ಬುಧವಾರ, ಏಪ್ರಿಲ್ 30, 2025
Homeಮಿಸ್ ಮಾಡಬೇಡಿಚೌತಿಗೆ ಅಸ್ಥಿತ್ವಕ್ಕೆ ಬರಲಿದೆ ಹೊಸ ರಿಸರ್ವ್ ಬ್ಯಾಂಕ್ ! ಸ್ವಾಮಿ ನಿತ್ಯಾನಂದನ ಹೊಸ ಕರೆನ್ಸಿ ಹೇಗಿರಲಿದೆ...

ಚೌತಿಗೆ ಅಸ್ಥಿತ್ವಕ್ಕೆ ಬರಲಿದೆ ಹೊಸ ರಿಸರ್ವ್ ಬ್ಯಾಂಕ್ ! ಸ್ವಾಮಿ ನಿತ್ಯಾನಂದನ ಹೊಸ ಕರೆನ್ಸಿ ಹೇಗಿರಲಿದೆ ಗೊತ್ತಾ ?

- Advertisement -

ನವದೆಹಲಿ : ಬಿಡದಿಯಿಂದ ಕಾಲ್ಕಿತ್ತಿರುವ ಬಿಡದಿ ಸ್ವಾಮಿ ನಿತ್ಯಾನಂದ ಕೈಲಾಸ ದೇಶದ ಸ್ಥಾಪನೆ ಮಾಡಿರುವುದು ಹಳೆಯ ವಿಚಾರ. ಆದ್ರೀಗ ನಿತ್ಯಾನಂದ ಹೊಸ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಮುಂದಾಗಿದ್ದಾರೆ. ಗಣೇಶ ಚತುರ್ಥಿಯ ದಿನದಂದೇ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ್ ಜಾರಿಗೆ ಬರಲಿದೆ ಎಂದು ಘೋಷಣೆ ಮಾಡಿದ್ದಾನೆ.

ಲ್ಯಾಟಿನ್ ಅಮೇರಿಕಾದ ಲಿಕ್ವಿಡಾರ್ ನಲ್ಲಿ ದ್ವೀಪವೊಂದನ್ನು ಖರೀದಿಸಿರುವ ಬಿಡದಿ ಸ್ವಾಮಿ ನಿತ್ಯಾನಂದ ಕೈಲಾಸ ದೇಶವನ್ನು ಸ್ಥಾಪನೆ ಮಾಡಿದ್ದಾನೆ. ತನ್ನ ದೇಶದಲ್ಲಿ ಪ್ರತ್ಯೇಕ ಪಾಸ್ ಪೋರ್ಟ್, ಪ್ರತ್ಯೇಕ ಲಾಂಚನ ಹಾಗೂ ಪ್ರತ್ಯೇಕ ಧ್ವಜವನ್ನು ಸಿದ್ದಪಡಿಸಿದ್ದಾನೆ. ಅಲ್ಲದೇ ಕೈಲಾಸ ದೇಶಕ್ಕೆ ಬರುವವರಿಗೆ ಮುಕ್ತ ಅವಕಾಶ ನೀಡುವುದಾಗಿಯೂ ಹೇಳಿಕೊಂಡಿದ್ದ.

ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಬಿಡದಿ ಸ್ವಾಮಿ ನಿತ್ಯಾನಂದ ತನ್ನ ದೇಶಕ್ಕಾಗಿ ಪ್ರತ್ಯೇಕವಾಗಿರುವ ರಿಸರ್ವ್ ಬ್ಯಾಂಕ್ ಸ್ಥಾಪನೆ ಮಾಡಲು ಮುಂದಾಗಿದ್ದಾನೆ. ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಸ್ಥಾಪನೆ ಮಾಡಿರುವ ನಿತ್ಯಾನಂದ ಅಗಸ್ಟ್ 22ರ ಗಣೇಶ ಚತುರ್ಥಿಯ ದಿನದಂದು ಪ್ರತ್ಯೇಕವಾಗಿರುವ ಕರೆನ್ಸಿ ಬಿಡುಗಡೆ ಮಾಡುವುದಾಗಿ ಘೋಷಣೆಯನ್ನು ಮಾಡಿದ್ದಾನೆ.

ರಿಸರ್ವ್ ಬ್ಯಾಂಕ್ ಆಫ್ ಕೈಲಾಸ್ ಬಗ್ಗೆ ನಿತ್ಯಾನಂದ ಅಧಿಕೃತವಾಗಿಯೇ ಮಾತನಾಡಿದ್ದು, ಬ್ಯಾಂಕ್ ಹೇಗೆಲ್ಲಾ ವ್ಯವಹರಿಸುತ್ತೆ ಅನ್ನುವುದನ್ನು ತಿಳಿಸಿದ್ದಾನೆ. ವ್ಯಾಟಿಕನ್ ಬ್ಯಾಂಕ್ ಮಾದರಿಯಲ್ಲಿಯೇ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ್ ಕಾರ್ಯನಿರ್ವಹಿಸಲಿದೆ. ಬ್ಯಾಂಕ್ ವಿಶ್ವದ ನಾನಾ ರಾಷ್ಟ್ರಗಳ ಜೊತೆಗೆ ವ್ಯವಹಾರವನ್ನು ಮಾಡಲಿದೆ. ಸ್ಥಳೀಯವಾಗಿ ವ್ಯವಹಾರ ನಡೆಸುವುದರ ಜೊತೆಗೆ ಅಕ್ಕಪಕ್ಕದ ರಾಷ್ಟ್ರಗಳ ಜೊತೆಗೆ ವ್ಯವಹಾರ ನಡೆಸುವ ಸಲುವಾಗಿಯೇ ಈ ಬ್ಯಾಂಕ್ ಆರಂಭಿಸಲಾಗುತ್ತಿದ್ದು, ವಿಶ್ವದ ನಾನಾ ಭಾಗಗಳಿಂದಲೂ ತಮಗೆ ದೇಣಿಗೆ ನೀಡುವವರಿಗೆ ಅನುಕೂಲ ಕಲ್ಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾನೆ.

ರಿಸರ್ವ್ ಬ್ಯಾಂಕ್ ಆಫ್ ಕೈಲಾಸ್ ಕಾನೂನು ಬದ್ದವಾಗಿಯೇ ವ್ಯವಹಾರವನ್ನು ನಡೆಸಲಿದೆ. ಬ್ಯಾಂಕ್ ವ್ಯವಹಾರದ ಕುರಿತು ಈಗಾಗಲೇ ನಾನಾ ದೇಶಗಳ ಜೊತೆಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಕರೆನ್ಸಿ ವಿನಿಮಯದ ಮೇಲೆ ರಿಸರ್ವ್ ಬ್ಯಾಂಕ್ ಹಿಡಿತ ಸಾಧಿಸಲಿದ್ದು, ಕರೆನ್ಸಿಯ ಡಿಸೈನಿಂಗ್, ಆರ್ಥಿಕ ತಂತ್ರಗಾರಿಕೆಯನ್ನು ಸಿದ್ದಪಡಿಸಲಾಗಿದೆ.

ದೇಶದಲ್ಲಿ ಆಂತರಿಕವಾಗಿ ಹಾಗೂ ಬಾಹ್ಯ ದೇಶಗಳಲ್ಲಿನ ಚಲಾವಣೆಯ ಬಗ್ಗೆಯೂ ಯೋಜನೆ ರೂಪಿಸಲಾಗಿದೆ. ದೇಶದ ಆರ್ಥಿಕ ನೀತಿಯ ಕುರಿಉ ಈಗಾಗಲೇ ಸುಮಾರು 300 ಪುಟಗಳ ದಾಖಲೆಯನ್ನು ಸಿದ್ದಪಡಿಸಲಾಗಿದೆ. ಗಣೇಶ ಚತುರ್ಥಿಯ ದಿನದಂದ ಕರೆನ್ಸಿಯನ್ನು ಬಿಡುಗಡೆ ಮಾಡುವುದರ ಜೊತೆಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುವುದಾಗಿ ಘೋಷಣೆ ಮಾಡಿದ್ದಾನೆ ನಿತ್ಯಾನಂದ.

ಕರ್ನಾಟಕದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕೈಲಾಸಕ್ಕೆ ಹಾರಿರುವ ಬಿದಡಿ ಸ್ವಾಮಿ ನಿತ್ಯಾನಂದ ಅದ್ಯಾವ ರೂಪದಲ್ಲಿ ಮತ್ತೆ ಎಂಟ್ರಿಕೊಡ್ತಾನೋ ಆ ದೇವರೇ ಬಲ್ಲಾ. ಒಟ್ಟಿನ್ಲಲಿ ನಿತ್ಯಾನಂದನ ಹೊಸ ಕರೆನ್ಸಿ ಆರ್ಥಿಕ ವ್ಯವಸ್ಥೆಯನ್ನೇ ಬದಲಾಯಿಸಿ ಬಿಡುತ್ತಾ ? ಹೊಸ ನೋಟಿನಿಂದ ಆಗುವ ಪರಿಣಾಮಗಳೇನು ? ಅನ್ನುವುದು ಕುತೂಹಲ ಮೂಡಿಸಿರುವುದಂತೂ ಸುಳ್ಳಲ್ಲ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular