ಗೂಗಲ್ ಇಂಡಿಯಾ ( Google Year in Search 2021 ) 2021ನೇ ಸಾಲಿನಲ್ಲಿ ಅತೀ ಹೆಚ್ಚು ಸರ್ಚ್ ಮಾಡಲಾದ ವಿಷಯಗಳನ್ನು(Google list for top searches) ಘೋಷಣೆ ಮಾಡಿದೆ. ಮನೋರಂಜನೆ, ಸುದ್ದಿ, ಕ್ರೀಡೆ ಹೀಗೆ ವಿವಿಧ ವಿಭಾಗಗಳಲ್ಲಿ ಭಾರತೀಯರು ಯಾವೆಲ್ಲ ವಿಚಾರಗಳನ್ನು ಹೆಚ್ಚಾಗಿ ಸರ್ಚ್ ಮಾಡಿದ್ದಾರೆ ಅನ್ನೋದನ್ನು ಗೂಗಲ್ (Google Search 2021) ರಿವೀಲ್ ಮಾಡಿದೆ. ಹಾಗಾದರೆ ಭಾರತದಲ್ಲಿ ಅತೀ ಹೆಚ್ಚು ಸರ್ಚ್ ಮಾಡಲಾದ ಟಾಪ್ 10 ಹುಡುಕಾಟಗಳ ಪಟ್ಟಿ ಇಲ್ಲಿದೆ ನೋಡಿ :
- ಇಂಡಿಯನ್ ಪ್ರೀಮಿಯರ್ ಲೀಗ್
- ಕೋವಿನ್
- ಐಸಿಸಿ ಟಿ 20 ವರ್ಲ್ಡ್ ಕಪ್
- ಯುರೋ ಕಪ್
- ಟೋಕಿಯೋ ಒಲಿಂಪಿಕ್ಸ್
- ಕೋವಿಡ್ ಲಸಿಕೆ
- ಫ್ರೀ ಫೈರ್ ರಿಡೀಮ್ ಕೋಡ್
- ಕೋಪಾ ಅಮೆರಿಕ
- ನೀರಜ್ ಚೋಪ್ರಾ
- ಆರ್ಯನ್ ಖಾನ್
ಇನ್ನು ಜಾಗಗಳ ಹುಡುಕಾಟದ ವಿಚಾರದಲ್ಲಿ 2021ರಲ್ಲಿ ಭಾರತೀಯರು ಅತೀ ಹೆಚ್ಚು ಹುಡುಕಾಟ ನಡೆಸಿದ ಟಾಪ್ 10 ಸ್ಥಳಗಳ ಪಟ್ಟಿ ಇಲ್ಲಿದೆ ನೋಡಿ :
- ಕೋವಿಡ್ ಲಸಿಕಾ ಕೇಂದ್ರ
- ಕೋವಿಡ್ ಪರೀಕ್ಷಾ ಕೇಂದ್ರ
- ಫುಡ್ ಡೆಲಿವರಿ ಸ್ಥಳ
- ಆಕ್ಸಿಜನ್ ಸಿಲಿಂಡರ್
- ಕೋವಿಡ್ ಆಸ್ಪತ್ರೆ
- ಟಿಫಿನ್ ಸರ್ವೀಸ್
- ಸಿಟಿ ಸ್ಕ್ಯಾನಿಂಗ್ ಸೆಂಟರ್
- ಟೇಕೌಟ್ ರೆಸ್ಟಾರೆಂಟ್
- ಫಾಸ್ಟ್ಯಾಗ್
- ಡ್ರೈವಿಂಗ್ ಸ್ಕೂಲ್
ಗೂಗಲ್ನ ಟಾಪ್ 10 ‘ಹೇಗೆ’ ಎಂಬ ಹುಡುಕಾಟದ ಪಟ್ಟಿ ಇಲ್ಲಿದೆ ನೋಡಿ:
- ಕೋವಿಡ್ ಲಸಿಕೆಗೆ ನೋಂದಾಯಿಸುವುದು ಹೇಗೆ..?
- ಕೋವಿಡ್ ಲಸಿಕಾ ಪ್ರಮಾಣ ಪತ್ರ ಡೌನ್ಲೋಡ್ ಮಾಡುವುದು ಹೇಗೆ..?
- ಆಕ್ಸಿಜನ್ ಮಟ್ಟ ಹೆಚ್ಷಿಸುವುದು ಹೇಗೆ..?
- ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ..?
- ಮನೆಯಲ್ಲಿಯೇ ಆಕ್ಸಿಜನ್ ತಯಾರಿಸುವುದು ಹೇಗೆ..?
- ಭಾರತದಲ್ಲಿ dogecoin ಖರೀದಿ ಮಾಡುವುದು ಹೇಗೆ..?
- ಬನಾನಾ ಬ್ರೆಡ್ ಮಾಡುವುದು ಹೇಗೆ..?
- ಐಪಿಓ ಹಂಚಿಕೆ ಸ್ಟೇಟಸ್ ಪರಿಶೀಲನೆ ಹೇಗೆ..?
- ಬಿಟ್ಕಾಯಿನ್ನಲ್ಲಿ ಹೂಡಿಕೆ ಮಾಡುವುದು ಹೇಗೆ..?
- ಅಂಕವನ್ನು ಶೇಕಡಾವಾರು ರೂಪದಲ್ಲಿ ಬದಲಾಯಿಸುವುದು ಹೇಗೆ..?
ಟಾಪ್ 10 ‘ಏನು’ ಎಂಬ ಗೂಗಲ್ ಹುಡುಕಾಟ ಇಲ್ಲಿದೆ ನೋಡಿ :
- ಬ್ಲ್ಯಾಕ್ ಫಂಗಸ್ ಎಂದರೇನು..?
- ನೂರರ ಅಪವರ್ತನ ಎಂದರೇನು..?
- ತಾಲಿಬಾನ್ ಎಂದರೇನು..?
- ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ..?
- ರೆಮಿಡಿಸಿವರ್ ಎಂದರೇನು..?
- 4ರವರ್ಗಮೂಲ ಯಾವುದು..?
- ಸ್ಟೆರಾಯ್ಡ್ ಎಂದರೇನು..?
- ಟೂಲ್ಕಿಟ್ ಎಂದರೇನು..?
- ಸ್ಕ್ವಿಡ್ ಗೇಮ್ ಎಂದರೇನು..?
- ಡೆಲ್ಟಾ ಪ್ಲಸ್ ರೂಪಾಂತರಿ ಎಂದರೇನು..?
Google Year in Search 2021, Check out top 10 searches for India