Condoms From Swiggy :ಈಗೆಲ್ಲಾ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡೋದು ಕಾಮನ್ ಆಗಿಬಿಟ್ಟಿದೆ. ಅದೇ ರೀತಿ ಕೊಯಮತ್ತೂರಿನ ವ್ಯಕ್ತಿಯೊಬ್ಬರು ತಮ್ಮ ಮಕ್ಕಳಿಗೆ ಸ್ವಿಗ್ಗಿ ಆ್ಯಪ್ನಲ್ಲಿ ಐಸ್ಕ್ರೀಮ್ ಹಾಗೂ ಚಿಪ್ಸ್ಗಳನ್ನು ಆರ್ಡರ್ ಮಾಡಿದ್ದರು. ಆದರೆ ಸ್ವಿಗ್ಗಿ ಡೆಲಿವರಿ ಪಡೆದ ಬಳಿಕ ಶಾಕ್ ಆಗಿದ್ದಾರೆ. ಏಕೆಂದರೆ ಐಸ್ಕ್ರೀಂ ಹಾಗೂ ಚಿಪ್ಸ್ಗಳ ಬದಲಾಗಿ ಅವರಿಗೆ ಡೆಲಿವರಿ ಬಾಯ್ ಕಾಂಡೋಮ್ಗಳನ್ನು ನೀಡಿದ್ದಾರೆ. ಈ ಸಂಬಂಧ ಮಾಡಲಾದ ಒರಿಜಿನಲ್ ಟ್ವೀಟ್ ಡಿಲೀಟ್ ಆಗಿದೆ. ಆದರೆ ಇದರ ಸ್ಕ್ರೀನ್ಶಾಟ್ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ.
ಡೆಲಿವರಿ ರೂಪದಲ್ಲಿ ಕಾಂಡೋಮ್ ಬದಲು ಐಸ್ಕ್ರೀಂ ಹಾಗೂ ಚಿಪ್ಸ್ ಪಡೆದವನ ಕತೆ ಏನಾಗಿರಬಹುದು ಎಂಬುದೇ ನನಗೆ ಯೋಚನೆಯಾಗಿದೆ ಎಂದು ಟ್ವೀಟ್ ಮಡಲಾಗಿದೆ. ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕಾಂಡೋಮ್ ಬದಲು ಆತ ಕೂತು ಚಿಪ್ಸ್ ಸೇವಿಸುತ್ತಿರಬಹುದು ಎಂದು ನೆಟ್ಟಿಗರು ಕೂಡ ನಕ್ಕಿದ್ದಾರೆ.
My thoughts are with the other guy who got ice cream & chips! pic.twitter.com/UnNucBFqQG
— IIIIIIIIIll (@_NairFYI) August 28, 2022
ಫುಡ್ ಡೆಲಿವರಿ ಆ್ಯಪ್ಗಳಲ್ಲಿ ಈ ರೀತಿ ಡೆಲಿವರಿ ಪ್ರಾಡಕ್ಟ್ಗಳು ಉಲ್ಟಾ ಪಲ್ಟಾ ಆದ ಅನೇಕ ಪ್ರಕರಣಗಳನ್ನು ನಾವು ಕಾಣುತ್ತಲೇ ಇದ್ದೇವೆ. ಆದರೆ ಈ ಬಾರಿ ಮಾತ್ರ ಆಹಾರದ ಜಾಗದಲ್ಲಿ ಕಾಂಡೋಮ್ಗಳು ಬಂದಿದ್ದು ಮಾತ್ರ ನೆಟ್ಟಿಗರನ್ನು ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡಿದೆ.
ಕೆಲವು ದಿನಗಳ ಹಿಂದೆ ಜೊಮ್ಯಾಟೋದಲ್ಲಿ ಕೇಕ್ ಆರ್ಡರ್ ಮಾಡಿದ್ದ ಮಹಿಳೆಯೊಬ್ಬರು ಇದೇ ರೀತಿ ಪರಿಸ್ಥಿತಿಯನ್ನು ಎದುರಿಸಿದ್ದರು. ವೈಷ್ಣವಿ ಮೋಂಡ್ಕರ್ ಕೇಕ್ ಆರ್ಡರ್ ಮಾಡಿದ್ದ ಬೆನ್ನಲ್ಲೇ ಡೆಲಿವರಿ ಬಾಯ್ಗೆ ಸೂಚನೆಯೊಂದನ್ನು ನೀಡಿದ್ದರು. ಇದರಲ್ಲಿ ಅವರು 500 ರೂಪಾಯಿ ಚೇಂಜ್ ತನ್ನಿ ಎಂದು ಬರೆದಿದ್ದರು. ವಿಚಿತ್ರ ಅಂದರೆ ಕೇಕ್ ಮೇಲೆ 500 ರೂಪಾಯಿ ಚೇಂಜ್ ತನ್ನಿ ಎಂದು ಬರೆದು ಡೆಲಿವರಿ ಬಾಯ್ ಫುಡ್ ಡೆಲಿವರಿ ಮಾಡಿದ್ದನು.
ಇದನ್ನು ಓದಿ : Coffee Nadu Chandu: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮೂಲಕ ಶಿವಣ್ಣರನ್ನು ಭೇಟಿಯಾದ ಕಾಫಿನಾಡು ಚಂದು : ಅನುಶ್ರೀಯಿಂದ ವಿಶೇಷ ಗಿಫ್ಟ್
ಇದನ್ನೂ ಓದಿ :drone training to the police : ದೇಶದಲ್ಲೇ ಮೊದಲ ಬಾರಿಗೆ ಪೊಲೀಸರಿಗೆ ಡ್ರೋನ್ ತರಬೇತಿ ನೀಡಿದೆ ಕರ್ನಾಟಕ
Man Orders Ice-Cream, Gets Condoms From Swiggy; Twitter Wonders What ‘Çondom Guy’ Got