ಮಂಗಳವಾರ, ಜೂನ್ 17, 2025
Homeಮಿಸ್ ಮಾಡಬೇಡಿಫೇಸ್ ಬುಕ್ Create Room ಬಗ್ಗೆ ನಿಮಗೆ ಗೊತ್ತಾ ?

ಫೇಸ್ ಬುಕ್ Create Room ಬಗ್ಗೆ ನಿಮಗೆ ಗೊತ್ತಾ ?

- Advertisement -

ನವದೆಹಲಿ : ಜಾಗತಿಕವಾಗಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲ ಫೇಸ್ ಬುಕ್ ಕ್ರೀಯೆಟ್ ರೂಮ್ ಅನ್ನುವ ಐಕಾನ್ ಆರಂಭಿಸಿದೆ. ಫೇಸ್ ಬುಕ್ ಬಳಕೆ ದಾರರು ಹಾಗೂ ವಾಟ್ಸಾಪ್ ಬಳಕೆದಾರರಿಗೆ ಈ ಐಕಾನ್ ಲಭ್ಯವಾಗುತ್ತಿದೆ.

Facebook Create Room 1

ಈ ಬಗ್ಗೆ ಹಲವಾರು ಪ್ರಶ್ನೆಗಳು ಪ್ರಾರಂಭದಲ್ಲಿ ಗ್ರಾಹಕರಿಗೆ ಮೂಡಿತ್ತು. ಅಷ್ಟಕ್ಕೂ ಈ ಕ್ರಿಯೆಟ್ ರೂಮ್ ಅನ್ನುವ ಫೀಚರ್ಸ್ ಬಳಕೆ ಮಾಡೋದು ಹೇಗೆ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ನಿಮ್ಮ ಎಲ್ಲಾ ಗೊಂದಲಗಳಿಗೂ ಉತ್ತರ ಇಲ್ಲಿದೆ.

Alvas1

ಜಾಗತಿಕವಾಗಿ ಪ್ರಖ್ಯಾತಿಯನ್ನು ಗಳಿಸಿಕೊಂಡಿರುವ ಫೇಸ್ ಬುಕ್ ಒಡೆತನದ ಆಪ್ ಗಳಲ್ಲಿ ಒಟ್ಟು 3.14 ಬಿಲಿಯನ್ ಜನರಿದ್ದಾರೆ. ಈ ಆಪ್ ಗಳ ಬಳಕೆದಾರರನ್ನು ವಾಟ್ಸ್ ಆಪ್ ವೆಬ್ ಸಹಾಯದಿಂದ ಮೆಸೆಂಜರ್ ರೂಮ್ ಮೂಲಕ ಒಟ್ಟಿಗೆ ತರುವ ಪ್ರಯತ್ನ ಇದಾಗಿದೆ.

Facebook Create Room 7

ವಾಟ್ಸ್ ಆಪ್ ವೆಬ್ ನಲ್ಲಿ ಮೆನು ವಿಭಾಗದಲ್ಲಿ ಕ್ರಿಯೇಟ್ ಎ ರೂಮ್ ಎಂಬ ಆಯ್ಕೆ ಇದೆ ಅದನ್ನು ಬಳಕೆ ಮಾಡುವ ಮೂಲಕ ಸಮಯದ ಮಿತಿ ಇಲ್ಲದೇ ವಾಟ್ಸ್ ಆಪ್ ಡೆಸ್ಕ್ ಟಾಪ್ ಮೂಲಕ 50 ಜನರೊಂದಿಗೆ ಗ್ರೂಪ್ ವಿಡಿಯೋ ಕಾಲ್ ಮಾಡಬಹುದಾಗಿದೆ.

ಜೂಮ್ ಗೆ ಪರ್ಯಾಯವಾಗಿ ಫೇಸ್ ಬುಕ್ ವಿಡಿಯೋ ಕಾನ್ಫರೆನ್ಸಿಂಗ್ ಟೂಲ್ ಮೆಸೆಂಜರ್ ರೂಮ್ಸ್ ನ್ನು ಮೇ ತಿಂಗಳಲ್ಲಿ ಲೋಕಾರ್ಪಣೆ ಗೊಳಿಸಿತ್ತು.

Facebook Create Room 2

ಫೇಸ್ ಬುಕ್ ಖಾತೆ ಇಲ್ಲದವರೂ ಸಹ ಮೆಸೆಂಜರ್ ರೂಮ್ಸ್ ಗೆ ಸೇರ್ಪಡೆಯಾಗಬಹುದಾಗಿದೆ ಹಾಗೂ ಇದರಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಫೇಸ್ ಬುಕ್ ಲೈವ್ ನಲ್ಲಿ ಹಂಚಿಕೊಳ್ಳಬಹುದಾಗಿದೆ.

Facebook Create Room 8

ಫೇಸ್‌ಬುಕ್‌ ಗೆಳೆಯರು ಸೇರಿದಂತೆ Facebookನ ಆ್ಯಪ್ಗಳಾದ ವಾಟ್ಸಾಪ್, ಇನ್ಸ್ಟಾಗ್ರಾಮ್ ಮೂಲಕ ಕೂಡ ನೀವು ಒಟ್ಟಾರೆಯಾಗಿ ಒಂದೇ ಸಮಯಕ್ಕೆ 50 ಜನ ಲೈವ್ ಹೋಗಬಹುದು.

Facebook Create Room 5

ಬಳಕೆದಾರರಿಗೆ ತಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ವಿಡಿಯೋ ಕಾಲ್ ಮಾಡುವುದಕ್ಕಾಗಿ ಮೆಸೆಂಜರ್ ರೂಮ್ಸ್ ಸಹಕಾರಿ ಆಗಲಿದೆ.

Facebook Create Room 6

ಸದ್ಯ ಲ್ಯಾಪ್ ಟಾಪ್ ಹಾಗೂ ಕಂಪ್ಯೂಟರ್ ಗಳಲ್ಲಿ ಮಾತ್ರವೇ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಮೊಬೈಲ್ ಬಳಕೆದಾರರಿಗೂ ಈ ಸೌಲಭ್ಯ ಫೇಸ್ ಬುಕ್ ಇನ್ನಷ್ಟೇ ಒದಗಿಸಬೇಕಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular