ಹದಿ ಹರೆಯದ ಯುವಕ ಯುವತಿಯರು ಕಾಯುತ್ತಿದ್ದ ವ್ಯಾಲೆಂಟೈನ್ಸ್ ಡೇ (Valentine’s day) ಕೊನೆಗೂ ಬಂದೆ ಬಿಟ್ಟಿತು! ಬಹಳಷ್ಟು ಮಂದಿ ಇಂದು ರಾತ್ರಿಯ ನಂತರ ಡೇಟ್ ಪ್ಲಾನ್ ಮಾಡಿರಬಹುದು. ಒಂದು ವೇಳೆ ಡೇಟ್ ಪ್ಲಾನ್ ಹೊಂದಿದ್ದರೆ ಮತ್ತು ಆಕೆಗೆ/ಆತನಿಗೆ ಏನು ನೀಡಬೇಕೆಂದು ನಿಮಗೆ ಐಡಿಯಾ ಇಲ್ಲದಿದ್ದರೆ, ಚಿಂತಿಸಬೇಡಿ.(Valentine’s Day Gift Ideas)
ಕೊನೆ ಗಳಿಗೆಯಲ್ಲಿ, ಸರಿಯಾದ ಉಡುಗೊರೆಯನ್ನು ಕಂಡುಹಿಡಿಯುವುದು ಕಷ್ಟ. ನಿಮ್ಮ ಸಂಗಾತಿ ಟೆಕ್ನೋಫೈಲ್ ಆಗಿದ್ದರೆ ಅದು ಇನ್ನೂ ಹೆಚ್ಚು. ಹೌದು, ಟೆಕ್-ಆಧಾರಿತ ಉಡುಗೊರೆ ಮೆಚ್ಚಿಸಲು ಸರಿಯಾದ ವ್ಯಾಲೆಂಟೈನ್ಸ್ ಡೇ ಉಡುಗೊರೆಯನ್ನು ಕಂಡುಹಿಡಿಯುವುದು ನಿಜವಾಗಿಯೂ ಕಷ್ಟಕರವಾಗಿರುತ್ತದೆ. ಆದರೆ ಚಿಂತಿಸಬೇಡಿ! ನಾವು ನಿಮ್ಮ ಸಂಗಾತಿಗಾಗಿ ಟಾಪ್ 5 ವ್ಯಾಲೆಂಟೈನ್ ಉಡುಗೊರೆಗಳ ಪಟ್ಟಿಯನ್ನು ರಚಿಸಿದ್ದೇವೆ. ಅದು ನಿಮಗೆ ಉಡುಗೊರೆ ಆಯ್ಕೆ ಮಾಡಲು ಸಾಕಷ್ಟು ಸಹಾಯ ನೀಡುತ್ತದೆ. ಪಟ್ಟಿಯಲ್ಲಿ ಅಮಜಾನ್ ಫೈರ್ ಟಿವಿ ಸ್ಟಿಕ್ (Amazon Fire TV Stick), wireless earphones ( ವಯರ್ ಲೆಸ್ ಇಯರ್ ಫೋನ್) ಇನ್ನೂ ಸೇರಿವೆ.
ಅಮೆಜಾನ್ ಫೈರ್ ಟಿವಿ ಸ್ಟಿಕ್
ನಿಮ್ಮ ಸಂಗಾತಿಯ ಹೃದಯ ಗೆಲ್ಲಲು ಉತ್ತಮ ಮಾರ್ಗವೆಂದರೆ ಅವರ ಬಿಂಜ್ ಸೆಷನ್ (binge session) ಗಳನ್ನು ಸುಲಭಗೊಳಿಸುವುದು. ಅಮಜಾನ್ ಫೈರ್ ಟಿವಿ ಸ್ಟಿಕ್ ನಿಖರವಾಗಿ ಅದನ್ನು ಮಾಡಬಹುದು. ಈ ಸ್ಟ್ರೀಮಿಂಗ್ ಮೀಡಿಯಾ ಪ್ಲೇಯರ್ (HDMI p) ಮೂಲಕ ನಿಮ್ಮ ವೈಫೈ ಮತ್ತು ಟಿವಿಗೆ ಸುಲಭವಾಗಿ ಸಂಪರ್ಕಿಸುತ್ತದೆ. ಜೊತೆಗೆ ಡಿಸ್ನಿ+ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, ಪ್ರೈಮ್ ವೈಡ್ ಸೋನಿಲೈವ್, ಝೀ5, ಯೂಟ್ಯೂಬ್ ಮುಂತಾದ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅದ್ಭುತ ಚಲನಚಿತ್ರಗಳು, ಟಿವಿ ಶೋಗಳು ಮತ್ತು ಹೆಚ್ಚಿನವುಗಳಿಗೆ ಪ್ರವೇಶವನ್ನು ನೀಡುತ್ತದೆ. ಇದನ್ನು ಬಟನ್ ಅಥವಾ ವಾಯ್ಸ್ ಕಮಾಂಡ್ ಮೂಲಕ ನಿರ್ವಹಿಸಲು ಸಾಧ್ಯ.
ವೈರ್‌ಲೆಸ್ ಇಯರ್‌ಫೋನ್‌ಗಳು
ಕೆಲವು ಉತ್ತಮ ಗುಣಮಟ್ಟದ ವೈರ್‌ಲೆಸ್ ಇಯರ್‌ಫೋನ್‌ಗಳೊಂದಿಗೆ ನಿಜವಾದ ಆಡಿಯೊಫೈಲ್‌ನ ಆನಂದಿಸಬಹುದು. ಮಾರುಕಟ್ಟೆಯು ಉತ್ತಮ ಇಯರ್‌ಫೋನ್‌ಗಳ ಆಯ್ಕೆಗಳಿಂದ ತುಂಬಿರುವಾಗ, ನೀವು ಇಲ್ಲಿ ಅತ್ಯುತ್ತಮವಾದ ಕೈಗೆಟುಕುವ ಇಯರ್‌ಫೋನ್‌ಗಳನ್ನು ಪರಿಶೀಲಿಸಬಹುದು. ಈ ಉಡುಗೊರೆ ಕಲ್ಪನೆಯು ಖಂಡಿತವಾಗಿಯೂ ಸಂಗಾತಿಯ ಹೃದಯವನ್ನು ಗೆಲ್ಲುತ್ತದೆ.
ಎಕೋ ಡಾಟ್ 3 ನೇ ಜನ್:
ಅರ್ಧದಷ್ಟು ಜನರು ಮ್ಯೂಸಿಕ್ ಆಲಿಸುವುದನ್ನು ಇಷ್ಟಪಡುತ್ತಾರೆ.ಹಾಡು ಕೇಳಲು, ಸ್ಮಾರ್ಟ್ ಸ್ಪೀಕರ್ ಯೋಗ್ಯವಾದ ಉಡುಗೊರೆಯಾಗಿರಬಹುದು. ಎಕೋ ಡಾಟ್ ಅನ್ನು ಧ್ವನಿಯಿಂದ ನಿರ್ವಹಿಸಬಹುದು. ಇದು ಇಂಗ್ಲಿಷ್ ಮತ್ತು ಹಿಂದಿ ಎರಡನ್ನೂ ಮಾತನಾಡಬಲ್ಲದು. ಜೊತೆಗೆ ಹ್ಯಾಂಡ್ಸ್-ಫ್ರೀ ಸಂಗೀತ ನಿಯಂತ್ರಣವನ್ನು ಒಳಗೊಂಡಿರುತ್ತದೆ.
ಗೋ ಪ್ರೊ ಹೀರೊ 10
ಇದು ಮುಂಭಾಗದ ಎಲ್ ಸಿಡಿ ಮತ್ತು ಟಚ್ ರಿಯರ್ ಸ್ಕ್ರೀನ್‌ಗಳೊಂದಿಗೆ ವಾಟರ್ ಪ್ರೂಫ್ ಆಕ್ಷನ್ ಕ್ಯಾಮೆರಾ ಆಗಿದೆ. ನೀವು ಮತ್ತು ನಿಮ್ಮ ಸಂಗಾತಿ ಸಾಹಸಗಳನ್ನು ಮತ್ತು ಪ್ರಯಾಣವನ್ನು ಪ್ರೀತಿಸುತ್ತಿದ್ದರೆ ಅಥವಾ ಚಿತ್ರಗಳನ್ನು ಕ್ಲಿಕ್ಕಿಸುವುದನ್ನು ಇಷ್ಟಪಡುತ್ತಿದ್ದರೆ, ಇದು ಉಡುಗೊರೆಯಾಗಿ ನೀಡಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 3
ಹೆಚ್ಚುತ್ತಿರುವ ಆರೋಗ್ಯದ ಕಾಳಜಿಯೊಂದಿಗೆ ನಿಮ್ಮ ಆರೋಗ್ಯದ ಮಾಹಿತಿ ಇಟ್ಟುಕೊಳ್ಳುವುದು ಮತ್ತು ಅದನ್ನು ಸರಿಯಾಗಿ ಮೇಲ್ವಿಚಾರಣೆ ಮಾಡುವುದು ಬಹಳ ಮುಖ್ಯವಾಗಿದೆ. ಅದಕ್ಕಾಗಿ ಒಂದು ಸ್ಮಾರ್ಟ್ ವಾಚ್ ನಿಮಗೆ ಸಹಾಯ ಮಾಡಬಹುದು. ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 3 ವರ್ಧಿತ ರನ್ನಿಂಗ್ ಅನಾಲಿಸಿಸ್, ಸ್ಲೀಪ್ ಟ್ರ್ಯಾಕಿಂಗ್, ಬ್ಲಡ್ ಆಕ್ಸಿಜನ್, ಹೋಮ್ ವರ್ಕೌಟ್ ಪ್ರೋಗ್ರಾಮ್‌ಗಳ ಮೂಲಕ ನಿಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಬಹುದು.
ಇದನ್ನೂ ಓದಿ:Valentine’s Day 2022: ಪ್ರೀತಿಸುವವರಿಗೂ ಒಂದು ದಿನ!
( Gift ideas for your partner on Valentine’s day)