ಸರ್ಜಾ ಕುಟುಂಬದ ಕಣ್ಣೀರಿಗೆ ಉತ್ತರವಾಗಿ, ಚಿರಂಜೀವಿ ಸರ್ಜಾನ ಉತ್ತರಾಧಿಕಾರಿಯಾಗಿ ಜ್ಯೂನಿಯರ್ ಚಿರು ಧರೆಗೆ ಬಂದಾಗಿದೆ. ಗುರುವಾರ, ನವರಾತ್ರಿ ಪುಣ್ಯಕಾಲದಲ್ಲಿ ಬಂದ ಈ ಮಗು ಅಪರೂಪದ ಯೋಗಗಳನ್ನು ಹೊಂದಿದೆ ಎಂದು ಜ್ಯೋತಿಷ್ಯಿಗಳು ಭವಿಷ್ಯ ನುಡಿದಿದ್ದಾರೆ.

ಅಕ್ಟೋಬರ್ 22 ಚಿರು ಮತ್ತು ಮೇಘನಾ ವಿವಾಹ ನಿಶ್ಚಿತಾರ್ಥವಾದ ದಿನ. ಅದೇ ದಿನ ನಾರ್ಮಲ್ ಡೆಲಿವರಿ ಮೂಲಕ ಜ್ಯೂನಿಯರ್ ಚಿರು ಜನನವಾಗಿದೆ. ಗುರುವಾರ ಮಧ್ಯಾಹ್ನ 11 ಗಂಟೆ 7 ನಿಮಿಷಕ್ಕೆ ಮಗು ಜನಿಸಿದ್ದು, ಇದೊಂದು ಅಪೂರ್ವ ಗಳಿಗೆ ಎಂದು ಜ್ಯೋತಿಷ್ಯಿಗಳು ಹೇಳಿದ್ದಾರೆ.

ಖ್ಯಾತ ಜ್ಯೋತಿಷಿ ಡಾ.ಬಸವರಾಜ ಗುರೂಜಿ ಈ ಗಳಿಗೆ ಯನ್ನು ವಿಶ್ಲೇಷಿಸಿದ್ದು, ಚಿರು ಸರ್ಜಾ ಮಗುವಿನ ಜಾತಕದಲ್ಲಿ ಅಮೋಘವಾದ ಯೋಗಗಳಿವೆ. ಗಜಕೇಸರಿ ಯೋಗಾ, ಬುಧಾದಿತ್ಯ ಯೋಗ, ಶಶಯೋಗ, ಹಂಸಯೋಗವಿದೆ ಎಂದಿದ್ದಾರೆ. ಹಾಗೇಯೆ ಜನನ ಗಳಿಗೆಯ ಮೇಲೆ ಮಂಗಳ ದೋಷವಿದ್ದು ಅದನ್ನು ಪರಿಹರಿಸಿಕೊಳ್ಳಬೇಕು ಎಂದಿದ್ದಾರೆ.

ಇನ್ನು ಚಿರು ಸರ್ಜಾ ಮಗು ಗಜಕೇಸರಿ ಯೋಗ ಹೊಂದಿರೋದಿಕ್ಕೆ ಸಂಭ್ರಮ ವ್ಯಕ್ತಪಡಿಸಿರೋ ಬಹುಭಾಷಾ ನಟ ಅರ್ಜುನ್ ಸರ್ಜಾ, 36 ವರ್ಷದ ಹಿಂದೆ ಚಿರು ಜನಿಸಿದ ಸುದ್ದಿ ಕೇಳಿ ಬೆಂಗಳೂರಿಗೆ ಓಡೋಡಿ ಬಂದಿದ್ದೆ. ಈಗ ಚಿರು ಮಗ ಜನಿಸಿರೋದನ್ನು ನೋಡಲು ಬಂದಿದ್ದೇನೆ.

ಚಿರು ಬದುಕಿದ್ದರೇ ತುಂಬ ಖುಷಿ ಪಡುತ್ತಿದ್ದ. ಅವನಿಲ್ಲದ ನೋವು ಕಾಡುತ್ತಿದೆ. ಆದರೂ ಆತ ಎಲ್ಲೋ ನಿಂತು ಇದೆಲ್ಲವನ್ನು ನೋಡ್ತಿದ್ದಾನೆ ಅನ್ನೋ ನಂಬಿಕೆ ಇದೆ. 4 ತಿಂಗಳ ನಂತರ ನನ್ನ ತಾಯಿ ಸೇರಿದಂತೆ ಕುಟುಂಬಸ್ಥರ ಮುಖದಲ್ಲಿ ನಗು ನೋಡ್ತಿದ್ದೇನೆ ಎಂದಿದ್ದಾರೆ.

ಇನ್ನು ಜ್ಯೂನಿಯರ್ ಚಿರು ಆಗಮನವನ್ನು ಸ್ವಾಗತಿಸಿರೋ ಅರ್ಜುನ್ ಸರ್ಜಾ ತಾಯಿ ಹಾಗೂ ಚಿರು ಅಜ್ಜಿ, ಚಿರು ಹೋಗಿ ನಮಗಾಗಿ ಅವನ ಮಗನನ್ನು ಕಳುಹಿಸಿಕೊಟ್ಟಿದ್ದಾನೆ ಎಂದಿದ್ದಾರೆ.
