condom : ಕೊರೊನಾ ವೈರಸ್ ಸಾಂಕ್ರಾಮಿಕ ಆರಂಭವಾದ ಬಳಿಕ ಬಹುತೇಕ ಎಲ್ಲಾ ಉದ್ಯಮಗಳು ನೆಲ ಕಚ್ಚಿವೆ ಎಂದು ಹೇಳಿದರೆ ತಪ್ಪಾಗಲಾರದು, ಹೋಟೆಲ್ ರೆಸ್ಟಾರೆಂಟ್ ಉದ್ಯಮ, ಟ್ಯಾಕ್ಸಿ ಸರ್ವೀಸ್, ಪ್ರವಾಸೋದ್ಯಮ ಹೀಗೆ ಎಲ್ಲಾ ಉದ್ಯಮಗಳ ಮೇಲೂ ಕೊರೊನಾ ಕರಿನೆರಳ ಛಾಯೆ ಬೀರಿದೆ. ಇವೆಲ್ಲದರ ಜೊತೆಯಲ್ಲಿ ಕಾಂಡೋಮ್ ತಯಾರಕ ಕಂಪನಿಗಳೂ ಸಹ ಈ ಅವಧಿಯಲ್ಲಿ ಭಾರೀ ನಷ್ಟವನ್ನು ಅನುಭವಿಸಿವೆ ಎಂದು ತಿಳಿದುಬಂದಿದೆ.
ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಕಾಂಡೋಮ್ ಬಳಸಿ ಸೆಕ್ಸ್ ಮಾಡುವವರ ಸಂಖ್ಯೆಯೇ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಕೊರೊನಾ ಅವಧಿಯಲ್ಲಿ ಉಳಿದ ಎಲ್ಲಾ ಕ್ಷೇತ್ರಗಳಂತೆ ಕಾಂಡೋಮ್ ತಯಾರಕ ಕ್ಷೇತ್ರಕ್ಕೂ ಬಲವಾದ ಪೆಟ್ಟು ಬಿದ್ದಿದೆ. ಜಗತ್ತಿನ ಅತಿದೊಡ್ಡ ಕಾಂಡೋಮ್ ತಯಾರಕ ಕಂಪನಿ ಕೂಡ ಸದ್ಯ ನಷ್ಟದಲ್ಲಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಬಹುತೇಕರು ಮನೆಯಲ್ಲಿಯೇ ಇದ್ದಾರೆ. ಹೀಗಾಗಿ ಇವರಲ್ಲಿ ಹೆಚ್ಚಿನ ಮಂದಿ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಗರ್ಭನಿರೋಧಕವನ್ನು ಬಳಕೆ ಮಾಡಲು ಇಚ್ಛೆ ಪಡುತ್ತಿಲ್ಲ. ಇದೇ ಕಾರಣಕ್ಕೆ ಕಳೆದ ಎರಡು ವರ್ಷಗಳಲ್ಲಿ ಕಾಂಡೋಮ್ ಮಾರಾಟದ ಪ್ರಮಾಣ 40 ಪ್ರತಿಶತದಷ್ಟು ಕುಸಿತ ಕಂಡಿದೆ.
ವಿಶ್ವದ ಅತೀದೊಡ್ಡ ಕಾಂಡೋಮ್ ತಯಾರಕ ಕಂಪನಿ ಕರೆಕ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೊಹ್ ಮಿಯಾ ಕೈಟ್, ಸಾಂಕ್ರಾಮಿಕದ ಸಂದರ್ಭದಲ್ಲಿ ಲೈಂಗಿಕ ಸ್ವಾಸ್ಥ್ಯ ಕೇಂದ್ರಗಳಂತಹ ಅನಿವಾರ್ಯವಲ್ಲದ ಚಿಕಿತ್ಸಾಲಯಗಳನ್ನು ಬಂದ್ ಮಾಡಿದ್ದರಿಂದ ಕಾಂಡೋಮ್ ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ ಎಂದು ಹೇಳಿದ್ದಾರೆ. ಮಲೇಷಿಯಾ ಮೂಲದ ಕಂಪನಿಯು ಈಗ ಮೆಡಿಕಲ್ ಗ್ಲೌಸ್ ತಯಾರಿಕೆಗೆ ಮುಂದಾಗಿದೆ ಎನ್ನಲಾಗಿದೆ. ವರ್ಷದ ಮಧ್ಯದಲ್ಲಿ ಥೈಲ್ಯಾಂಡ್ನಲ್ಲಿ ಇದರ ಉತ್ಪಾದನೆಯನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ .
ಇದನ್ನು ಓದಿ : Bombay High Court : ಕೊರೊನಾ ಲಸಿಕೆ ಪಡೆಯದವರಿಗೆ ತಾರತಮ್ಯ ಮಾಡುವಂತಿಲ್ಲ : ಬಾಂಬೆ ಹೈಕೋರ್ಟ್
ಇದನ್ನೂ ಓದಿ : Aadhaar for future Schemes: ಆಧಾರ್ ಮಾಹಿತಿ ಸಂಚಿಕೆಗೆ ಒಪ್ಪಿಗೆ ಪಡೆಯಲು ಮುಂದಾಗಲಿದೆ ಸರ್ಕಾರ
Sales of world’s largest condom maker down by almost 40% in last two years