iPhone 13 Pro Max : ಕೋವಿಡ್ ಸಾಂಕ್ರಾಮಿಕದ ಬಳಿಕ ಆನ್ಲೈನ್ ಮಾರುಕಟ್ಟೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಂಪರ್ಕವನ್ನು ತಡೆಯುವ ಸಲುವಾಗಿ ಅನೇಕ ಮಂದಿ ದುಬಾರಿ ವಸ್ತುಗಳನ್ನೂ ಆನ್ಲೈನ್ ಮಾರುಕಟ್ಟೆಗಳಲ್ಲಿಯೇ ಖರೀದಿ ಮಾಡಿಬಿಡ್ತಾರೆ. ಆದರೆ ಬ್ರಿಟನ್ನಲ್ಲಿ ನಡೆದ ಘಟನೆಯೊಂದನ್ನು ನೋಡಿದರೆ ನೀವು ದುಬಾರಿ ವಸ್ತುಗಳನ್ನು ಆನ್ಲೈನ್ಗಳಲ್ಲಿ ಖರೀದಿ ಮಾಡಲು ನೂರು ಬಾರಿ ಯೋಚಿಸೋದಂತೂ ಗ್ಯಾರಂಟಿ
ಆನ್ಲೈನ್ನಲ್ಲಿ ಏನಾದರೂ ಆರ್ಡರ್ ಮಾಡಿ ಅದು ಯಾವಾಗ ನಮ್ಮ ಕೈ ಸೇರುತ್ತೆ ಅಂತಾ ಕಾಯೋದ್ರಲ್ಲಿ ಇರುವ ಸಂತೋಷವೇ ಬೇರೆ. ಅದೇ ರೀತಿ ಆನ್ಲೈನ್ ವೆಬ್ಸೈಟ್ನಲ್ಲಿ ಐಫೋನ್ 13 ಪ್ರೋ ಮ್ಯಾಕ್ಸ್ ಬುಕ್ ಮಾಡಿ ಕಾತುರದಿಂದ ಕಾಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಭ್ರಮ ನಿರಸನವಾಗಿದೆ. ತಿಂಗಳುಗಳ ಹಿಂದೆಯೇ ಆ್ಯಪಲ್ನ ಅಧಿಕೃತ ವೆಬ್ಸೈಟ್ನಲ್ಲಿ ಡೇನಿಯಲ್ ಕ್ಯಾರೋಲ್ ಎಂಬವರು ಐಫೋನ್ನ್ನು ಬುಕ್ ಮಾಡಿದ್ದರು. ಇದನ್ನು ಡಿಹೆಚ್ಎಲ್ ನೆಟ್ವರ್ಕ್ ಕೊರಿಯರ್ ಮಾಡಬೇಕಿತ್ತು. ಆದರೆ ನಿಗದಿತ ಸಮಯಕ್ಕಿಂತ ಎರಡು ವಾರಗಳು ತಡವಾಗಿ ಡೆಲಿವರಿ ಮಾಡಲಾಗಿದೆ. ಕ್ರಿಸ್ಮಸ್ ಸಂದರ್ಭದಲ್ಲಿಯೇ ಐ ಫೋನ್ 13 ಪ್ರೋ ಮ್ಯಾಕ್ಸ್ ಗಿಫ್ಟ್ ಬಂದಿದ್ದು ಕಂಡು ಡೇನಿಯಲ್ ಕ್ಯಾರೋಲ್ ಕೂಡ ಸಖತ್ ಖುಷ್ ಆಗಿದ್ದರು.
ಆದರೆ ಈ ಖುಷಿ ಪಾರ್ಸೆಲ್ ಒಡೆದು ನೋಡಿದ ಬಳಿಕ ಇರಲಿಲ್ಲ ಏಕೆಂದರೆ. ಪಾರ್ಸೆಲ್ನಲ್ಲಿ ಡೇನಿಯಲ್ಗೆ ಐಫೋನ್ 13 ಪ್ರೋ ಮ್ಯಾಕ್ಸ್ ಬದಲಾಗಿ ಎರಡು ಕ್ಯಾಡ್ಬರಿ ಓರಿಯೋ ಚಾಕಲೇಟ್ಗಳು ಹಾಗೂ ಟಾಯ್ಲೆಟ್ ಟಿಶ್ಯೂ ಪೇಪರ್ಗಳನ್ನು ಇಡಲಾಗಿತ್ತು. ಇದನ್ನು ನೋಡಿದ ಡೇನಿಯಲ್ ಹೌಹಾರಿದ್ದಾರೆ. ಸ್ವತಃ ಲಾಜಿಸ್ಟಿಕ್ ಕಂಪನಿಯಲ್ಲೇ ಕೆಲಸ ಮಾಡುವ ಡೇನಿಯಲ್ ಇದು ಕೋರಿಯರ್ ಸಿಬ್ಬಂದಿಯ ಕಳ್ಳಾಟ ಇರಬಹುದು ಎಂದು ಶಂಕಿಸಿದ್ದಾರೆ. ಮಾತ್ರವಲ್ಲದೇ ಈ ಸಂಬಂಧ ಟ್ವೀಟ್ ಕೂಡ ಮಾಡಿರುವ ಡೇನಿಯಲ್ ತಮಗೆ ಐ ಫೋನ್ ಬದಲು ಕ್ಯಾಡ್ಬರಿ ಓರಿಯೋ ಚಾಕಲೇಟ್ ಹಾಗೂ ಟಿಶ್ಯೂ ಪೇಪರ್ ಬಂದಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಡೇನಿಯಲ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಡಿಹೆಚ್ಎಲ್ ತಪ್ಪಿಸ್ಥರನ್ನು ಶೀಘ್ರದಲ್ಲೇ ಪತ್ತೆ ಹೆಚ್ಚಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ . ಅಲ್ಲದೇ ಡೇನಿಯಲ್ ಹೊಸ ಐಫೋನ್ ಬರುವ ಬಗ್ಗೆ ವ್ಯವಸ್ಥೆ ಮಾಡಿದಾಗಿಯೂ ಅಭಯ ನೀಡಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಡೇನಿಯಲ್ ನಾನು ಕೂಡ ಲಾಜಿಸ್ಟಿಕ್ ಕಂಪನಿಯಲ್ಲಿಯೇ ಕೆಲಸ ಮಾಡುತ್ತೇನೆ. ನನಗೆ ಡಿಹೆಚ್ಎಲ್ ಕೋರಿಯರ್ ಸರ್ವೀಸ್ ಬಗ್ಗೆ ಮಾಹಿತಿ ಇದೆ. ಆದರೆ ನನ್ನ ಆರ್ಡರ್ ಟ್ರ್ಯಾಕ್ ಆಗದೇ ಇದ್ದ ವೇಳೆಯಲ್ಲಿ ನನಗೆ ಶಂಕೆ ಮೂಡಿತ್ತು. ಆದರೆ ಇದೀಗ ಎಲ್ಲವೂ ಸ್ಪಷ್ಟವಾಗಿದೆ ಎಂದು ಹೇಳಿದರು.
ಇದನ್ನು ಓದಿ : China Population Loan : ದಂಪತಿಗೆ ಮಕ್ಕಳಾದರೆ 23.56 ಲಕ್ಷ ರೂಪಾಯಿ ಸಾಲ; ಚೀನಾದ ಈ ಯೋಜನೆಯ ಫಲಾನುಭವ ಪಡೆಯಲು ಏನು ಮಾಡಬೇಕು?
ಇದನ್ನೂ ಓದಿ : Rare Pink Fish : ಸಮುದ್ರದಾಳದಲ್ಲಿ ಪತ್ತೆಯಾಯ್ತು ನಡೆದಾಡುವ ಅಪರೂಪದ ಮೀನು
iPhone 13 Pro Max : Man orders phone worth Rs 1 lakh, finds chocolate bars wrapped in toilet paper inside package