snake garlands in bizarre wedding : ಮದುವೆ ಮನೆ ಅಂದಮೇಲೆ ಅಲ್ಲಿ ಹೂವಿನ ಹಾರ ಇಲ್ಲ ಅಂದರೆ ಆಗೋದಿಲ್ಲ. ವಧು ವರರಿಬ್ಬರು ಪರಸ್ಪರ ಹೂವಿನ ಹಾರವನ್ನು ಬದಲಾಯಿಸಿಕೊಳ್ಳುವುದನ್ನು ನೋಡುವುದೇ ಒಂದು ಅಂದ. ಆದರೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಗ್ರಾಮವೊಂದರಲ್ಲಿ ವಧು – ವರರಿಬ್ಬರು ಹೂವಿನ ಹಾರವನ್ನು ಬದಲಾಯಿಸಿಕೊಳ್ಳುವುದನ್ನು ಬಿಟ್ಟು ಹಾವನ್ನು ಹೂವಿನ ಹಾರದಂತೆ ಬಳಕೆ ಮಾಡಿ ಪರಸ್ಪರ ಬದಲಾಯಿಸಿಕೊಂಡಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವಿಡಿಯೋದಲ್ಲಿ ಶ್ವೇತ ವರ್ಣದ ಬಟ್ಟೆಯನ್ನು ಧರಿಸಿದ್ದ ವಧು – ವರರು ಅತ್ಯಂತ ಸರಳವಾಗಿ ಮದುವೆಗೆ ತಯಾರಾಗಿರೋದನ್ನು ಕಾಣಬಹುದಾಗಿದೆ. ಈ ಮದುವೆಯಲ್ಲಿ ಸಾಕಷ್ಟು ಜನರು ಕೂಡ ಸೇರಿದ್ದಾರೆ. ಮೊದಲು ವಧು ತನ್ನ ವರನ ಕೊರಳಿಗೆ ಹಾವೊಂದನ್ನು ಹೂವಿನ ಹಾರದಂತೆ ಹಾಕಿದ್ದಾರೆ. ಇದಾದ ಬಳಿಕ ವರನು ವಧುವಿನ ಕೊರಳಿಗೆ ಹೆಬ್ಬಾವನ್ನು ಹಾಕಿದ್ದಾನೆ. ಅಲ್ಲಿಂದ ಜನರೆಲ್ಲ ಯಾವುದೇ ರೀತಿಯ ಆಶ್ಚರ್ಯ ವ್ಯಕ್ತಪಡಿಸದೇ ಈ ಮದುವೆಯನ್ನು ಕಣ್ತುಂಬಿಕೊಂಡಿದ್ದಾರೆ.
ಅಂದಹಾಗೆ ಇದು ಈ ಗ್ರಾಮದ ಆಚರಣೆಯೇನಲ್ಲ. ಬದಲಾಗಿ ಈ ಇಬ್ಬರೂ ಸತಿ – ಪತಿಗಳು ಅರಣ್ಯ ಇಲಾಖೆಯ ಸಿಬ್ಬಂದಿಯಾಗಿದ್ದಾರೆ. ಹೀಗಾಗಿ ಹೂವಿನ ಬದಲು ಹಾವನ್ನು ಮಾಲೆಯಾಗಿ ಮಾಡಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಕೇಕ್ನಂತೆ ಸೇಲ್ ಆಗುತ್ತಿದ್ದು ಈ ರೀತಿ ಮದುವೆಯಾಗೋಕೆ ನಿಮಗೆ ಭಯವಾಗಲಿಲ್ಲವಾ ಎಂದು ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.
ಇದನ್ನು ಓದಿ : bjp leader balachandran killed : ಭದ್ರತಾ ಸಿಬ್ಬಂದಿ ಟೀ ವಿರಾಮಕ್ಕೆ ತೆರಳಿದ್ದ ವೇಳೆ ಬಿಜೆಪಿ ನಾಯಕನ ಬರ್ಬರ ಹತ್ಯೆ
ಇದನ್ನೂ ಓದಿ : Punjabi Singer Sidhu Moosewala : ಪಂಜಾಬಿನ ಗಾಯಕ ಸಿಧು ಮೂಸೆವಾಲಾಗೆ ಗುಂಡಿಕ್ಕಿ ಹತ್ಯೆ!
groom exchange snake garlands in bizarre wedding ritual leave internet stumped