಸಕ್ಕೆ ಅರ್ಜಿ ಕರೆಯಲಾಗಿದೆ. ಲಂಡನ್ ನಲ್ಲಿರುವ ಜೋಸೆಫ್ ಹಜೆ ಆ್ಯರೂನ್ ಅವರ ಲಾ ಸಂಸ್ಥೆ ಇಂತಹದೊಂದು ಕೆಲಸಕ್ಕೆ ಆಸಕ್ತರಿಗೆ ಅರ್ಜಿ ಕರೆದಿದೆ. ಈ ಸಂಸ್ಥೆಯ ಹಿರಿಯ ವಕೀಲರ ಬಳಿ ಒಂದು ಸಾಕುನಾಯಿ ಇದೆ.

ಆ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಿ ಸುತ್ತಾಡಿಸಿಕೊಂಡು ಬಂದು ಪಾಲನೆ ಮಾಡುವವರಿಗೆ ತಿಂಗಳಿಗೆ 1 ಲಕ್ಷ ಸಂಬಳ ಹಾಗೂ ಇನ್ಸೂರೆನ್ಸ್, ಪಿಂಚಣಿ ಸೇರಿದಂತೆ ಹಲವು ಸೌಲಭ್ಯ ನೀಡೋದಾಗಿ ಜೊಸೆಫ್ ಹಜೆ ಆ್ಯರೂನ್ ಘೋಷಿಸಿದ್ದಾರೆ.

ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ನಾಯಿಯನ್ನು ಇಡಿ ಲಂಡನ್ ಸುತ್ತಾಡಿಸಿಕೊಂಡು ಬರಬೇಕು. ಕೆಲಸದ ವೇಳೆ ನಿರ್ಲಕ್ಷ್ಯ ಮಾಡಬಾರದು ಅನ್ನೋದು ನಿಯಮ. ವಾರದ ಐದೇ ದಿನ ಕೆಲಸ ಮಾಡಿದ್ರೇ ಸಾಕಂತೆ.

ಕಂಪನಿಯ ವೆಬ್ ಸೈಟ್ ನಲ್ಲಿ ಇಂತಹದೊಂದು ಜಾಬ್ ಗೆ ಆಫರ್ ನೀಡ್ತಿದ್ದಂತೆ ಸಾವಿರಾರು ಜನರು ಅರ್ಜಿ ಹಾಕಿದ್ದಾರಂತೆ. ಅಂದ ಹಾಗೇ ಈ ಜಾಬ್ ಗೆ ವಿದ್ಯಾರ್ಹತೆ, ಸ್ತ್ರೀ ಪುರುಷ ಅನ್ನೋ ಯಾವ ಬೇಧ-ಭಾವವೂ ಇಲ್ವಂತೆ. ನೀವು ಒಮ್ಮೆ ಪ್ರಯತ್ನಿಸಿ ನೋಡೋದಾದರೇ ನೋಡಿ.