ಬಾಲಿವುಡ್‌ನ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಹಾಗು ಟ್ವಿಟರ್‌ನ ಹೊಸ ಸಿಇಒ ಪರಾಗ್ ಅಗರ್ವಾಲ್ ಅವರ ನಡುವಿನ ಸಂಬಂಧದ ಕುರಿತು ನೆಟ್ಟಿಗರು ಗಾಸಿಪ್ ಮಾಡುತ್ತಿದ್ದು, ಇವರಿಬ್ಬರ ಕುರಿತು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ. ಆದರೆ, ಇದಕ್ಕೆಲ್ಲ ತೆರೆ ಎಳೆಯುವಂತೆ, ಶ್ರೇಯಾ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಐಐಟಿ ಬಾಂಬೆಯ ಹಳೆ ವಿದ್ಯಾರ್ಥಿ ಪರಾಗ್ ಹಾಗು ಶ್ರೇಯಾ ಹಲವು ವರ್ಷಗಳಿಂದಲೂ ಸ್ನೇಹಿತರಾಗಿದ್ದು, ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲೂ ಸಾಕಷ್ಟು ಹುಡುಕಾಟ ನಡೆದಿದೆ. ಶ್ರೇಯಾ ಅವರ ಒಂದು ಟ್ವೀಟ್‌ನಲ್ಲಿ ಪರಾಗ್ ಅವರನ್ನು ‘ಬಚ್ಪನ್ ಕಾ ದೋಸ್ತ್’ (ಬಾಲ್ಯದ ಸ್ನೇಹಿತ) ಎಂದು ಕರೆದಿದ್ದಾರೆ.
ಈಗ ವೈರಲ್ ಆಗಿರುವ ಪರಾಗ್ ಜೊತೆಗಿನ ತಮ್ಮ ಹಳೆಯ ಟ್ವಿಟರ್ ಸಂಭಾಷಣೆಗೆ ಪ್ರತಿಕ್ರಿಯಿಸಿರುವ ಶ್ರೇಯಾ ಘೋಷಾಲ್ “2010ರಲ್ಲಿ ಭಾರತದಲ್ಲಿ ಮೈಕ್ರೋ ಬ್ಲಾಗಿಂಗ್ ಪ್ರಾರಂಭವಾದಾಗ ನಾವು ಕೇವಲ ಮಕ್ಕಳಾಗಿದ್ದೆವು. ಇನ್ನೂ ಎಷ್ಟು ಹಳೆಯ ಟ್ವೀಟ್‌ಗಳನ್ನು ಹುಡುಕಿ ಶೇರ್ ಮಾಡ್ತಾ ಇದೀರಾ? ಹತ್ತು ವರ್ಷ ಮೊದಲು ನಾವು ಕೇವಲ ಮಕ್ಕಳಾಗಿದ್ದೆವು. ಗೆಳೆಯರೆಂದ ಮೇಲೆ ಪರಸ್ಪರ ಟ್ವೀಟ್ ಮಾಡೋದಿಲ್ವಾ? ಟೈಂ ಪಾಸ್‌ಗೋಸ್ಕರ ಏನೆಲ್ಲ ಮಾಡ್ತೀರಾ” ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮೊದಲು, ಶ್ರೇಯಾ ಟ್ವಿಟರ್‌ನಲ್ಲಿ ಸಾಮಾಜಿಕ ಮಾಧ್ಯಮದ ದೈತ್ಯ ಟ್ವಿಟರ್‌ನ ಸಿಇಒ ಆಗಿದಕ್ಕಾಗಿ ಪರಾಗ್‌ಗೆ ಅಭಿನಂದನಾ ಸಂದೇಶವನ್ನು ಹಂಚಿಕೊಂಡಿದ್ದಾರೆ. “ಅಭಿನಂದನೆಗಳು ಪರಾಗ್, ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ಈ ಶುಭ ಸುದ್ದಿಯನ್ನು ಖುಷಿಯಿಂದ ಆಚರಿಸಿ” ಎಂದು ಬರೆದಿದ್ದಾರೆ ಶ್ರೇಯಾ ಘೋಷಾಲ್.
2015ರಲ್ಲಿ ಪರಾಗ್ ಅಗರ್ವಾಲ್ ಶ್ರೇಯಾ ಜೊತೆಗಿನ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದು, ಇದು ಶ್ರೇಯಾ ಹಾಗು ಶಿಲಾದಿತ್ಯ ಮುಖ್ಯೋಪಾಧ್ಯಾಯ ಅವರ ವಿವಾಹದ ಸಂದರ್ಭದಲ್ಲಿ ತೆಗೆದಂತೆ ತೋರುತ್ತದೆ.
ಟ್ವಿಟರ್ ಸಿಇಒ ಆಗಿ ನೇಮಗೊಂಡ ಸುದ್ದಿ ಹೊರಬಿದ್ದ ತಕ್ಷಣ ಪರಾಗ್ ಅವರು ಟ್ವಿಟರ್ ಕಂಪೆನಿಗೆ ಕಳಿಸಿದ ಇಮೇಲ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ “ಸಾಮಾಜಿಕ ಮಾಧ್ಯಮ ಕಂಪೆನಿಯ ಸಿಇಒ ಆಗಿ ನೇಮಕಗೊಂಡಿದ್ದಕ್ಕೆ ಬಹಳ ಸಂತೋಷ ಹಾಗು ಹೆಮ್ಮೆಯೆನಿಸುತ್ತದೆ. ಇದಕ್ಕಾಗಿ ಜಾಕ್ ಡೋರ್ಸೆ ಮತ್ತು ಇಡೀ ತಂಡಕ್ಕೆ ಕೃತಜ್ನತೆಗಳು. ನಿಮ್ಮೆಲ್ಲರ ನಂಬಿಕೆ ಹಾಗೂ ಪ್ರೋತ್ಸಾಹಕ್ಕಾಗಿ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿಕೊಂಡಿದ್ದಾರೆ.
(Shreya Ghoshal says We were kids on that time about her tweet with Twitter CEO Parag Agarwal)