- ವಂದನ ಕೊಮ್ಮುಂಜೆ
ಮದುವೆ.. ಈ ಪದವನ್ನು ಕೇಳಿದ್ರೆ ಕೆಲವರಿಗೆ ಖುಷಿಯಾಗಬಹುದು. ಇನ್ನು ಕೆಲವರಿಗೆ ಬೇಜಾರಾಗಬಹುದು. ಅದೇ ಹೇಳುತ್ತಾರಲ್ಲ “ಮದುವೆ ಅನ್ನೋ ಲಾಡು ತಿಂದ್ರೂ ಕಷ್ಟ ತಿನ್ನದೇ ಇದ್ರೂ ಕಷ್ಟ” ಅಂತ. ಅದರಲ್ಲೂ ನಮ್ಮ ಗಂಡು ಮಕ್ಕಳಿಗೆ ಈ ಪದದ ಮೇಲೆ ಜಾಸ್ತಿ ಕೋಪ ಇರಹುದು.
ಹೆಂಡತಿ ಏನು ಮಾಡಿದ್ರೂ ಬೈತಾಳೆ. ಅದರಲ್ಲೂ ಬೇರೆ ಹೆಣ್ಣು ಮಕ್ಕಳನ್ನು ನೋಡಿದ್ರೆ ಅಂತು ಕೇಳೋದೇ ಬೇಡ ಅಂತ ಕಮೆಂಟ್ ಪಾಸ್ ಮಾಡೋರನ್ನು ನೋಡಿರುತ್ತೀರ. ಆದ್ರೆ ಇಲ್ಲೊಬ್ಬನಿಗೆ ಈ ಮದುವೆ ಅನ್ನೋದು ಜಾಮೂನಿಗಿಂತ ಸ್ವೀಟ್ ಆಗಿದೆ. ಅದಕ್ಕೆ ಕಾರಣ ಆತನ ಮೂವರು ಹೆಂಡತಿಯರು.
ಮೂವರು ಹೆಂಡಿತಿರಾ ? ಅಂತ ಶಾಕ್ ಆಗಬೇಡಿ. ಹೌದು ಈತನಿಗೆ ಮೂವರು ಹೆಂಡತಿಯರು ಆದರೂ ಅವರಲ್ಲಿ ಜಗಳವಿಲ್ಲ. ಒಂದೇ ಮನೆಯಲ್ಲಿ ಇರುತ್ತಾರೆ. ಅಷ್ಟು ಮಾತ್ರವಲ್ಲ ಇದೀಗ ಆತ ನಾಲ್ಕನೇ ಮದುವೆಗಾಗಿ ಮಧು ಅನ್ವೇಷಣೆಯಲ್ಲಿದ್ದಾನೆ. ಇದರಲ್ಲೂ ಅಚ್ಚರಿ ಯಾಗುವ ಮತ್ತೊಂದು ವಿಚಾರವಿದೆ ಅದು ಏನು ಗೊತ್ತಾ ? ಈ ವಧು ಅನ್ವೇಷಣೆ ಮಾಡ್ತಿರೋರೇ ಆತನ ಮೂರು ಹೆಂಡತಿಯರು
ಈ ಪತಿರಾಯನ ಹೆಸರು ಅದನಾನ್. ಈತನಿಗೆ ಈಗ 22 ವರ್ಷ. ಅದನಾನ್ ಗೆ ಮೂವರು ಹೆಂಡತಿಯರು. ಇವರ ಹೆಸರು ಶುಂಬಾಲ, ಶಬಾನ, ಶಹಿದಾ. ಈತನಿಗೆ ಮೊದಲು ಮದುವೆಯಾದ್ದು ಶುಂಬಾಲ, ಜೊತೆ ಅದು ೧೬ ವಯಸ್ಸಿನಲ್ಲಿ ಆಗ ಆತ ಓದುತ್ತಿದ್ದ. ನಂತರ ನಾಲ್ಕು ವರ್ಷದ ಬಳಿಕ ಶಬಾನಳನ್ನು ವಿವಾಹವಾಗಿದ್ದಾನೆ. ಕಳೆದ ವರ್ಷ ಶಹಿದ ಜೊತೆ ಕೂಡಾ ಈತನ ವಿವಾಹ ವಾಗಿದೆ. ಆದ್ರೆ ಈ ವಿವಾಹಗಳಿಗೆ ಯಾವುದೇ ಪತ್ನಿಯ ಆಕ್ಷೇಪವಿಲ್ಲ ಅನ್ನೋದೆ ಸತ್ಯ.
ಈ ಹೇಳುವ ಪ್ರಕಾರ ಆತನ ಪತ್ನಿಯರು ಒಂದೇ ಮನೆಯಲ್ಲಿದ್ದಾರೆ. ಜೊತೆಗೆ ಅನ್ಯೋನ್ಯವಾಗಿದ್ದಾರೆ. ಆತನ ಕೆಲಸವನ್ನು ಜೊತೆ ಸೇರಿ ಹಂಚಿ ಮಾಡುತ್ತಾರೆ. ಹೀಗಾಗಿ ಜಗಳಕ್ಕೆ ಆಸ್ಪದವೇ ಇಲ್ಲ ಅನ್ನೋದು ಆತನ ಮಾತು. ಒಂದು ವೇಳೆ ಅದನಾನ್ ಜೊತೆ ಜಗಳವಾಡಿದರೂ ಅದು ಮತ್ತೊಬ್ಬರಿಗಾಗಿ ಆತ ಸಮಯ ನೀಡೋದಿಲ್ಲ ಎನ್ನೋದೆ ಆಗಿರುತ್ತೆ. ಅಂದ್ರೆ ಮೊದಲ ಪತ್ನಿಯು ಎರಡನೇ ಪತ್ನಿಗೆ ಯಾಕೆ ಸಮಯ ನೀಡುತ್ತಿಲ್ಲ ಅಂತ ಜಗಳವಾಡುತ್ತಾರಂತೆ.
ಇನ್ನು ಅದನಾನ್ ಪ್ರಕಾರ ಮದುವೆ ಅನ್ನೋದು ಆತನಿಗೆ ಅದೃಷ್ಟವಂತೆ. ಮದುವೆ ಮುನ್ನ ಆತನ ಸ್ಥಿತಿ ಚೆನ್ನಾಗಿರಲಿಲ್ಲವಂತೆ. ಆದರೆ ಮೊದಲನೆ ಮದುವೆ ನಂತರ ಆತನ ಸ್ಥಿತಿ ಉತ್ತಮವಾಯಿತು. ಎರಡನೇ ಹಾಗು ಮೂರನೆ ಮದುವೆಯ ನಂತರ ಆತನ ಬದುಕು ಹಾಗು ಸ್ಥಿತಿಗತಿ ಉತ್ತಮವಾಯಿತು ಅಂತಾನೆ ಈ ಭೂಪ.
ಅದನಾನ್ ಗೆ ಈಗಾಗಲೇ ಮಕ್ಕಳು ಇದ್ದಾರೆ. ಶುಂಬಾಲಳಲ್ಲಿ ಮೂವರು ಹಾಗು ಶಬಾನಗೆ ಇಬ್ಬರು ಮಕ್ಕಳಿದ್ದಾರೆ. ಇನ್ನು ಇತನ ತಿಂಗಳ ಖರ್ಚು ಎಷ್ಟು ಅಂದ್ರೆ ಒಂದರಿಂದ ಒಂದೂವರೆ ಲಕ್ಷ ಬೇಕಾಗುತ್ತಂತೆ. ಇಷ್ಟಾದ್ರೂ ಆತನ ನಾಲ್ಕನೆ ಮದುವೆ ಮದುವೆಗೆ ಸಿದ್ದವಾಗಿದ್ದಾನೆ .
ಇನ್ನು ನಾಲ್ಕನೇ ಮದುವೆಯ ಬಗ್ಗೆ ಆತನನ್ನು ಕೇಳಿದ್ರೆ ತನ್ನ ಮೂವರು ಪತ್ನಿಯರಂತೆ ಆಕೆಯೂ ಹೊಂದಿಕೊಂಡು ಹೋಗಬೇಕು. ಈಗಾಗಲೇ ಹಲವು ಸಂಬಂಧಗಳು ಕೇಳೊಕೊಂಡು ಬಂದಿದೆ. ಮೂವರು ಪತ್ನಿಯರ ಹೆಸರು ಎಸ್ ಅಕ್ಷರದಿಂದ ಶುರುವಾಗುದರಿಂದ ನಾಲ್ಕನೇ ಪತ್ನಿಯ ಹೆಸರು ಕೂಡಾ ಎಸ್ ನಿಂದಲೇ ಶುರವಾಗಬೇಕಂತೆ.
ಇದೆಲ್ಲಾ ನೋಡುತ್ತಿದ್ರೆ ನಮಗಾದ್ರೂ ಇಂತಹ ಹೆಂಡತಿಯರು ಸಿಗಬಾರದಾ ಆಂತ ಕೆಲವರಾದ್ರೂ ಅಂದುಕೊಳ್ಳುತ್ತಿರಬಹುದು. ಅಂತಹ ಆಸೆ ಇದ್ರೆ ನೀವು ಪಾಕಿಸ್ತಾನಕ್ಕೆ ಹೋಗಬೇಕು. ಯಾಕಂದ್ರೆ ಈತ ಇರದೇ ಪಾಕ್ ನಲ್ಲಿ ಇಲ್ಲಿ ಇಂತಹ ಪದ್ದತಿ ಮಾಮೂಲು. ಇದರಲ್ಲೂ ವಿಶೇಷ ಏನಪ್ಪ ಅಂದ್ರೆ ಆತ 22ನೇ ವಯಸ್ಸಿನಲ್ಲಿ ಮದುವೆಯಾಗಿರೋದು.