ಮದುವೆ ಅಂದಮೇಲೆ ಗಂಡಿನ ಮನೆಯವರು ಹೆಣ್ಣಿನ ಮನೆಯವರ ಎದುರು ನೂರಾರು ಬೇಡಿಕೆಗಳನ್ನು ಇಡೋದು ಕಾಮನ್. ಆದರೆ ಜಾರ್ಖಂಡ್ನಲ್ಲಿ ವರನೊಬ್ಬ ಹನಿಮೂನ್ಗೆ ತೆರಳಿದ್ದ ವೇಳೆ ಪತ್ನಿಯ ಎದುರು ಇಟ್ಟ ಬೇಡಿಕೆಯನ್ನು (Bizarre Demand On Honeymoon) ಕೇಳಿ ನವವಿವಾಹಿತೆ ಶಾಕ್ ಆಗಿದ್ದಾಳೆ. ಅಂದಿನಿಂದ ಮಹಿಳೆ ತನಗೆ ನ್ಯಾಯ ಬೇಕೆಂದು ಪೊಲೀಸ್ ಠಾಣೆಗೂ ಮನೆಗೂ ಅಲೆಯುವಂತಾಗಿದೆ. ಎಂಬಿಎ ಪದವಿಯನ್ನು ಪಡೆದು ಬ್ಯಾಂಕ್ ಅಧಿಕಾರಿಯಾಗಿದ್ದ ಪತಿಯು ತನ್ನ ಪತ್ನಿಯ ಬಳಿ ನನ್ನ ಸಂಗಾತಿಯಾಗಿ ಬಾಳಬೇಕು ಅಂದರೆ ನೀನು ಐಎಎಸ್ ಅಧಿಕಾರಿ ಆಗೋದು ಕಡ್ಡಾಯವಾಗಿದೆ (Become an IAS officer) ಎಂದು ಡಿಮ್ಯಾಂಡ್ ಇಟ್ಟಿದ್ದಾನೆ.ಇದಾದ ಬಳಿಕ ಆಕೆಯೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾನೆ. ಇದರಿಂದ ದಿಗ್ಭ್ರಮೆಗೆ ಒಳಗಾದ ಪತ್ನಿಯು ಪೂರ್ವ ಸಿಂಗ್ಭೂಮ್ನ ಪೋಟ್ಕಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ಪೋಟ್ಕಾ ಗ್ರಾಮದ ನಿವಾಸಿಯಾದ ಪಲ್ಲವಿ ಜಮಶೇಡ್ಪುರದ ಜೈಮಾಲ್ ಮಂಡಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ದಿನದ ರಾತ್ರಿಯೇ ಅವರು ಹನಿಮೂನ್ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಜೈಮಾಲ್ ತನ್ನ ಪತ್ನಿ ಪಲ್ಲವಿಯ ಎದುರು ನೀನು ಐಎಎಸ್ ಅಧಿಕಾರಿಯಾದಲ್ಲಿ ಮಾತ್ರವೇ ಈ ವೈವಾಹಿಕ ಸಂಬಂಧ ಮುಂದುವರಿಯಲಿದೆ. ಅದರಲ್ಲೂ ನೀನು 2 ವರ್ಷದ ಒಳಗಾಗಿ ಐಎಎಸ್ ಅಧಿಕಾರಿಯಾಗಿ ನೇಮಕವಾಗಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾನೆ. ಮೊದಲು ಪಲ್ಲವಿ ಇದನ್ನು ಜೋಕ್ ಎಂದು ಪರಿಗಣಿಸಿದ್ದಾಳೆ. ಆದರೆ ಮಾರನೇ ದಿನ ನನಗೆ ಸಂದರ್ಶನ ಇದೆ ಎಂದು ತೆರಳಿದ ಜೈಮಾಲ್ ಮತ್ತೆ ವಾಪಸ್ಸಾಗಿಲ್ಲ ಎನ್ನಲಾಗಿದೆ.
ಪಲ್ಲವಿಗೆ ಜೈಮಾಲ್ ಒಂದು ದಿನವೂ ಕರೆ ಮಾಡಿಲ್ಲ. ಪಲ್ಲವಿ ಎಷ್ಟೇ ಪ್ರಯತ್ನ ಪಟ್ಟರೂ ಸಹ ಜೈಮಾಲ್ ಸಂಪರ್ಕ ಸಾಧಿಸುವುದು ಸಾಧ್ಯವಾಗಲಿಲ್ಲ. ಕುಟುಂಬದಲ್ಲಿ ತನ್ನ ಪ್ರತಿಷ್ಟೆಯನ್ನು ಕಾಪಾಡಿಕೊಳ್ಳವ ಸಲುವಾಗಿ ಪಲ್ಲವಿ ಈ ವಿಚಾರವನ್ನು ಎಲ್ಲರಿಂದಲೂ ಮುಚ್ಚಿಟ್ಟದ್ದಳು ಎನ್ನಲಾಗಿದೆ. ಆದರೆ ಯಾವಾಗ ಜೈಮಾಲ್ ವಿಚ್ಚೇದನಕ್ಕೆ ಕೋರ್ಟ್ ಮೆಟ್ಟಿಲೇರಿದನೋ ಆಗ ಪಲ್ಲವಿಗೆ ಆಘಾತವಾಗಿದೆ.
ಈ ವೇಳೆಯಲ್ಲಿ ಜೈ ಮಾಲ್ ಕುಟುಂಬಸ್ಥರು ಪಲ್ಲವಿಗೆ ಮೇಲೆ ದೌರ್ಜನ್ಯವನ್ನೂ ನಡೆಸಿದ್ದಾರೆ. ಆದರೆ ಇದರಿಂದ ತನ್ನ ತವರು ಮನೆಗೆ ತೊಂದರೆಯಾಗಬಾರದೆಂದು ಪಲ್ಲವಿ ಈ ಎಲ್ಲಾ ವಿಚಾರಗಳನ್ನು ಪೋಷಕರ ಬಳಿಯೂ ಹೇಳಿಕೊಂಡಿರಲಿಲ್ಲ. ಇದಾದ ಬಳಿಕ ಪಲ್ಲವಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ದಾಂಪತ್ಯ ಜೀವನಕ್ಕೆ ಕಾನೂನಿನ ಮೂಲಕ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾಳೆ.
‘Become an IAS officer’: Husband leaves wife after making bizarre demand on honeymoon