ನವದೆಹಲಿ : ಸೌರ ಬಿರುಗಾಳಿ ಇಂದು ಭೂಮಿಗೆ ಅಪ್ಪಳಿಸಲಿದೆ. ಸೂರ್ಯನಲ್ಲಿ ಉಂಟಾಗಿರುವ ಈ ಸೌರ ಚಂಡ ಮಾರುತ ಜಿಪಿಎಸ್, ಮೊಬೈಲ್ ಫೋನ್ ಸಿಗ್ನಲ್‌ಗಳು ತಮ್ಮ ಕಾರ್ಯವನ್ನು ಬಂದ್ ಮಾಡುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ವಿಶ್ವ ಇದೀಗ ಸೌರ ಬಿರುಗಾಳಿಯನ್ನು ಎದುರಿಸಬೇಕಾದ ಸಂದಿಗ್ದತೆಗೆ ಸಿಲುಕಿದೆ. ಇಂದು ಬಹುತೇಕ ಸೌರ ಬಿರುಗಾಳಿ ಭೂಮಿಯತ್ತ ಬೀಸಲಿದೆ. ತಜ್ಞರ ಪ್ರಕಾರ, ಈ ವಾರಾಂತ್ಯದಲ್ಲಿ ಭೂಕಾಂತೀಯ ಸೌರ ಚಂಡಮಾರುತವು ಭೂಮಿಯ ವಾತಾವರಣವನ್ನು ಅಪ್ಪಳಿಸುವ ನಿರೀಕ್ಷೆಯಿದೆ.

ಸೌರಚಂಡಮಾರುತವು ಗಂಟೆಗೆ ಸರಿ ಸುಮಾರು ಒಂದು ಮಿಲಿಯನ್ ಮೈಲಿ ವೇಗದಲ್ಲಿ ಚಲಿಸಲಿದ್ದು, ಪ್ರಮುಖವಾಗಿ ಸೂರ್ಯನ ವಾತಾವರಣದಲ್ಲಿ ಒಂದು ರಂಧ್ರವಿದೆ, ಅದು ಚಾರ್ಜ್ಡ್ ಕಣಗಳು ಮತ್ತು ಹೆಚ್ಚಿನ ವೇಗದ ಸೌರ ಮಾರುತಗಳನ್ನು ಸೃಷ್ಟಿಸುತ್ತದೆ. ಚಂಡಮಾರುತವು ಭೂಮಿಯ ದಿಕ್ಕಿನತ್ತ ಸಾಗಿಬರುತ್ತಿದ್ದು, ಗ್ರಹದ ಕೆಲವು ಭಾಗಗಳನ್ನು ಹೊಡೆಯುವ ನಿರೀಕ್ಷೆಯಿದೆ.

ಬಲವಾದ ಗಾಳಿಯು ಭೂಮಿಯ ಕಾಂತಗೋಳದಲ್ಲಿ ಭೂಕಾಂತೀಯ ಚಂಡಮಾರುತವನ್ನು ಪ್ರಚೋದಿಸ ಬಹುದೆಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಉತ್ತರ ಹಾಗೂ ದಕ್ಷಿಣ ಧ್ರುವದಲ್ಲಿ ವಾಸಿಸುವ ಜನರು ರಾತ್ರಿಯ ಸಮಯದಲ್ಲಿ ಸೌರ ಚಂಡಮಾರುತದ ಬೆಳಕು ಗೋಚರಿಸಿದೆ ಎನ್ನಲಾಗುತ್ತಿದೆ. ಅಲ್ಲದೇ ಸೌರ ಬಿರುಗಾಳಿ ಜಿಪಿಎಸ್, ಮೊಬೈಲ್ ನೆಟ್ ವರ್ಕ್, ರೇಡಿಯೋ ಫ್ರಿಕ್ವೆನ್ಸ್ ಹಾಗೂ ಸ್ಯಾಟಲೈಟ್ ಸಿಗ್ನಲ್ ಗಳು ಕೆಲಸ ನಿಲ್ಲಿಸಲಿವೆ ಎನ್ನಲಾಗುತ್ತಿದೆ.